5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್
ಮೈಸೂರು

5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್

March 28, 2020

ಮೈಸೂರು, ಮಾ.28(SPN)-ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದ ಬಳಿ 500 ಕ್ಕೂ ಹೆಚ್ಚಿನ ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ ಉಚಿತ ನೀರು ಊಟ ಮಾಸ್ಕ್ ವಿತರಣೆ ಮಾಡಲಾಯಿತು.

ಗುಣಶೇಖರ್, ವಿಶ್ವ,ನಾಗಮಹದೇವ,ರಮೇಶ್,ಗುರು,ರಾಜು ಬಂಡೆಂಪಾ ಕಾಶೆಂಪೂರ್ ಮತ್ತಿತರರು ಉಪಸ್ಥಿತರಿದ್ದರು. ಎಲ್ಲರಿಗೂ ಆರೋಗ್ಯ ಅಧಿಕಾರಿಗಳನ್ನೂ ಕರೆಯಿಸಿ ಕೋವಿಡ್ -19ರ ಬಗ್ಗೆ ಜಾಗೃತಿ ಮೂಡಿಸಿ ಇನ್ನು ಮುಂದೆ ಬೀದಿಗಳಲ್ಲಿ ಊಟ ಕೊಡಲಾಗುವುದಿಲ್ಲ.ಜಿಲ್ಲಾಡಳಿತ,ಪಾಲಿಕೆ ಗುರುತಿಸಿದ ಗಂಜಿ ಕೇಂದ್ರಗಳಲ್ಲಿ ಊಟ ಕೊಡಲಾಗುವುದು ಎಂದು ಮನವರಿಕೆ ಮಾಡಿದರು.200ಕ್ಕೂ ಹೆಚ್ಚು ಜನರನ್ನು ನಂಜರಾಜಬಹದ್ದೂರ್ ಛತ್ರಕ್ಕೆ ಕರೆತಂದು ಸಾಮಾಜಿಕ ಅಂತರದ ಬಗ್ಗೆ ಮಾಹಿತಿ ತಿಳಿಸಲಾಯಿತು.ಜೊತೆಗೆ ನಿರಾಶ್ರಿತರಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು.

Translate »