ಮೈಸೂರಲ್ಲಿ ಸೋಮವಾರ 40 ಮಂದಿಗೆ ಸೋಂಕು; 53 ಮಂದಿ ಗುಣಮುಖ
ಮೈಸೂರು

ಮೈಸೂರಲ್ಲಿ ಸೋಮವಾರ 40 ಮಂದಿಗೆ ಸೋಂಕು; 53 ಮಂದಿ ಗುಣಮುಖ

December 22, 2020

ರಾಜ್ಯದಲ್ಲೂ ಸೋಂಕು ಇಳಿಮುಖ

ಮತ್ತೊಂದೆಡೆ ಎರಡನೇ ಅಲೆ ಭೀತಿ

ಮೈಸೂರು, ಡಿ.21(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ ಕೊರೊನಾ ದೃಢಪಟ್ಟವರ ಸಂಖ್ಯೆಗಿಂತ ಹೆಚ್ಚು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಮವಾರ 40 ಮಂದಿಗೆ ಸೋಂಕು ದೃಢಪಟ್ಟಿದ್ದು, 53 ಮಂದಿ ಸೋಂಕು ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಸೋಂಕು ಬಾಧಿತರಲ್ಲಿ (51,847) 50,426 ಮಂದಿ ಗುಣಮುಖರಾದಂತಾಗಿದೆ. ಸದ್ಯ 6 ದಿನಗಳಿಂದ ಸೋಂಕಿತರ ಸಾವು ಸಂಭವಿಸಿಲ್ಲ. ಗುಣಮುಖವಾಗಿ ಡಿಸ್ಚಾರ್ಜ್ ಆದವರು ಹಾಗೂ ಒಟ್ಟು ಸಾವಿನ ಸಂಖ್ಯೆ(1,006) ಹೊರತುಪಡಿಸಿ ಜಿಲ್ಲೆಯಲ್ಲಿನ್ನು 415 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಅವರೆಲ್ಲಾ ಹೋಂ ಐಸೊಲೇಷನ್‍ನಲ್ಲಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲೂ ತಗ್ಗಿದ ಸೋಂಕು: ರಾಜ್ಯದಲ್ಲಿ ಸೋಮವಾರ 772 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಬಳ್ಳಾರಿ 36, ಬೆಳಗಾವಿ 13, ಬೆಂಗಳೂರು ಗ್ರಾಮಾಂ ತರ 19, ಬೆಂಗಳೂರು ನಗರ 363, ಬೀದರ್ 8, ಚಾಮರಾಜನಗರ 15, ಚಿಕ್ಕಬಳ್ಳಾ ಪುರ 26, ಚಿಕ್ಕಮಗಳೂರು 4, ಚಿತ್ರದುರ್ಗ 19, ದಕ್ಷಿಣಕನ್ನಡ 24, ದಾವಣಗೆರೆ 7, ಧಾರವಾಡ 15, ಗದಗ 5, ಹಾಸನ 32, ಹಾವೇರಿ 4, ಕಲಬುರಗಿ 10, ಕೊಡಗು 13, ಕೋಲಾರ 31, ಕೊಪ್ಪಳ 5, ಮಂಡ್ಯ 24, ಮೈಸೂರು 40, ರಾಯಚೂರು 4, ರಾಮನಗರ 5, ಶಿವಮೊಗ್ಗ 9, ತುಮಕೂರು 10, ಉಡುಪಿ 3, ಉತ್ತರಕನ್ನಡ 10, ವಿಜಯಪುರ 15 ಹಾಗೂ ಯಾದಗಿರಿ ಜಿಲ್ಲೆಯ 3 ಪ್ರಕರಣಗಳಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಂದೂ ಪ್ರಕರಣ ವರದಿಯಾಗಿಲ್ಲ. ಹಾಗೆಯೇ 11 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿದಿರುವುದು ಗಮನಾರ್ಹ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,10,241ಕ್ಕೆ ಏರಿಕೆಯಾಗಿದ್ದು, ಸೋಮ ವಾರ ಡಿಸ್ಚಾರ್ಜ್ ಆದ 1,261 ಮಂದಿ ಸೇರಿ ಈವರೆಗೆ 8,84,205 ಗುಣಮುಖ ರಾಗಿದ್ದಾರೆ. ಚಿಕಿತ್ಸೆ ಫಲಿಸದೆ 7 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 12,016ಕ್ಕೆ ಹೆಚ್ಚಿದೆ. ಇನ್ನು 14,001 ಸಕ್ರಿಯ ಪ್ರಕರಣಗಳಿವೆ.

ಮತ್ತೊಂದು ಅಲೆ ಎಚ್ಚರಿಕೆ: ಕೋವಿಡ್-19 ಸೋಂಕು ಕ್ಷೀಣಿಸುವ ಸಂದರ್ಭದಲ್ಲೇ ಸೋಂಕಿನ ಹೊಸ ಪ್ರಬೇಧ ವಕ್ಕರಿಸುವ ಭೀತಿ ಎದುರಾಗಿದೆ. ಇಂಗ್ಲೆಂಡ್‍ನಲ್ಲಿ ಬಾಧಿಸು ತ್ತಿರುವ ಹೊಸ ಪ್ರಭೇದ ಮತ್ತೆ ಆತಂಕಕ್ಕೆ ದೂಡಿದೆ. ಇಂಗ್ಲೆಂಡ್‍ನಿಂದ ಕರ್ನಾಟಕಕ್ಕೂ ನೂರಾರು ಮಂದಿ ಬಂದಿದ್ದು, ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.

Translate »