ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ‘ಎಸ್.ವಿ.ನಾರಾಯಣರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ
ಮೈಸೂರು

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ‘ಎಸ್.ವಿ.ನಾರಾಯಣರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

December 22, 2020

ಮೈಸೂರು, ಡಿ.21(ಎಂಕೆ)- ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಇಂದು ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್ ವತಿಯಿಂದ ‘ಎಸ್.ವಿ. ನಾರಾಯಣ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ನಗರದ ಸರಸ್ವತಿಪುರಂನಲ್ಲಿರುವ ಅವರ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಹಿಂದೂಸ್ಥಾನಿ ಸಂಗೀತ ವಿದ್ವಾಂಸ ಡಾ.ಇಂದೂಧರ ನಿರೋಧಿ, ಖ್ಯಾತ ವಯೋಲಿನ್ ವಾದಕ ಮೈಸೂರು ಮಂಜುನಾಥ್ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾ ಡಿದ ಪಂಡಿತ್ ರಾಜೀವ್ ತಾರಾನಾಥ್ ಅವರು, ಮೈಸೂರಿಗೂ ನನಗೂ ವಿಶಿಷ್ಟ ನಂಟಿದೆ. ದುನಿಯಾದೊಳಗೆ ಮೈಸೂರಿ ನಂತಹ ಊರಿಲ್ಲ. ಇಂತಹ ಒಳ್ಳೆಯ ವಾತಾ ವರಣವಿರುವ ಸ್ಥಳದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ದೊಡ್ಡಮಟ್ಟದಲ್ಲಿ ಬೆಳೆಯ ಬೇಕು ಎಂದು ಆಶಯ ವ್ಯಕ್ತಪಡಿಸಿದರು.

ನಮ್ಮಮ್ಮ ಕ್ರಾಂತಿಕಾರಿ ಮಹಿಳೆಯಾಗಿದ್ದು, ಲೈಂಗಿಕ ಶಿಕ್ಷಣ ಕುರಿತು ಅಂದಿನ ದಿನ ಗಳಲ್ಲೇ ಇಂಗ್ಲಿಷ್‍ನಲ್ಲಿ ಪುಸ್ತಕ ಬರೆದಿದ್ದರು. ತಂದೆ ತಬಲ ವಿದ್ವಾಂಸರಾಗಿದ್ದು, ನನಗೂ ತಬಲ ಬಾರಿಸುವುದನ್ನು ಹೇಳಿಕೊಟ್ಟಿ ದ್ದರು. ಆದರೆ, ತಬಲ ಬಾರಿಸುವುದರಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಸರೋದ್ ಸಂಗೀತ ವಾದನ ಕಾರ್ಯಕ್ರಮ ನೋಡಿದ್ದು, ನಾನು ಅವ ರಂತೆ ಸರೋದ್ ನುಡಿಸಬೇಕು ಎಂಬುದು ಮನಸ್ಸಿಗೆ ಬಂದದ್ದು ಮತ್ತು ಸರೋದ್‍ನ ಹುಚ್ಚು ಹಿಡಿದದ್ದು. ಒಮ್ಮೊಮ್ಮೆ ನನ್ನ ಸೈಕಲ್ ಅನ್ನು ಸರೋದ್ ಎಂದು ತಬ್ಬಿಕೊಂಡು ತಿರುಗಾಡುತ್ತಿದೆ ಎಂದು ಸ್ಮರಿಸಿದರು.

ಆ ವೇಳೆ ರಾಮಚಂದ್ರ ಶಾಸ್ತ್ರಿಗಳೆಂಬ ನನ್ನ ಶಿಕ್ಷಕರು ಏನಾಗಿದೆ ನಿನಗೆ ಎಂದು ಕೇಳಿದ್ದರಲ್ಲದೆ. ನನ್ನ ಸರೋದ್ ಹುಚ್ಚುತನ ಕಂಡು ಒಳ್ಳೆಯದಾಗಲಿ ಎಂದು ಹಾರೈಸಿ ದ್ದರು. ಅವರ ಹಾರೈಕೆ ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನನಗೆ ಸಂದಿರುವ ಪ್ರಶಸ್ತಿ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಿಗೆ ಸಲ್ಲಬೇಕು. ಅಕ್ಬರ್ ಖಾನ್ ಏನು ಎಂದು ಯಾರಾದರು ನನ್ನನ್ನು ಕೇಳಿದರೆ ಅವರು ದೇವರು ಎಂದು ಹೇಳುತ್ತೇನೆ ಎಂದು ಗುಣಗಾನ ಮಾಡಿದರು.

ವಯೋಲಿನ್ ವಾದಕ ಮೈಸೂರು ಮಂಜುನಾಥ್ ಮಾತನಾಡಿ, ಮುಖಕ್ಕೆ ಹಾಕಿರುವ ಮಾಸ್ಕ್ ತೆಗೆದುಹಾಕಬಹುದು ಆದರೆ, ನಮ್ಮ ಹೃದಯ, ಭಾವನೆ ಮತ್ತು ಮನಸ್ಸಿಗೆ ಹಾಕಿ ರುವ ಮಾಸ್ಕ್ ತೆಗೆಯಲು ಸಂಗೀತಬೇಕು. ಹಾಗಾಗಿ ಸಂಗೀತಕ್ಕೆ ವಿಶ್ವದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಅದರಲ್ಲೂ ಭಾರತೀಯ ಸಂಗೀತ ಪ್ರಕಾರಗಳಿಗೆ ಪ್ರಪಂಚದಲ್ಲಿ ಮೊದಲ ಮನ್ನಣೆ ನೀಡಲಾಗಿದೆ ಎಂದರು.

ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಎಸ್.ವಿ.ನಾರಾಯಣ ಸ್ವಾಮಿ ರಾವ್ ಅವರು, ಟ್ರಸ್ಟ್ ಸ್ಥಾಪಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಘಟಾನುಘಟಿ ಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದ್ದಾರೆ. ಅದೇ ರೀತಿಯಲ್ಲಿ ವಿಶ್ವಮಟ್ಟದಲ್ಲಿ ಸಂಗೀತ ಸಾಧನೆ ಮಾಡಿದ ಖ್ಯಾತ ಸರೋದ್ ವಾದಕ ರಾದ ಪಂಡಿತ್ ರಾಜೀವ್ ತಾರಾನಾಥ್ ಪ್ರಶಸ್ತಿ ನೀಡುತ್ತಿರುವುದು ಮೈಸೂರು ಸಂಗೀತ ವಲಯದಲ್ಲಿನ ಎಲ್ಲರಿಗೂ ಸಂತೋಷ ನ್ನುಂಟು ಮಾಡಿದೆ ಎಂದರು.

ವಾದ್ಯ ಪ್ರಾಕಾರಗಳಲ್ಲಿ ಸರೋದ್ ನುಡಿ ಸುವುದೇ ಕಷ್ಟ. ಸಣ್ಣ ವ್ಯತ್ಯಾಸವಾದರೂ ಅಪಸ್ವರ ಉಂಟಾಗುತ್ತದೆ. ಅಂತಹ ವಾದನ ದಲ್ಲಿ ಇಂಪಾಗಿ ನುಡಿಸುವುದು ಶ್ಲಾಘನೀಯ. ಪಂಡಿತ್ ರಾಜೀವ್ ತಾರಾನಾಥ್ ಅವರ ಸಂಗೀತ ಭಾಷಾತೀತ, ಧರ್ಮಾತೀತ ವಾದುದು. ಅವರ ಸಂಗೀತದಲ್ಲಿ ಭಾವನೆಗಳು ಅಡಕವಾಗಿರುತ್ತವೆ. ಮೈಸೂರನ್ನು ಸಾಂಸ್ಕøತಿಕ ರಾಜಧಾನಿ ಎನ್ನುವುದಕ್ಕೆ ಇಂತಹ ಮಹಾನ್ ಸಾಧಕರ ಕೊಡುಗೆಯೇ ಕಾರಣ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್‍ನ ಟ್ರಸ್ಟಿಯೂ ಆದ ಹಿರಿಯ ನಟ ಶಿವರಾಂ, ರಾಮ್‍ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Translate »