ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಬಿ. ಸೋಮೇಗೌಡ ಅವಿರೋಧ ಆಯ್ಕೆ
ಮೈಸೂರು

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಬಿ. ಸೋಮೇಗೌಡ ಅವಿರೋಧ ಆಯ್ಕೆ

December 22, 2020

ಮೈಸೂರು,ಡಿ.21(ಎಸ್‍ಪಿಎನ್)- ಮೈಸೂರು ದಕ್ಷಿಣ ವಲಯದ ಕನಕಗಿರಿ ಶಾಲೆಯ ಶಿಕ್ಷಕ ಕೆ.ಬಿ.ಸೋಮೇಗೌಡ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೈಸೂರು ಜಿಲ್ಲಾಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮೈಸೂರು ತಾಲೂಕಿನ ಎಂಸಿ ಹುಂಡಿ ಶಾಲೆಯ ಸುಬ್ರಮಣ್ಯ, ಗೆಜ್ಜಗಳ್ಳಿ ಶಾಲೆಯ ಸಿ.ಎಸ್. ಮಮತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ ಎಂದು ಜಿಲ್ಲಾ ಚುನಾವಣಾ ಧಿಕಾರಿ ಘೋಷಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ನಂಜನ ಗೂಡಿನ ಮುದ್ದಹಳ್ಳಿ ಶಾಲೆಯ ಎಚ್.ಎಸ್. ಮಹೇಶ್, ಖಜಾಂಚಿಯಾಗಿ ಮಹಾದೇವ, ಸಂಘಟನಾ ಕಾರ್ಯದರ್ಶಿಯಾಗಿ ಗುಂಗ್ರಾಲ್ ಛತ್ರ ಶಾಲೆಯ ಪಿ.ಶಾಂತರಾಜು, ಕೆ.ಆರ್.ನಗರದ ಜವರೇಗೌಡಕೊಪ್ಪಲು ಸರ್ಕಾರಿ ಶಾಲೆಯ ಕೆ.ಪಿ. ಭಾರತಿ ಮತ್ತು ತಿ.ನರಸೀಪುರದ ಸೋಸಲೆ ಶಾಲೆಯ ಎಂ.ಮಲ್ಲಣ್ಣ ಸಹ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ಕೆ.ಬಿ.ಸೋಮೇಗೌಡ ಅವರು ಈ ಬಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಕಳೆದ ಬಾರಿ ಅಧ್ಯಕ್ಷರಾಗಿ ಎಚ್.ಎಸ್.ಮಹೇಶ್ ಅವರು ಈ ಬಾರಿ ಪ್ರಧಾನ ಕಾರ್ಯದರ್ಶಿಯಾಗಿ ಅವಿ ರೋಧವಾಗಿ ಆಯ್ಕೆಯಾಗಿರುವುದು ವಿಶೇಷ. ಉಳಿದಂತೆ ಸಹ ಕಾರ್ಯದರ್ಶಿ ಹುದ್ದೆಗೆ ಇಬ್ಬರು ಸ್ಪರ್ಧಿಸಿದ್ದು, ಇಬ್ಬರಲ್ಲಿ ಯಾರೊ ಬ್ಬರು ನಾಮಪತ್ರ ಹಿಂಪಡೆಯದ ಕಾರಣ ಆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಜಿಲ್ಲಾ ಘಟಕದ 9 ಪದಾಧಿಕಾರಿಗಳ ಸ್ಥಾನಕ್ಕೆ ತಾಲೂಕು ಘಟಕಕ್ಕೆ ಆಯ್ಕೆಯಾದ 25 ಮಂದಿ ನಿರ್ದೇಶಕರು ನಾಮಪತ್ರ ಸಲ್ಲಿಸಿದ್ದರು. ಚುನಾ ವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 15 ಮಂದಿ ನಾಮ ಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಸೇರಿದಂತೆ 8 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಎನ್‍ಟಿಎಂಎಸ್ ಶಾಲಾ ಆವರಣ ದಲ್ಲಿ ಚುನಾವಣಾ ಪಕ್ರಿಯೆ ನಡೆದಿದ್ದು, ಜಿಲ್ಲಾ ಚುನಾವಣಾಧಿಕಾರಿಯಾಗಿ ಡಿ.ಎಂ.ಸುಬ್ಬೇ ಗೌಡ, ಉಪಚುನಾವಣಾಧಿಕಾರಿಯಾಗಿ ಜಿ.ಎನ್.ಶಿವಣ್ಣ ಕಾರ್ಯನಿರ್ವಹಿಸಿದರು. ಜಿಲ್ಲಾ ಘಟಕದ ಪದಾಧಿಕಾರಿಗಳಾಗಿ ಅವಿ ರೋಧವಾಗಿ ಆಯ್ಕೆಯಾದವರನ್ನು ಮೈಸೂರು ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾ ಧ್ಯಕ್ಷ ಮಾಲಂಗಿ ಸುರೇಶ್, ಗುರುಸ್ವಾಮಿ, ಮಾಲೇಗೌಡ, ರೇವಣ್ಣ ಅಭಿನಂದಿಸಿದರು.

Translate »