ಖ್ಯಾತ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್‍ರಿಗೆ ಹಂಪಿ ಕನ್ನಡ ವಿವಿಯಿಂದ `ನಾಡೋಜ’ ಗೌರವ ಪದವಿ ಪ್ರದಾನ
ಮೈಸೂರು

ಖ್ಯಾತ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್‍ರಿಗೆ ಹಂಪಿ ಕನ್ನಡ ವಿವಿಯಿಂದ `ನಾಡೋಜ’ ಗೌರವ ಪದವಿ ಪ್ರದಾನ

May 30, 2018

ಮೈಸೂರು: ಅಂತಾರಾಷ್ಟ್ರೀಯ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲ ಯವು ಸೋಮವಾರ ಮೈಸೂರಿನ ಅವರ ನಿವಾಸದಲ್ಲಿ `ನಾಡೋಜ’ ಪದವಿ ನೀಡಿ, ಗೌರವಿಸಿತು. ಮೈಸೂರಿನ ಸರಸ್ವತಿ ಪುರಂನಲ್ಲಿರುವ ಪಂಡಿತ್ ರಾಜೀವ್ ತಾರಾನಾಥ್ ಮನೆಯ ಮುಂದೆ ಇಂದು ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾ ನಿಲಯದ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿ ಅವರು ಪಂಡಿತ್ ಡಾ.ರಾಜೀವ್ ತಾರಾನಾಥ್ ಅವರಿಗೆ ನಾಡೋಜ ಪದವಿ ಪ್ರದಾನ ಮಾಡಿದರು. ಈ ವೇಳೆ ಹಂಪಿ ಕನ್ನಡ ವಿವಿ ಕುಲಸಚಿವ ಡಾ.ಡಿ. ಪಾಂಡು ರಂಗ ಬಾಬು, ಅಧ್ಯಯನಾಂಗ

ನಿರ್ದೇಶಕ ಡಾ.ಶಿವಾನಂದ ಎಸ್.ವಿರಕ್ತಮಠ, ಲಲಿತ ಕಲೆಗಳ ನಿಕಾಯದ ಡೀನ್ ಡಾ.ಅಶೋಕ್ ಕುಮಾರ ರಂಜೇರೆ, ಸಮಾಜವಿಜ್ಞಾನಗಳ ನಿಕಾಯದ ಡೀನ್ ಡಾ.ಮಂಜುನಾಥ ಬೇವಿನಕಟ್ಟಿ ಅವರೊಂದಿಗೆ ಅಲ್ಲಿನ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಮೈಸೂರಿನ ಪ್ರೊ.ಎನ್.ಎಸ್.ರಂಗ ನಾಥ್, ಡಾ.ಜಿ.ಎನ್. ಎಂ.ದೀಕ್ಷಿತ್, ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ರಂಗಕರ್ಮಿ ಎನ್.ಎಸ್. ಗೋಪಿನಾಥ್, ಪ್ರೊ.ವಿ.ಕೆ. ನಟರಾಜ್, ಹಿಮಾಂಶು, ಪ್ರೊ.ಡಿ.ಆರ್.ಶಂಕರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಇನ್ನಿತರರು ಹಾಜರಿದ್ದರು.

ಸಂಗೀತ ಲೋಕದ ಧೃವತಾರೆ ಪಂಡಿತ್ ಡಾ.ರಾಜೀವ್ ತಾರಾನಾಥ್

ವಿಶ್ವದ ಶ್ರೇಷ್ಠ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್ ಸಂಗೀತ ಲೋಕದ ಧ್ರುವತಾರೆ. ಅವರು ಜನಿಸಿದ್ದು ಅ.17, 1932. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು. ಆರಂಭಿಕ ಪಾಠಗಳನ್ನು ಮನೆಯಲ್ಲಿಯೇ ಕಲಿತ ಅವರು 9ನೇ ವರ್ಷದವರಿದ್ದಾಗಲೇ ಪ್ರಥಮ ಸಂಗೀತ ಕಚೇರಿ ನಡೆಸಿಕೊಟ್ಟ ಕೀರ್ತಿ ಅವರದ್ದು, ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣ ಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು.

ಸಾಹಿತ್ಯದಲ್ಲಿ ಪಿಎಚ್‍ಡಿ ಪದವಿ ಪಡೆದರೂ ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕಲ್ಕತ್ತೆಗೆ ತೆರಳಿ, ಅಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನ್‍ರ ಶಿಷ್ಯರಾದರು. 2009ರ ಅಲಿ ಅಕ್ಬರ್ ಖಾನ್‍ರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಕ್ಬರ್ ಅಲಿ ಖಾನ್ ಅವರಲ್ಲದೆ ಪಂಡಿತ್

ರವಿಶಂಕರ್, ಅನ್ನ ಪೂರ್ಣಾದೇವಿ, ಪಂಡಿತ್ ನಿಖಿಲ್ಬ್ಯಾ ನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನ್‍ರ ಮಾರ್ಗದರ್ಶನ ಪಡೆದುಕೊಂಡರು.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾವಿಭಾಗದ ಮುಖ್ಯಸ್ಥರಾಗಿ 1995ರಿಂದ 2005ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಾಜೀವ್ ತಾರಾನಾಥರು ಇದೀಗ ಮೈಸೂರಿನಲ್ಲಿ ವಾಸಿಸುತ್ತಿದ್ದು, ತಮ್ಮ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆಯುತ್ತಿದ್ದಾರೆ.

ಹೃದಯದ ತಂತಿ ಮೀಟುವ ಸಂಗೀತ: ರಾಜೀವ್ ತಾರಾನಾಥರದ್ದು ಹೃದಯದ ತಂತಿಗಳನ್ನು ಮೀಟುವ ಸಂಗೀತ, ಅವರು ಅದೆಷ್ಟು ಮೋಹಕ ಚೆಲುವನ್ನು ತಮ್ಮ ‘ಸ್ವರ’ ಮತ್ತು ದನಿಗಳಲ್ಲಿ ಬಿತ್ತರಿಸುತ್ತಾರೆ! ಅವರ ಸಂಗೀತದ ಪ್ರತೀ ಸ್ತರವೂ ಮೋಹಕತೆಯ ಸುದೀರ್ಘ ಸುಮಧುರತೆಯ ಅನುಭವವನ್ನು ಉಳಿಸುತ್ತ ಮುನ್ನಡೆಯುವಂತದ್ದು.. ಅವರ ಸಂಗೀತವು ಆಧ್ಯಾತ್ಮಿಕ ಮತ್ತು ಮನೋಭಾವದ ಸಂಯೋಗದ ಲಕ್ಷಣಗಳುಳ್ಳಂತಹ ಔನತ್ಯವನ್ನು ಸ್ಪುರಿಸುವಂತಹವು. ಅಂತರಾತ್ಮದ ಹುಡುಕಾಟವನ್ನು ಪ್ರಾತಿನಿಧಿಕವಾಗಿ ತಲುಪುವ ಪ್ರಾರ್ಥನಾ ರೂಪವಾಗಿ ಪ್ರಾರಂಭಗೊಳ್ಳುವ ಅವರ ಸಂಗೀತ ನಾದ ಭವ್ಯತೆಗೆ ತೆರೆದುಕೊಳ್ಳುವ ರೀತಿ ಆಸಾಮಾನ್ಯವಾದುದು. ಹೀಗೆ ಅವರ ಸಂಗೀತ ವಿಶ್ವಸಮುದಾಯ ವನ್ನು ಸಂಗೀತದ ಆಧ್ಯಾತ್ಮದ ಎಳೆಯಿಂದ ನಾದವೈಭವದ ಅನಂತತೆಯವರೆಗೆ ವ್ಯಾಪಿಸಿಕೊಂಡಿದೆ.

ಆಳವಾದ ಜ್ಞಾನ: ರಾಜೀವ್ ತಾರಾನಾಥರು ತಾವು ಹೊರಹೊಮ್ಮಿಸುವ ರಾಗಗಳ ಕುರಿತಾಗಿ ಹೊಂದಿರುವ ಆಳವಾದ ಜ್ಞಾನ, ಸ್ವರ ಮಾಧುರ್ಯ ಮತ್ತು ಸಂಗೀತ ಸಾಮಥ್ರ್ಯಕ್ಕೆ ಎಲ್ಲೆಡೆ ಗೌರವಿಸಲ್ಪಡುತ್ತಿರುವವರು. ತಾಂತ್ರಿಕ ಕೌಶಲ್ಯ, ಕಲ್ಪನಾ ಸಾಮಥ್ರ್ಯ, ಅನುಭೂತಿಯ ಸೌಂದರ್ಯ ಇವೆಲ್ಲಾ ಅವರ ಸೃಜನೆಗಳಲ್ಲಿ ಮೇಳೈಸಿವೆ.

ವಿಶ್ವದೆಲ್ಲೆಡೆ ಸಂಗೀತ: ಭಾರತ ಮತ್ತು ವಿದೇಶಗಳಲ್ಲೆಡೆ ರಾಜೀವ್ ತಾರಾನಾಥರ ಸಂಗೀತ ಕಾರ್ಯಕ್ರಮಗಳು ನಡೆದಿದ್ದು, ಆಸ್ಟ್ರೇಲಿಯಾ, ಯೂರೋಪ್, ಯೆಮೆನ್, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲೆಲ್ಲಾ ಅವರ ಅಪಾರ ಅಭಿಮಾನಿ ಬಳಗ ಅವರನ್ನು ಹಿಂಬಾಲಿಸಿದೆ.

Translate »