ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ಸಂಗ್ರಹ
ಮೈಸೂರು

ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ಸಂಗ್ರಹ

May 30, 2018

ಮೈಸೂರು:  ತನ್ನ ವ್ಯಾಪ್ತಿಯಲ್ಲಿ ಬರುವ ಮಾಲ್‍ಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್‍ಗಳಲ್ಲಿ ಗ್ರಾಹಕರ ವಾಹನ ನಿಲುಗಡೆಗೆ ಶುಲ್ಕ ಪಾವತಿಸುವಂತಿಲ್ಲ ಎಂದು ನೀಡಿದ್ದ ಮೈಸೂರು ಮಹಾನಗರ ಪಾಲಿಕೆ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಬಿಎಂ ಹ್ಯಾಬಿಟೆಟ್ ಮಾಲ್ ಜಂಟಿ ಮಾಲೀಕ ದೀಪಕ್‍ಲುಲ್ಲಾ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಯಾವುದೇ ನೋಟಿಸ್ ನೀಡದೆ ಮೈಸೂರು ಮಹಾ ನಗರ ಪಾಲಿಕೆಯು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಎಲ್ಲಾ ಬಗೆಯ ವಾಣ ಜ್ಯ ಕೇಂದ್ರಗಳಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದೆ ಎಂದು 2017ರ ನವೆಂಬರ್ 20ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾ ಲಯವು 2018ರ ಏಪ್ರಿಲ್ 13ರಂದು ಪಾಲಿಕೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದರು. ನ್ಯಾಯಾ ಲಯದ ಆದೇಶದಂತೆ ನಾವು ಏಪ್ರಿಲ್ 14ರಿಂದ ಬಿಎಂ ಹ್ಯಾಬಿಟೆಟ್ ಮಾಲ್‍ನಲ್ಲಿ ಗ್ರಾಹಕರಿಂದ ವಾಹನ ಶುಲ್ಕ ವಸೂಲಾತಿ ಪ್ರಕ್ರಿಯೆಯನ್ನು ಮುಂದು ವರೆಸಿದ್ದೇವೆ. ನ್ಯಾಯಾಲಯದ ತಡೆಯಾಜ್ಞೆಯು ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಪಿಂಗ್ ಕಾಂಪ್ಲೆಕ್ಸ್ ಗಳಿಗೂ ಅನ್ವಯಿಸುತ್ತದೆ ಎಂದರು.

ಪಾಲಿಕೆ ನೀಡಿದ್ದ ಆದೇಶವನ್ನು ಗೌರವಿಸಿ ವಾಹನ ನಿಲುಗಡೆ ಶುಲ್ಕ ಸಂಗ್ರಹವನ್ನು ಸ್ಥಗಿತಗೊಳಿಸಿದ್ದೆವು. ಆ ಸಮಯದಲ್ಲಿ ಎಲ್ಲಾ ಮಾಲ್‍ಗಳ ಮಾಲೀಕರು ಈ ಸಂಬಂಧ ಚರ್ಚಿಸಿ, ಮನವಿ ಮಾಡಲು ಪಾಲಿಕೆ ಕಮೀಷ್ನರ್ ಭೇಟಿಗೆ ಪ್ರಯತ್ನಿಸಿದೆವಾ ದರೂ ಅವರು ಲಭ್ಯವಾಗದ ಕಾರಣ ಅನಿ ವಾರ್ಯವಾಗಿ 2018ರ ಜನವರಿ 16ರಂದು ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಹಾಕಬೇಕಾ ಯಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾ ಲಯವು ಎರಡೂ ಕಡೆಯಿಂದ ವಾದ-ಪ್ರತಿವಾದಗಳನ್ನು ಆಲಿಸಿ, ಸಾಧಕ-ಬಾಧಕ ಗಳ ಅವಲೋಕನ ಮಾಡಿದ ನಂತರ ಪಾರ್ಕಿಂಗ್ ಶುಲ್ಕ ಸಂಗ್ರಹ ನಿಷೇಧಿಸಿ ಪಾಲಿಕೆ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ದೀಪಕ್ ನುಡಿದರು. ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳ ನಗರಗಳಲ್ಲಿನ ಮಾಲ್‍ಗಳಲ್ಲಿ ವಾಹನ ನಿಲು ಗಡೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪಾರ್ಕಿಂಗ್ ಉಚಿತ ಮಾಡಿದಲ್ಲಿ ಹುಣ ಸೂರು, ಮಡಿಕೇರಿ,

ಕೆಆರ್ ನಗರಗಳಂತಹ ಸ್ಥಳಗಳಲ್ಲಿ ಕೆಲಸ ಮಾಡುವವರು ತಮ್ಮ ವಾಹನಗಳನ್ನು ಮಾಲ್‍ಗಳಲ್ಲಿ ಬೆಳಿಗ್ಗೆಯೇ ನಿಲ್ಲಿಸಿ ಹೋಗುತ್ತಾರೆ. ನಮ್ಮ ನಿಜವಾದ ಗ್ರಾಹಕರ ವಾಹನಗಳ ನಿಲುಗಡೆಗೆ ಸ್ಥಳಾವಕಾಶವೇ ಇರುವುದಿಲ್ಲ. ಇದರಿಂದ ಸಾರ್ವಜನಿಕರು ಮಾಲ್‍ಗಳ ಅಮೂಲ್ಯ ಹಾಗೂ ಸುರಕ್ಷಿತ ಸ್ಥಳವನ್ನು ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಮಾಲ್‍ಗಳಲ್ಲಿ ವಿದ್ಯುತ್, ಸಿಬ್ಬಂದಿ, ಸಿಸಿ ಟಿವಿ ಕ್ಯಾಮರಾ, ಸೆಕ್ಯೂರಿಟಿ ಯಂತಹ ಮೂಲ ಸೌಲಭ್ಯಗಳನ್ನು ಒದಗಿಸಿರುವ ಜೊತೆಗೆ ನಾವು ಪಾಲಿಕೆಗೆ ಆಸ್ತಿ ತೆರಿಗೆ ಮತ್ತು ಶೇ.18ರಷ್ಟು ಜಿಎಸ್‍ಟಿಯನ್ನು ಪಾವತಿಸುವುದರಿಂದ ನಮಗೆ ಹೆಚ್ಚು ವೆಚ್ಚ ತಗಲುವ ಕಾರಣ ಪಾರ್ಕಿಂಗ್ ಶುಲ್ಕ ವಿಧಿಸುವುದು ಅನಿವಾರ್ಯ ಎಂದು ದೀಪಕ್ ಲುಲ್ಲಾ ಕಾರಣ ನೀಡಿದರು. ಕೋರ್ಟ್ ನೀಡಿದ ತಡೆಯಾಜ್ಞೆ ಪ್ರತಿಯನ್ನು ನಗರ ಪಾಲಿಕೆ ವಲಯ-4ರ ಅಸಿಸ್ಟೆಂಟ್ ಕಮೀಷ್ನರ್‍ಗೆ ತಲುಪಿಸಿದ್ದಾಗ್ಯೂ ಪಾಲಿಕೆ ಅಧಿಕಾರಿಗಳು ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳುತ್ತಿರುವುದು ನಮಗೆ ಅಚ್ಚರಿ ಮೂಡಿಸಿದೆ ಎಂದು ದೀಪಕ್ ನುಡಿದರು.

ಮೊದಲ 3 ಗಂಟೆ ಅವಧಿಗೆ ದ್ವಿಚಕ್ರ ವಾಹನಗಳಿಗೆ 20 ರೂ., ಕಾರುಗಳಿಗೆ 40 ರೂ. ನಂತೆ ಬಿಎಂ ಹ್ಯಾಬಿಟೆಟ್ ಮಾಲ್‍ನಲ್ಲಿ 2011ರಿಂದಲೂ ವಾಹನ ನಿಲುಗಡೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದ್ದು, ಈವರೆಗೆ ದರ ಏರಿಕೆ ಮಾಡಿಲ್ಲ ಎಂದ ಅವರು, ನ್ಯಾಯಾಲಯದ ಮುಂದಿನ ಆದೇಶ ನೀಡುವವರೆಗೂ ನಾವು ವಾಹನ ನಿಲುಗಡೆ ಶುಲ್ಕ ಸಂಗ್ರಹಿಸುತ್ತೇವೆ. ಪಾಲಿಕೆ ಅನಗತ್ಯ ಗೊಂದಲ ಉಂಟು ಮಾಡಬಾರದು ಎಂದರು. ಇದೇ ವೇಳೆ ಮಾತನಾಡಿದ ಮಾಲ್ ಆಫ್ ಮೈಸೂರ್ ಮ್ಯಾನೇಜರ್ ಸಿ.ಪಿ.ಮೇದಪ್ಪ ಅವರು, ಮುನಿಸಿಪಲ್ ಕಾರ್ಪೊರೇಷನ್ ನಿಯಮವು ವಾಣ ಜ್ಯ ಕೇಂದ್ರಗಳ ನೆಲ ಮಾಳಿಗೆಯಲ್ಲಿ ಯಾವುದೇ ವಾಣ ಜ್ಯ ವಹಿವಾಟು ಮಾಡಬಾರದು. ಅಲ್ಲಿ ತನ್ನ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸುತ್ತದೆಯಾದರೂ, ಶುಲ್ಕ ವಸೂಲಿ ಮಾಡಬಾರದೆಂಬ ನಿರ್ಬಂದವಿಲ್ಲ ಎಂದರು. ನಮ್ಮಲ್ಲೂ ಉಚಿತ ಪಾರ್ಕಿಂಗ್ ನೀಡಿದರೆ ರೇಸ್‍ಕೋರ್ಸ್, ಮೃಗಾಲಯ, ವಸ್ತು ಪ್ರದರ್ಶನಕ್ಕೆ ಬರುವವರೆಲ್ಲಾ ತಮ್ಮ ವಾಹನಗಳನ್ನು ಮಾಲ್ ಆಫ್ ಮೈಸೂರ್‍ನ ಪಾರ್ಕಿಂಗ್ ಲಾಟ್‍ನಲ್ಲಿ ನಿಲ್ಲಿಸಿ ಹೋಗುತ್ತಾರೆ. ಇದರಿಂದ ನಮ್ಮ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ಮೇದಪ್ಪ ನುಡಿದರು.

ಉಚಿತ ಪಾರ್ಕಿಂಗ್: ಬಹುತೇಕ ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ಸಂಗ್ರಹಿಸುತ್ತಿದ್ದರೂ, ದಿ ಫೋರಂ ಸೆಂಟರ್ ಸಿಟಿ ಮಾಲ್‍ನಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿಲ್ಲ ಎಂದು ಫೋರಂ ಸೆಂಟರ್ ಸಿಟಿ ಮಾಲ್ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಷನ್‍ನ ಸೀನಿಯರ್ ಎಕ್ಸಿಕ್ಯೂಟಿವ್ ಕುತೇಜ ಅಫ್ಜಲ್ ಅವರು ತಿಳಿಸಿದ್ದಾರೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಮಾಲ್‍ಗೆ ಬರುವ ಗ್ರಾಹಕರ ವಾಹನ ನಿಲುಗಡೆ ವೇಳೆ ಟೋಕನ್ ನೀಡಿ, ಹೋಗುವಾಗ ವಾಪಸ್ ತೆಗೆದುಕೊಳ್ಳಲಾಗುತ್ತದೆಯೇ ಹೊರತು, ಶುಲ್ಕ ವಸೂಲಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಎಂ ಹ್ಯಾಬಿಟಟ್ ಮಾಲ್‍ನ ಜಯಂತ್ ಹಾಗೂ ವಿನಯ್ ಅವರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಕೋರ್ಟ್ ಆದೇಶ ಪ್ರತಿ ಕೈ ಸೇರಿದೆ

ಮಾಲ್‍ಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ನಿಷೇಧಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಪ್ರತಿ ಕೈ ಸೇರಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಮಾಲ್‍ಗಳ ಮಾಲೀಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಮೀಷ್ನರ್, ಮುಂದೆ ನಡೆಯಲಿರುವ ವಿಚಾರಣೆ ವೇಳೆ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆಯ ಅಂಶಗಳನ್ನು ದಾಖಲೆಗಳ ಸಮೇತ ವಕೀಲರ ಮೂಲಕ ನ್ಯಾಯಾ ಲಯದ ಗಮನಕ್ಕೆ ತರುವಂತೆ ಪಾಲಿಕ ನಗರ ಯೋಜನಾ ಶಾಖೆ ಜಂಟಿ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದೇನೆ ಎಂದರು. ಕಮರ್ಷಿಯಲ್ ಕಾಂಪ್ಲೆಕ್ಸ್‍ಗಳು ಹಾಗೂ ಮಾಲ್‍ಗಳು ತಮ್ಮ ಗ್ರಾಹಕರಿಗೆ ವಾಹನ ನಿಲುಗಡೆಗೆ ನೆಲಮಾಳಿಗೆಯಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಬೇಕೆಂಬ ನಿಯಮಗಳನ್ನು ನ್ಯಾಯಾಲಯದಲ್ಲಿ ವಿವರಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಜಗದೀಶ್ ತಿಳಿಸಿದರು.

Translate »