Tag: Mysuru City Corporation

150 ಕೋಟಿ ಮೌಲ್ಯದ ದೊಡ್ಡಕೆರೆ ಆಸ್ತಿ ಮೈಸೂರು ಜಿಲ್ಲಾಡಳಿತದ ವಶಕ್ಕೆ
ಮೈಸೂರು

150 ಕೋಟಿ ಮೌಲ್ಯದ ದೊಡ್ಡಕೆರೆ ಆಸ್ತಿ ಮೈಸೂರು ಜಿಲ್ಲಾಡಳಿತದ ವಶಕ್ಕೆ

ಮೈಸೂರು: ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಸರ್ವೆ ನಂ 1ರಲ್ಲಿ 150 ಕೋಟಿ ರೂ. ಮೌಲ್ಯದ 11 ಎಕರೆ 38 ಗುಂಟೆ ಸರ್ಕಾರಿ ಭೂಮಿಗೆ ಹಾಕಲಾಗಿದ್ದ ಬೇಲಿಯನ್ನು ಗುರುವಾರ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವು ಗೊಳಿಸುವ ಮೂಲಕ ವಶಕ್ಕೆ ಪಡೆಯಿತು. ಮಹಾತ್ಮಗಾಂಧಿ ರಸ್ತೆಯಲ್ಲಿ ಮಾಲ್ ಆಫ್ ಮೈಸೂರು ಹಾಗೂ ತರಕಾರಿ ಸಗಟು ಮಾರುಕಟ್ಟೆ ನಡುವೆ ಇರುವ ದೊಡ್ಡಕೆರೆಗೆ ಸೇರಿರುವ 11 ಎಕರೆ 38 ಗುಂಟೆ ಭೂಮಿಗೆ ದೊಡ್ಡಕೆರೆ ಟ್ಯಾಂಕ್ ಬಂಡ್ ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಬೇಲಿ ಹಾಕಿ…

ಡಿ.ದೇವರಾಜ ಅರಸು, ಅಶೋಕ ರಸ್ತೆಗಳಲ್ಲಿ  ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಜಾರಿಗೆ ನಿರ್ಧಾರ
ಮೈಸೂರು

ಡಿ.ದೇವರಾಜ ಅರಸು, ಅಶೋಕ ರಸ್ತೆಗಳಲ್ಲಿ ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಜಾರಿಗೆ ನಿರ್ಧಾರ

ಮೈಸೂರು: ಮೈಸೂರಿನ ಪ್ರಮುಖ ವಾಣಿಜ್ಯ ವಹಿವಾಟು ಮಾರ್ಗಗಳಾದ ಡಿ.ದೇವರಾಜ ಅರಸು ರಸ್ತೆ ಹಾಗೂ ಅಶೋಕ ರಸ್ತೆಯಲ್ಲಿ ತಮ್ಮ ವಾಹನ ನಿಲುಗಡೆ ಶುಲ್ಕ ಪಾವತಿಸಲು ಸಿದ್ಧರಾಗಿ ಮಾಲೀಕರೇ. ಏಕೆಂದರೆ ಈ ಎರಡೂ ರಸ್ತೆಗಳಲ್ಲಿ ಕಾರು ಹಾಗೂ ದ್ವಿಚಕ್ರವಾಹನಗಳಿಗೆ ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಕಾರುಗಳನ್ನು ನಿಲ್ಲಿಸುವುದು, ಅಡ್ಡಾದಿಡ್ಡಿ ನಿಲುಗಡೆ ಹಾಗೂ ದ್ವಿಚಕ್ರವಾಹನಗಳ ಕಳ್ಳ ತನಗಳಂತಹ ಪ್ರಕರಣಗಳಿಂದ ಸಾರ್ವಜನಿಕರಿಗುಂಟಾ ಗುತ್ತಿರುವ ತೊಂದರೆ ತಪ್ಪಿಸಿ, ವ್ಯವಸ್ಥಿತ ಹಾಗೂ ಸುರಕ್ಷಿತ…

ಪುರಭವನ ಆವರಣ ವಾಹನ ಮಾಲೀಕರ ಸುಲಿಗೆಗೆ ಬ್ರೇಕ್
ಮೈಸೂರು

ಪುರಭವನ ಆವರಣ ವಾಹನ ಮಾಲೀಕರ ಸುಲಿಗೆಗೆ ಬ್ರೇಕ್

ಮೈಸೂರು: ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದ ಪುರಭವನದ ಆವರಣದಲ್ಲಿ ಪಾರ್ಕಿಂಗ್ ಗುತ್ತಿಗೆಯನ್ನು ಮೈಸೂರು ನಗರ ಪಾಲಿಕೆ ಶುಕ್ರವಾರ ರದ್ದು ಮಾಡಿದ್ದು, ಮುಂದಿನ ದಿನಗಳಲ್ಲಿ ಪಾಲಿಕೆಯ ವತಿಯಿಂದಲೇ ಪಾರ್ಕಿಂಗ್ ವ್ಯವಸ್ಥೆ ಮುಂದುವರೆಸುವ ಆಲೋಚನೆ ಮಾಡುತ್ತಿದೆ. ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರಿಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗು ವುದನ್ನು ತಡೆಗಟ್ಟಲು ಪುರಭವನದಲ್ಲಿ ನಗರ ಪಾಲಿಕೆ ಮಾಡಿದ್ದ ತಾತ್ಕಾಲಿಕ ವಾಹನ ನಿಲುಗಡೆಯ ವ್ಯವಸ್ಥೆಯನ್ನು ನಿರ್ವಹಿಸಲು ಗುತ್ತಿಗೆ ಪಡೆದಿದ್ದ ಗುತ್ತಿಗೆ ದಾರರು ಪಾಲಿಕೆ ನಿಗದಿಪಡಿಸಿದ್ದ ಶುಲ್ಕ ಕ್ಕಿಂತ ಹೆಚ್ಚುವರಿ…

ಅಧಿಕ ಹಸಿ ಕಸ ಉತ್ಪತ್ತಿಯಾಗುವ ಸ್ಥಳದಲ್ಲಿ  ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಕಡ್ಡಾಯ
ಮೈಸೂರು

ಅಧಿಕ ಹಸಿ ಕಸ ಉತ್ಪತ್ತಿಯಾಗುವ ಸ್ಥಳದಲ್ಲಿ  ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಕಡ್ಡಾಯ

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಸ ನಿರ್ವಹಣೆ ಸಮಸ್ಯೆ ಉಲ್ಬಣಿಸದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ನಗರಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, 50 ಕೆಜಿಗಿಂತ ಹೆಚ್ಚಾಗಿ ಹಸಿ ಕಸ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಆದೇಶ ಹೊರಡಿಸಲು ನಿರ್ಧರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ನಿರ್ವಹಣೆಯ ಸಮಸ್ಯೆ ಸರ್ಕಾರ ಹಾಗೂ ಬಿಬಿಎಂಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನವೊಂದನ್ನು ನೀಡಿದ್ದು, ಹೆಚ್ಚಾಗಿ ಕಸ ಸಂಗ್ರಹವಾಗುವ…

ಸಚಿವರ ಮನವೊಲಿಕೆ ಯತ್ನ ವಿಫಲ
ಮೈಸೂರು

ಸಚಿವರ ಮನವೊಲಿಕೆ ಯತ್ನ ವಿಫಲ

ಮೈಸೂರು:  ಖಾಯಂ ಮಾಡಬೇಕು. ಬೆಳಗಿನ ಉಪಾಹಾರಕ್ಕೆ ಹಣ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೂರು ದಿನದಿಂದ ಮೈಸೂರು ಮಹಾನಗರಪಾಲಿಕೆ ಎದುರು ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿರುವ ಪೌರ ಕಾರ್ಮಿಕರ ಮನವೊಲಿಸುವ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಪ್ರವಾಸೋದ್ಯಮ ಸಚಿವರ ಯತ್ನ ವಿಫಲವಾಯಿತು. ಹೀಗಾಗಿ ತಮ್ಮ ಬೇಡಿಕೆ ಈಡೇರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಮುಷ್ಕರ ನಿರತರು ಪ್ರತಿಭಟನೆ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಕೈಗೊಂಡಿರುವ ತೀರ್ಮಾನವನ್ನು ಜಾರಿಗೊಳಿಸುವ ಜತೆಗೆ ಇಂದಿರಾ ಕ್ಯಾಂಟೀನ್…

ಬಲ್ಲಾಳ್ ಸರ್ಕಲ್ ಬಳಿ ಸೆಪ್ಟೆಂಬರ್ ಮೊದಲ ವಾರ ಫುಡ್ ಜೋನ್ ಆರಂಭ
ಮೈಸೂರು

ಬಲ್ಲಾಳ್ ಸರ್ಕಲ್ ಬಳಿ ಸೆಪ್ಟೆಂಬರ್ ಮೊದಲ ವಾರ ಫುಡ್ ಜೋನ್ ಆರಂಭ

ಮೈಸೂರು: ರಸ್ತೆ ಬದಿ ಆಹಾರ ಪದಾರ್ಥ ವ್ಯಾಪಾರಿಗಳಿಗಾಗಿ ಮೈಸೂರಿನ ಬಲ್ಲಾಳ್ ಸರ್ಕಲ್ ಬಳಿ ಪಾಲಿಕೆ ನಿರ್ಮಿಸಿರುವ ಫುಡ್ ಜೋನ್ ಸೆಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ ಎಂದು ಪಾಲಿಕೆ ಅಪರ ಆಯುಕ್ತ ರವೀಂದ್ರ ತಿಳಿಸಿದ್ದಾರೆ. ಮೈಸೂರು ನಗರದಾದ್ಯಂತ ಬಹುತೇಕ ಎಲ್ಲಾ ರಸ್ತೆಗಳ ಫುಟ್‍ಪಾತ್‍ಗಳ ಮೇಲೆ ಪಾನಿಪೂರಿ, ಗೋಬಿ ಮಂಚೂರಿ, ಫಾಸ್ಟ್ ಫುಡ್ ಅಂಗಡಿಗಳನ್ನು ನಡೆಸುತ್ತಿದ್ದು, ತ್ಯಾಜ್ಯ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ಸ್ವಚ್ಛ ನಗರಿಯಲ್ಲಿ ಅಶುಚಿತ್ವಗೊಳ್ಳುತ್ತಿದೆಯಲ್ಲದೇ, ಫುಟ್‍ಪಾತ್‍ಗೆ ಅಳವಡಿಸಿರುವ ಟೈಲ್ಸ್ ಮೇಲೆ ಎಣ್ಣೆ ಮತ್ತಿತರ ಪದಾರ್ಥಗಳು ಚೆಲ್ಲಿ ಹಾಳಾಗುತ್ತಿರುವುದು…

ಆ.31 ಮೈಸೂರು ಮಹಾನಗರ ಪಾಲಿಕೆ ಚುನಾವಣೆ
ಮೈಸೂರು

ಆ.31 ಮೈಸೂರು ಮಹಾನಗರ ಪಾಲಿಕೆ ಚುನಾವಣೆ

ಅದರಂತೆ ಆಗಸ್ಟ್ 13ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್ 20 ನಾಮಪತ್ರ ಸಲ್ಲಿಸಲು ಕಡೇ ದಿನವಾಗಿರುತ್ತದೆ. ಆಗಸ್ಟ್ 21 ನಾಮಪತ್ರಗಳ ಪರಿಶೀಲನೆ, 23ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೇ ದಿನವಾಗಿರುತ್ತದೆ. ಆಗಸ್ಟ್ 31ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದಲ್ಲಿ ಸೆ.2ರಂದು ಮರು ಮತದಾನವಾಗಬೇಕಿದೆ. ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಮಹಾನಗರಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಸೆಪ್ಟೆಂಬರ್…

ಕಂಡ ಕಂಡಲ್ಲಿ ಕಸ ಸುರಿಯುತ್ತಿದ್ದ 7 ವಾಹನ ವಶ: 15 ಸಾವಿರ ದಂಡ
ಮೈಸೂರು

ಕಂಡ ಕಂಡಲ್ಲಿ ಕಸ ಸುರಿಯುತ್ತಿದ್ದ 7 ವಾಹನ ವಶ: 15 ಸಾವಿರ ದಂಡ

ಮೈಸೂರು: ಎಲ್ಲೆಂದರಲ್ಲಿ ಕಸ ಸುರಿದು ಮೈಸೂರಿನ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಹಾಳು ಮಾಡುತ್ತಿದ್ದ ಕಿಡಿಗೇಡಿಗಳ ವಿರುದ್ದ ಮೈಸೂರು ನಗರ ಪಾಲಿಕೆ ಸಮರ ಸಾರಿದ್ದು, ಕಳೆದ 15 ದಿನದಲ್ಲಿ 7 ವಾಹನ ವಶಪಡಿಸಿಕೊಂಡು, 15 ಸಾವಿರ ರೂ ದಂಡ ವಿಧಿಸಿದೆ. ರಿಂಗ್ ರಸ್ತೆ, ಥಂಡಿ ಸಡಕ್ ರಸ್ತೆ ಸೇರಿದಂತೆ ನಗರ ವ್ಯಾಪ್ತಿಯ ಖಾಲಿ ಸ್ಥಳಗಳಲ್ಲಿ ಕಟ್ಟಡದ ತ್ಯಾಜ್ಯ, ಗ್ಯಾರೇಜ್‍ಗಳ ತ್ಯಾಜ್ಯ ಸೇರಿದಂತೆ ವಿವಿಧ ಬಗೆಯ ಕಸವನ್ನು ತಂದು ಸುರಿದು ಪರಾರಿಯಾಗುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಇದರಿಂದ ಮೈಸೂರಿನ ಸೌಂದರ್ಯಕ್ಕೆ ಧಕ್ಕೆಯಾಗುತ್ತಿತ್ತು….

ಅಕ್ರಮ ಬ್ಯೂಟಿ ಪಾರ್ಲರ್‍ಗಳ ಮುಚ್ಚಿಸಲು ಅಧಿಕೃತ ಬ್ಯೂಟಿ ಪಾರ್ಲರ್ ಮಾಲೀಕರ ಆಗ್ರಹ
ಮೈಸೂರು

ಅಕ್ರಮ ಬ್ಯೂಟಿ ಪಾರ್ಲರ್‍ಗಳ ಮುಚ್ಚಿಸಲು ಅಧಿಕೃತ ಬ್ಯೂಟಿ ಪಾರ್ಲರ್ ಮಾಲೀಕರ ಆಗ್ರಹ

ಮೈಸೂರು:ಮೈಸೂರು ನಗರದಲ್ಲಿ ನಾಯಿಕೊಡೆ ಗಳಂತೆ ತಲೆ ಎತ್ತಿರುವ ಅನಧಿಕೃತ ಬ್ಯೂಟಿ ಪಾರ್ಲರ್‌ಗಳ ಮುಚ್ಚಿಸುವಂತೆ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಕಾರ್ಯ ಕರ್ತರು ಆಗ್ರಹಿಸಿದ್ದು, ಅನುಮತಿ ಪಡೆದು ನಡೆಯುತ್ತಿರುವ ಬ್ಯೂಟಿ ಪಾರ್ಲರ್‌ಗಳಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯು ತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಅಧ್ಯಕ್ಷೆ ಸುಜಾತ ಸಿಂಗ್, ಮಾಜಿ ಅಧ್ಯಕ್ಷೆ…

ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ
ಮೈಸೂರು

ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ

ಮೈಸೂರು: ಕಳೆದ 15 ವರ್ಷಗಳಿಂದ ಮೈಸೂರಿನ ವಾಲ್ಮೀಕಿ ರಸ್ತೆಯ ಫುಟ್‍ಪಾತ್ ಮೇಲೆ ಹೂ ಗುಚ್ಛ ತಯಾರಿಸಿ ಮಾರುತ್ತಿದ್ದವರನ್ನು ಮೈಸೂರು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪಡುವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿ ನಿರ್ಮಿಸಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡಗಳು ಕಾರ್ಯಾರಂಭಗೊಂಡಿರುವುದ ರಿಂದ ವಿದ್ಯಾರ್ಥಿನಿಯರು ಓಡಾಡಲು ಅಡ್ಡಿ ಯಾಗುತ್ತದೆ ಎಂಬ ಕಾರಣಕ್ಕಾಗಿ ವಾಲ್ಮೀಕಿ ರಸ್ತೆಯ ಫುಟ್‍ಪಾತ್‍ನಲ್ಲಿದ್ದ ಹೂಗುಚ್ಛ ಮಾರುವವರನ್ನು ನಗರ ಪಾಲಿಕೆ ಆರೋಗ್ಯ ಘಟಕದ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದ್ದು, ಮುಂದೆ ಆ ಭಾಗದಲ್ಲಿ ವ್ಯಾಪಾರ ಮಾಡದಂತೆ…

1 2 3 6