ಮೈಸೂರು, ಜೂ.12(ಆರ್‍ಕೆ)- ಮೈಸೂರಿನ ಸರ್ಕಾರಿ ಅತಿಥಿಗೃಹದ ಉತ್ತರ ಭಾಗದ ಪಾರಂಪರಿಕ ಆರ್ಚ್ ಸಂರಕ್ಷಿಸುವ ದೃಷ್ಟಿಯಿಂದ ಕಬ್ಬಿಣದ ಗ್ರಿಲ್ ಆಳವಡಿಸುವ ಕಾಮಗಾರಿ ಆರಂಭವಾಗಿದೆ.
ಇದು ರಸ್ತೆ ಮಧ್ಯೆ ಇರುವುದರಿಂದ ಇಲ್ಲಿ ಸಂಚರಿಸುವ ವಾಹನಗಳಿಂದ ಸಂಭಾವ್ಯ ಧಕ್ಕೆಯನ್ನು ತಪ್ಪಿಸಿ, ಈ ಪಾರಂಪರಿಕ ಸ್ವಾಗತ ಕಮಾನು ಸಂರಕ್ಷಿಸಲು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-7 ವತಿ ಯಿಂದ ಆರ್ಚ್ ಸುತ್ತ ಕಬ್ಬಿಣದ ಗ್ರಿಲ್ಸ್ ತಡೆಗೋಡೆ ಅಳವಡಿಸಲಾಗುತ್ತಿದೆ. ಒಂದೂವರೆ ಅಡಿ ಸಿಮೆಂಟ್ ಕಾಂಕ್ರಿಟ್ ಬೇಸ್ ನಿರ್ಮಿಸಿ ಅದರ ಮೇಲೆ 2 ಮೀಟರ್ ಎತ್ತರಕ್ಕೆ ಪಾರಂಪರಿಕ ಶೈಲಿಗೆ ಹೊಂದು ವಂತÀಹ ಕಬ್ಬಿಣದ ಸಲಾಕೆಗಳಿಂದ ರಕ್ಷಣಾ ಬೇಲಿ ನಿರ್ಮಿಸ ಲಾಗುತ್ತಿದೆ. ಪ್ರಾಚ್ಯವಸ್ತು ಮತ್ತು ಪಾರಂಪರಿಕ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯರು ನೀಡಿದ ವಿನ್ಯಾಸದಂತೆಯೇ ಪಾರಂ ಪರಿಕ ಸ್ವಾಗತ ಕಮಾನು ರಕ್ಷಿಸಲು ಕಾಮಗಾರಿ ಕೈಗೊಳ್ಳಲಾಗಿದೆ. ಜನವರಿಯಲ್ಲೇ ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆರ್ಚ್ ಸುತ್ತ ಬೇಸ್‍ಮೆಂಟ್ ಗಾಗಿ ಪಾಯಾ ತೆಗೆಯಲಾಗಿತ್ತು. ಸಿಮೆಂಟ್ ಕಾಂಕ್ರಿಟ್ ಕೆಲಸ ಆರಂಭಿಸಬೇಕೆನ್ನುವಷ್ಟರಲ್ಲಿ ಕೊರೊನಾ ಸೋಂಕು ಹರಡಿ ಲಾಕ್‍ಡೌನ್ ಆದೇಶ ಹೊರಬಿದ್ದ ಹಿನ್ನೆಲೆ ಯಲ್ಲಿ ಕೆಲಸ ಸ್ಥಗಿತಗೊಂಡಿತ್ತು.
ಇದೀಗ ಗ್ರಿಲ್ ಅಳವಡಿಸಲು ಬೇಸ್ ಮೆಂಟ್‍ಗೆ ಕಾಂಕ್ರಿಟ್ ಹಾಕುವ ಕೆಲಸ ಆರಂಭವಾಗಿದ್ದು, ಪಾರಂಪರಿಕ ವಿದ್ಯಾಸಕ್ಕೆ ಧಕ್ಕೆ ಭಾರದಂತೆ ಆರ್ಚ್ ಅನ್ನು ಸಂರಕ್ಷಿಸ ಲಾಗುವುದು ಎಂದು ಕಾಮಗಾರಿ ಉಸ್ತು ವಾರಿ ಹೊಣೆ ಹೊತ್ತಿರುವ ಪಾಲಿಕೆ ವಲಯ ಕಚೇರಿ-7ರ ಅಭಿವೃದ್ಧಿ ಅಧಿಕಾರಿ ಮಹೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ನಾಳೆ (ಜೂ.13) ಬೆಳಿಗ್ಗೆ 9.30 ಗಂಟೆಗೆ ನಗರ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಪಾರಂ ಪರಿಕ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಅವರು ತಿಳಿಸಿದರು.