ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ದಳ ಮೈತ್ರಿ ಮುಂದುವರಿಕೆ: ಶಾಸಕ ತನ್ವೀರ್
ಮೈಸೂರು

ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ದಳ ಮೈತ್ರಿ ಮುಂದುವರಿಕೆ: ಶಾಸಕ ತನ್ವೀರ್

February 14, 2021

ಮೈಸೂರು, ಫೆ.13(ವೈಡಿಎಸ್)- ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಿಶ್ಚಿತ ಎಂದು ಕಾಂಗ್ರೆಸ್ ಶಾಸಕ ತನ್ವೀರ್‍ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಉದಯಗಿರಿ ಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮ ದೊಂದಿಗೆ ಮಾತನಾಡಿ ಅವರು, ಶಾಸಕ ಸಾ.ರಾ.ಮಹೇಶ್ ಹಾಗೂ ನನ್ನ ನಡುವೆ ಕಾಂಗ್ರೆಸ್, ಜೆಡಿಎಸ್ ನಗರಾಧ್ಯಕ್ಷರ ಉಪಸ್ಥಿತಿಯಲ್ಲಿ ಒಪ್ಪಂದವಾಗಿದೆ. ಸ್ಥಳೀಯವಾಗಿ ಮೈತ್ರಿ ಮುಂದು ವರೆಯಲಿದೆ. ಶಾಸಕ ಸಾರಾ ಕೂಡ ಶುಕ್ರವಾರ ಸಭೆ ನಡೆಸಿದ್ದಾರೆ. ಅವರ ಜತೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ ಎಂದರು.

`ಯಾರೊಂದಿಗೂ ಮೈತ್ರಿ ಇಲ್ಲ’ ಎಂಬ ವಿಪಕ್ಷ ನಾಯಕ ಸಿದ್ದ ರಾಮಯ್ಯ ಹೇಳಿಕೆ ಕುರಿತು ತನ್ವೀರ್‍ಸೇಠ್ ಪ್ರತಿಕ್ರಿಯಿಸಿ, `ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಾವು ತೀರ್ಮಾನ ತೆಗೆದುಕೊಂಡಿ ದ್ದೇವೆ. ಇದಕ್ಕೆ ಪಕ್ಷದ ವರಿಷ್ಠರ ಸಹಮತವೂ ಇರುತ್ತದೆ. ಸ್ಥಳೀಯ ವಿಚಾರ, ಪರಿಸ್ಥಿತಿ ಕುರಿತು ವರಿಷ್ಠರಿಗೆ ಮನ ವರಿಕೆ ಮಾಡಿಕೊಡುತ್ತೇವೆ. ಅವರ ಅನುಮತಿ ಪಡೆದು ಮೈತ್ರಿ ಮುಂದುವರೆಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಮೈಸೂರು ಮೇಯರ್, ಉಪ ಮೇಯರ್ ಮೀಸ ಲಾತಿ ರಾಜಕೀಯ ಪ್ರೇರಿತ. ಮೇಯರ್ ಸ್ಥಾನ ಎರಡು ವರ್ಷ ಹಿಂದೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈ ಬಾರಿಯೂ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದ ರಿಂದ ಇತರೆ ಸಮುದಾಯಗಳಿಗೆ ಹಿನ್ನಡೆ. ಈ ಬಗ್ಗೆ ದಾವೆ ಹೂಡುವ ಸಾಧ್ಯತೆಯಿದೆ. ದಾವಣಗೆರೆ, ತುಮಕೂರು ನಗರಸಭೆ ಗಳಲ್ಲೂ ಹೀಗೇ ವ್ಯತ್ಯಾಸವಾಗಿದೆ. ಅದನ್ನು ಪ್ರಶ್ನಿಸಿ ಸ್ಥಳೀಯರು ವ್ಯಾಜ್ಯ ಹೂಡಲು ಮುಂದಾಗಿದ್ದಾರೆ. ಮೈಸೂರಿನಲ್ಲೂ ಅಂತಹುದೇ ಸ್ಥಿತಿ ನಿರ್ಮಾಣವಾಗಬಹುದು ಎಂದರು.

Translate »