ರಾಜ್ಯ ಅಭಿವೃದ್ಧಿಗೆ ಮುಖ್ಯಮಂತ್ರಿ ಬದ್ಧ
ಮೈಸೂರು

ರಾಜ್ಯ ಅಭಿವೃದ್ಧಿಗೆ ಮುಖ್ಯಮಂತ್ರಿ ಬದ್ಧ

February 14, 2021

ಮೈಸೂರು, ಫೆ.13- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನಪರ, ರೈತಪರ ಆಡಳಿತ ನೀಡುತ್ತಿದ್ದಾರೆ. ಕೋವಿಡ್ ಮಹಾಮಾರಿ ಆರೋಗ್ಯದ ಜೊತೆಗೆ ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರಿದೆ. ಆದರೆ, ಇಂಥ ಪರಿಸ್ಥಿತಿಯಲ್ಲೂ ರೈತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಕಾಳಜಿ ಹಾಗೂ ಬದ್ಧತೆಯಿಂದ ಅವರು 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಸಾಲ ಕೊಡಲು ತೀರ್ಮಾನಿಸಿದ್ದರು. ಅದರಂತೆ ಈಗಾಗಲೇ 2020ರ ಮಾರ್ಚ್ 12ರವರೆಗೆ 20,71,345 ರೈತರಿಗೆ 13,498.16 ಕೋಟಿ ರೂ. ಸಾಲ ನೀಡಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 20,000 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮುಖ್ಯಮಂತ್ರಿಗಳು ಹೈನೋದ್ಯಮಕ್ಕೂ ಪೆÇ್ರೀತ್ಸಾಹ ನೀಡುತ್ತಿದ್ದು, ಹಾಲಿಗೆ ಪೆÇ್ರೀತ್ಸಾಹ ಧನ ನೀಡುತ್ತಿದ್ದಾರೆ. ಇದರಿಂದ ಪ್ರತಿ ಲೀಟರ್ ಗೆ 5 ರೂ. ಪೆÇ್ರೀತ್ಸಾಹಧನ ರೈತರಿಗೆ ಲಭ್ಯವಾಗುತ್ತಿದೆ. ಪ್ರತಿ ದಿನಕ್ಕೆ 80 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಬರೋಬ್ಬರಿ 4 ಕೋಟಿ ರೂ.ನಂತೆ ವರ್ಷಕ್ಕೆ 1200 ಕೋಟಿ ರೂ. ಅಧಿಕ ಪೆÇ್ರೀತ್ಸಾಹ ಧನವನ್ನು ರಾಜ್ಯ ಸರ್ಕಾರದಿಂದ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಇಡೀ ವಿಶ್ವವೇ ಕೋವಿಡ್‍ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭಕ್ಕೆ ಕರ್ನಾಟಕ ಸಹ ಹೊರತಾಗಿರಲಿಲ್ಲ. ಅದೇ ವೇಳೆ ರಾಜ್ಯದಲ್ಲಿ ಪ್ರವಾಹ ಸೇರಿದಂತೆ ಹಲವು ಸಮಸ್ಯೆಗಳಿಂದ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೋರಿತ್ತು. ಆದರೆ, ಇಂತಹ ಸಂದರ್ಭದಲ್ಲೂ ಮುಖ್ಯಮಂತ್ರಿ ದಿಟ್ಟ ಕ್ರಮ ಕೈಗೊಂಡರು. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾಗಿದ್ದ ಶ್ರಮಿಕ ವರ್ಗ, ಕೊರೊನಾ ವಾರಿಯರ್ಸ್ ಸೇರಿದಂತೆ ಅನೇಕರ ಬೆಂಬಲಕ್ಕೆ ನಿಂತು ಆರ್ಥಿಕ ಚೇತರಿಕೆ ಕಾಣಲು ಒಟ್ಟಾರೆ 2272 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ ಆರ್ಥಿಕ ಬಲ ತುಂಬಿದ್ದಾರೆ. ಇದರಿಂದ ಕ್ಯಾಬ್ ಚಾಲಕರು, ರೈತರು, ಆಶಾ ಕಾರ್ಯಕರ್ತರು, ಕಾರ್ಮಿಕರು, ಅತಿಸಣ್ಣ, ಸಣ್ಣ, ಮಧ್ಯಮ ಉದ್ದಿಮೆದಾರರು ಸೇರಿ ಅನೇಕ ವರ್ಗಗಳಿಗೆ ಅನುಕೂಲಗಳಾಗಿವೆ. ಮುಂದೆಯೂ ಇದೇ ರೀತಿ ಜನಪರ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದರು.

ಈಗಾಗಲೇ ಹಲವು ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನಗಳನ್ನು ಖರೀದಿಸುವ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಅವುಗಳ ವಿವರ ಇಂತಿದೆ: ತೊಗರಿಬೇಳೆ-6100 ರೂ., ಕಡಲೆಕಾಳು-5100 ರೂ., ಶೇಂಗಾ-5275 ರೂ., ರಾಗಿ-3295 ರೂ., ಬಿಳಿಜೋಳ (ಮಾಲ್ದಂಡಿ)-2640 ರೂ., ಬಿಳಿಜೋಳ (ಹೈಬ್ರಿಡ್)-2620 ರೂ., ಭತ್ತ (ಗ್ರೇಡ್-ಎ)-1888 ರೂ., ಭತ್ತ (ಸಾಮಾನ್ಯ)-1868 ರೂ.ನಂತೆ ದರ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

Translate »