ಬೈಕ್‍ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು
ಮಂಡ್ಯ

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು

February 14, 2021

ಮಂಡ್ಯ, ಫೆ.13-ಬೈಕ್‍ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಮಳವಳ್ಳಿ-ಕೊಳ್ಳೇಗಾಲ ಮುಖ್ಯರಸ್ತೆಯ ರಾಷ್ಟ್ರೀಯ ಹೆದ್ದಾರಿ-209ರ ದಾಸನದೊಡ್ಡಿ ಗ್ರಾಮದ ಬಳಿ ನಡೆದಿದೆ.

ಮಳವಳ್ಳಿ ತಾಲೂಕು ಬಿಜಿಪುರ ಹೋಬಳಿಯ ದಾಸನದೊಡ್ಡಿ ಗ್ರಾಮದ ಹೊಂಬಾಳೇಗೌಡರ ಪುತ್ರ ರಾಜು ಹೊಂಬಾಳೇಗೌಡ (45) ಮೃತ ಬೈಕ್ ಸವಾರ. ಈತ ದಾಸನದೊಡ್ಡಿ ಗ್ರಾಮದಿಂದ ಕೊಳ್ಳೇಗಾಲದ ಕಡೆಗೆ ತಮ್ಮ ಬೈಕ್ ತೆರಳುತ್ತಿದ್ದ ವೇಳೆ ಎದುರಿ ನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಹೊಂಬಾಳೇಗೌಡ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಮತ್ತೊಬ್ಬ ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ ಪಿ.ಹೆಚ್.ಲಕ್ಷ್ಮೀ ನಾರಾಯಣ ಪ್ರಸಾದ್, ಸರ್ಕಲ್ ಇನ್ಸ್‍ಪೆಕ್ಟರ್ ಡಿ.ಪಿ.ಧನರಾಜ್, ಸಬ್‍ಇನ್ಸ್‍ಪೆಕ್ಟರ್ ಕೆ.ಎಂ.ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಬೆಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Translate »