Tag: Mandya

ಬೆಳೆ ರಕ್ಷಣೆಗಾಗಿ ಅನಿರ್ದಿಷ್ಟ ಹೋರಾಟ
ಮಂಡ್ಯ

ಬೆಳೆ ರಕ್ಷಣೆಗಾಗಿ ಅನಿರ್ದಿಷ್ಟ ಹೋರಾಟ

ಮುಂದುವರೆದ ರೈತರ ಅಹೋರಾತ್ರಿ ಧರಣಿ ಕಾವೇರಿ ಮಂಡಳಿ ಆದೇಶಕ್ಕೆ ಸ್ವಾಗತ: ನಾಲೆಗಳಿಗೆ ನೀರು ಬಿಡದಿರುವುದಕ್ಕೆ ಆಕ್ರೋಶ ರೈತ ಹೋರಾಟಕ್ಕೆ ಕಾಂಗ್ರೆಸ್‍ನ ಹಲವು ಮುಖಂಡರ ಸಾಥ್ ಮಂಡ್ಯ, ಜೂ.25(ನಾಗಯ್ಯ)- ಬೆಳೆ, ಜನ ಜಾನುವಾರುಗಳಿಗೆ ಕುಡಿಯಲು ವಿಸಿ ಮತ್ತು ಹೇಮಾವತಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ನಗರದ ಕಾವೇರಿ ನೀರಾವರಿ ನಿಗಮದ ಬಳಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 5ನೇ ದಿನವೂ ಮುಂದುವರಿದಿದೆ. ಇಂದಿನ ಹೋರಾಟದಲ್ಲಿ ಕರವೇ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಮುಖಂಡರಾದ ರವಿಕುಮಾರ್ ಗಣಿಗ ಸೇರಿದಂತೆ ಹಲವು ಕಾಂಗ್ರೆಸ್…

ಬೆಳೆಗೆ ನೀರು ಹರಿಸುವಂತೆ ರೈತರ ಅಹೋರಾತ್ರಿ ಧರಣಿ
ಮಂಡ್ಯ

ಬೆಳೆಗೆ ನೀರು ಹರಿಸುವಂತೆ ರೈತರ ಅಹೋರಾತ್ರಿ ಧರಣಿ

ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಮಂಜುಶ್ರೀ ಪತ್ರ ಮಂಡ್ಯ, ಜೂ.25- ಕೆಆರ್‍ಎಸ್ ನಿಂದ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗದಲ್ಲಿ ಕಳೆದ 5 ದಿನ ಗಳಿಂದ ಕರ್ನಾಟಕ ರಾಜ್ಯ ರೈತ ಸಂಘದಿಂದ ಅಹೋ ರಾತ್ರಿ ಧರಣಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‍ಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದು, ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವಂತೆ ಕಾವೇರಿ ನೀರಾವರಿ…

ರೈತನ ಆತ್ಮಹತ್ಯೆಗೆ ಬ್ಯಾಂಕ್ ಅಧಿಕಾರಿಗಳೇ ನೇರ ಹೊಣೆ: ಆರೋಪ
ಮಂಡ್ಯ

ರೈತನ ಆತ್ಮಹತ್ಯೆಗೆ ಬ್ಯಾಂಕ್ ಅಧಿಕಾರಿಗಳೇ ನೇರ ಹೊಣೆ: ಆರೋಪ

ಮೃತ ರೈತನ ಪುತ್ರನಿಗೆ ಸರ್ಕಾರಿ ಹುದ್ದೆ ನೀಡಲು ಬಿಎಸ್‍ಪಿ ಆಗ್ರಹ ನಾಗಮಂಗಲ, ಜೂ.25- ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದ ರೈತ ಹನು ಮಂತನ ಆತ್ಮಹತ್ಯೆಗೆ ಪಟ್ಟಣದ ಎಸ್‍ಬಿಐ ಅಧಿಕಾರಿಗಳೇ ನೇರ ಹೊಣೆ ಎಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ ಕೃಷ್ಣಮೂರ್ತಿ ಆರೋಪಿಸಿದರು. ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ರೈತ ಹನುಮಂತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಸುದ್ದಿಗಾರೊಂದಿಗೆ ಮಾತ ನಾಡಿದ ಅವರು, ಬ್ಯಾಂಕಿನವರು ಅಮಾ ಯಕರಿಗೆ ಲಕ್ಷಾಂತರ ರೂ. ಟ್ರ್ಯಾಕ್ಟರ್ ಸಾಲ ನೀಡಿ ಸಾಲ…

ಕೆ.ಆರ್.ಪೇಟೆಯ ವಿವಿಧ ಗ್ರಾಮಗಳಲ್ಲಿ ಸ್ವಚ್ಛತಾ ರಥಕ್ಕೆ ಸ್ವಾಗತ
ಮಂಡ್ಯ

ಕೆ.ಆರ್.ಪೇಟೆಯ ವಿವಿಧ ಗ್ರಾಮಗಳಲ್ಲಿ ಸ್ವಚ್ಛತಾ ರಥಕ್ಕೆ ಸ್ವಾಗತ

ಕೆ.ಆರ್.ಪೇಟೆ, ಜೂ.25(ಶ್ರೀನಿವಾಸ್)- ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ರೋಗ ರುಜಿನಗಳಿಂದ ದೂರ ಇರಬಹುದು ಎಂದು ತೆಂಡೇಕೆರೆ ಗ್ರಾಪಂ ಅಧ್ಯಕ್ಷೆ ಜಯಮ್ಮ ತಿಳಿಸಿದರು. ತಾಲೂಕಿನ ತೆಂಡೇಕೆರೆ ಗ್ರಾಪಂನಲ್ಲಿ ಸ್ವಚ್ಛಮೇವ ಜಯತೆ ಆಂದೋಲನದ ಜನಜಾಗೃತಿಗಾಗಿ ಆಗಮಿಸಿದ “ಸ್ವಚ್ಛತಾ ರಥ”ಕ್ಕೆ ಸ್ವಾಗತ ಕೋರಿ ಅವರು ಮಾತನಾಡಿದರು. ಈ ವೇಳೆ ಉಪಾಧ್ಯಕ್ಷೆ ಶಾಂತಮ್ಮ, ಪಿಡಿಓ ಮಹಾಲಕ್ಷ್ಮೀ, ಕಾರ್ಯದರ್ಶಿ ಗಂಟಯ್ಯ, ಗ್ರಾಪಂ ಸದಸ್ಯರು, ನೌಕರರು, ಶಿಕ್ಷಕ ಧರ್ಮ ರತ್ನಾಕರ್ ಮತ್ತಿತರರಿದ್ದರು. ಐಚನಹಳ್ಳಿ: ಇಲ್ಲಿನ ಗ್ರಾಪಂಗೆ ಆಗಮಿಸಿದ ಸ್ವಚ್ಛತಾ ರಥವನ್ನು ಅಧ್ಯಕ್ಷ ಮೋಹನ್ ಸ್ವಾಗತಿಸಿದರು. ಪಿಡಿಓ…

ಶೀಘ್ರದಲ್ಲೇ ನಿಖಿಲ್ ಮಂಡ್ಯದಲ್ಲಿ ಹೊಸ ಮನೆಗೆ ಪ್ರವೇಶ
ಮಂಡ್ಯ

ಶೀಘ್ರದಲ್ಲೇ ನಿಖಿಲ್ ಮಂಡ್ಯದಲ್ಲಿ ಹೊಸ ಮನೆಗೆ ಪ್ರವೇಶ

ಮೃತ ಜೆಡಿಎಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ, ಸಾಂತ್ವನ ಮಂಡ್ಯ, ಜೂ.25(ನಾಗಯ್ಯ)- ಲೋಕ ಸಭಾ ಚುನಾವಣೆಯಲ್ಲಿ ಸೋಲನ್ನನುಭವಿ ಸಿದ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತರೂ ಕ್ಷೇತ್ರದಿಂದ ದೂರ ಇರಲ್ಲ. ಅಲ್ಲೇ ಮನೆ ಮಾಡಿ ಕೊಂಡು ಜನರ ಜತೆ ಇರುತ್ತೇನೆ ಎಂದಿದ್ದರು. ಅದರಂತೆ ಇದೀಗ ಮಂಡ್ಯ ದಿಂದ ಒಂದು ಕಿ.ಮೀ.ದೂರದಲ್ಲೇ ನಿಖಿಲ್ ತೋಟ ಖರೀದಿಸಿದ್ದಾರೆ. ಈ ಕುರಿತು ಮಳವಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಂಡ್ಯ ಸಿಟಿಗೆ ಒಂದು ಕಿ.ಮೀ. ದೂರದಲ್ಲೇ ತೋಟ…

ಕಾರು, ಗೂಡ್ಸ್ ವಾಹನದ ಡ್ರೈವರ್‍ಗಳ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ
ಮಂಡ್ಯ, ಮೈಸೂರು

ಕಾರು, ಗೂಡ್ಸ್ ವಾಹನದ ಡ್ರೈವರ್‍ಗಳ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ನಾಲ್ವರು ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಶ್ರೀರಂಗ ಪಟ್ಟಣದ ಸಂತೇ ಮಾಳದ ನಿವಾಸಿ ರಂಜಿತ್(26) ಮತ್ತು ಚಾಮರಾಜ ನಗರದ ಫಾಹಿದ್ ಕಲಾರ್(28) ಮೃತ ದುರ್ದೈವಿಗಳು. ಘಟನೆ ಹಿನ್ನೆಲೆ: ಸೋಮವಾರ ರಾತ್ರಿ 10ರ ಸುಮಾರಿ ನಲ್ಲಿ ಮೈಸೂರು ಕಡೆಗೆ ವೇಗವಾಗಿ…

ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ: ಕಾರ್ಯಕರ್ತರು ರೆಡಿಯಾಗಿ
ಮಂಡ್ಯ, ಮೈಸೂರು

ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ: ಕಾರ್ಯಕರ್ತರು ರೆಡಿಯಾಗಿ

ಬೆಂಗಳೂರು: ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಮೈತ್ರಿ ಸರ್ಕಾರ ಕಂಪ್ಲೀಟ್ ಆಗುತ್ತೆ. ದಿನ ನಿತ್ಯ ಮಾಧ್ಯಮದಲ್ಲಿ ಬರುವುದನ್ನು ನೋಡಿ ನೀವು ಟೆನ್ಷನ್ ಆಗ್ತೀರಾ. ಒಳಗಡೆ ಏನು ಅನ್ನೋದು ನಮಗೆ ಗೊತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರಿಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಜೆಡಿಎಸ್ ಕಾರ್ಯಕರ್ತರ ಜೊತೆ ಮಾತ ನಾಡಿರುವ ನಿಖಿಲ್ ಕುಮಾರಸ್ವಾಮಿ, 4 ವರ್ಷ ಸರ್ಕಾರ ನಡೆಸುತ್ತೇವೆ. ಚುನಾವಣೆಗೆ ಮುಂದಿನ ತಿಂಗಳಿಂದಲೇ ಶುರು ಮಾಡಿ. ಒಂದು ವರ್ಷಕ್ಕೆ ಬರುತ್ತೋ, ಎರಡು ವರ್ಷಕ್ಕೆ ಬರುತ್ತೋ, ಮೂರು ವರ್ಷಕ್ಕೆ…

ಇಂದು ಮಂಡ್ಯ ಮತದಾರ ಪ್ರಭುವಿನ ‘ಮಹಾತೀರ್ಪು’
ಮಂಡ್ಯ

ಇಂದು ಮಂಡ್ಯ ಮತದಾರ ಪ್ರಭುವಿನ ‘ಮಹಾತೀರ್ಪು’

ಮಂಡ್ಯ: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ಇಂಡಿಯಾದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಪ್ರಭು ಬರೆದಿರುವ ‘ಮಹಾತೀರ್ಪು’ ಇಂದು ಬಹಿರಂಗಗೊಳ್ಳಲಿದೆ. ಹೈವೋಲ್ಟೇಜ್ ಕದನ ಕಣವಾಗಿರುವ ಈ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬ ರೀಶ್ ಸೇರಿದಂತೆ 22 ಅಭ್ಯರ್ಥಿಗಳ ಹಣೆ ಬರಹ ಇಂದು ಬಯಲಾಗಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಮಾಜಿ ಸಚಿವ, ನಟ ದಿ.ಅಂಬರೀಶ್…

ಲಗ್ನಪತ್ರಿಕೆಯಲ್ಲಿ `ಸಂಸದ’ ನಿಖಿಲ್!ಸುಮಲತಾಗೆ ಫ್ಲೆಕ್ಸ್‍ನಲ್ಲಿ ಅಭಿನಂದನೆ
ಮಂಡ್ಯ

ಲಗ್ನಪತ್ರಿಕೆಯಲ್ಲಿ `ಸಂಸದ’ ನಿಖಿಲ್!ಸುಮಲತಾಗೆ ಫ್ಲೆಕ್ಸ್‍ನಲ್ಲಿ ಅಭಿನಂದನೆ

ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆಯಲಿದ್ದು, ಫಲಿತಾಂಶ ತಿಳಿಯಲು ಮಧ್ಯಾಹ್ನದವರೆಗೂ ಕಾಯಬೇಕಿದ್ದರೂ, ತಾಲೂಕಿನ ಜೆಡಿಎಸ್ ಮುಖಂಡರು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಅದಾಗಲೇ `ಸಂಸದ’ ಎಂದೇ ಪರಿಗಣಿಸಿಬಿಟ್ಟಿದ್ದಾರೆ! ಇನ್ನೊಂದೆಡೆ, ಕೊಪ್ಪದಲ್ಲಿ ಸುಮಲತಾ ಅಂಬರೀಶ್ ಅಭಿಮಾನಿಗಳು, ಸುಮಲತಾ ವಿಜಯೋತ್ಸವ ಆಚರಿಸಲು ಮುಂದಾಗಿ ದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸುಮಲತಾ ಅವರಿಗೆ ಅಭಿನಂದನೆಗಳು ಎಂದೂ ಫ್ಲೆಕ್ಸ್ ಮುದ್ರಿಸಿ ಮುಖ್ಯ ರಸ್ತೆಗಳಲ್ಲಿ ಅಳವಡಿಸಿ ಸಂಭ್ರಮಿಸುತ್ತಿದ್ದಾರೆ. ಲಗ್ನಪತ್ರಿಕೆ: ಜೆಡಿಎಸ್ ಮುಖಂಡರೊ ಬ್ಬರ ಪುತ್ರನ ಮದುವೆಯ ಆಹ್ವಾನ ಪತ್ರಿಕೆ ಯಲ್ಲಿ…

ಮಿಮ್ಸ್ ಮಾಜಿ ನಿರ್ದೇಶಕ ಸೇರಿ 6 ಜನರ ವಿರುದ್ಧ ಎಫ್‍ಐಆರ್‍ಗೆ ಕೋರ್ಟ್ ಆದೇಶ 
ಮಂಡ್ಯ

ಮಿಮ್ಸ್ ಮಾಜಿ ನಿರ್ದೇಶಕ ಸೇರಿ 6 ಜನರ ವಿರುದ್ಧ ಎಫ್‍ಐಆರ್‍ಗೆ ಕೋರ್ಟ್ ಆದೇಶ 

ಮಂಡ್ಯ: ಮಂಡ್ಯ ಮೆಡಿಕಲ್ ಕಾಲೇಜಿನ (ಮಿಮ್ಸ್) ಹಿಂದಿನ ನಿರ್ದೇಶಕ, ಮಾಜಿ ಸಂಸದ ಜಿ.ಮಾದೇಗೌಡ ಅವರ ಪುತ್ರ ಡಾ.ಜಿ.ಎಂ. ಪ್ರಕಾಶ್ ಸೇರಿದಂತೆ 6 ಜನರ ವಿರುದ್ಧ ಸುಳ್ಳು ಬೋಧನಾ ಪ್ರಮಾಣಪತ್ರ ನೀಡಿರು ವುದೂ ಸೇರಿದಂತೆ ಹಲವು ಆರೋಪಗಳ ಮೇಲೆ ಮಂಡ್ಯದ 2ನೇ ಅಪರ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ. ಮಿಮ್ಸ್ ಮಾಜಿ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವರಾಮ್, ಮಿಮ್ಸ್ ಮಾಜಿ ವೈದ್ಯಕೀಯ ಅಧೀಕ್ಷಕ ಡಾ.ಎಂ.ಹನುಮಂತಪ್ರಸಾದ್, ಮಾಜಿ ಆಡಳಿತಾಧಿಕಾರಿ ಕುಮಾರಿ ಜಯಾ, ಮಾಜಿ…

1 2 3 41