ಶ್ರೀರಂಗನಾಥನ ಸಾವಿರಾರು ಎಕರೆ ಭೂಮಿ ಕಬಳಿಕೆ ಪ್ರಕರಣ ಎಸ್‌ಐಟಿ ತನಿಖೆ
Uncategorized

ಶ್ರೀರಂಗನಾಥನ ಸಾವಿರಾರು ಎಕರೆ ಭೂಮಿ ಕಬಳಿಕೆ ಪ್ರಕರಣ ಎಸ್‌ಐಟಿ ತನಿಖೆ

March 24, 2022

ಬೆಂಗಳೂರು,ಮಾ.೨೩(ಕೆಎAಶಿ)-ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂ ಕಿನ ಶ್ರೀರಂಗನಾಥಸ್ವಾಮಿ ದೇವಾ ಲಯಕ್ಕೆ ದಾನ ನೀಡಿರುವ ಭೂಮಿ ಒತ್ತು ವರಿ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಗೆ ಒಳಪಡಿ ಸುವುದಾಗಿ ವಸತಿ ಸಚಿವ ವಿ.ಸೋಮಣ್ಣ ವಿಧಾನಪರಿಷತ್‌ನಲ್ಲಿ ಪ್ರಕಟಿಸಿದರು.

ಮುಜರಾಯಿ ಸಚಿವರ ಪರವಾಗಿ ಉತ್ತರ ನೀಡಿದ ಅವರು, ಬೆಂಗಳೂರಿನ ಮಲ್ಲೇಶ್ವರ ನಿವಾಸಿ ದ್ವಾರಕಾಬಾಯಿ ವೇದಾಂತA, ಹಾಲಿ ಬೆಂಗಳೂರು ದಕ್ಷಿಣ ತಾಲೂಕಿಗೆ ಸೇರಿದ ತಾವರೆಕೆರೆ ಹೋಬಳಿ ಬ್ಯಾಲಾಳು, ಚೋಳನಾಯಕನಹಳ್ಳಿ, ಪೆದ್ದನ ಪಾಳ್ಯ, ದೊಡ್ಡಮಾರನಹಳ್ಳಿ ಮತ್ತು ಕಾಡು ಕರೇನಹಳ್ಳಿ (ಕುರುಬರಹಳ್ಳಿ) ಗ್ರಾಮಗಳಿಗೆ ಸೇರಿದ ೧೧೯೮ ಎಕರೆ ೩೪ ಗುಂಟೆ ವಿಸ್ತೀರ್ಣ ಪೈಕಿ ಬ್ಯಾಲಾಳು, ಕಾಡುಕರೇನಹಳ್ಳಿಯಲ್ಲಿ ಖರಾಬು ಜಮೀನುಗಳನ್ನು ಒಳಗೊಂಡು ದತ್ತಿ ರೂಪದಲ್ಲಿ ಕೊಡಲು ೧೯೩೯ರಲ್ಲಿ ಮುಂದೆ ಬಂದಿದ್ದರು ಎಂದರು. ಈ ಬಗ್ಗೆ ಅಂದಿನ ಮೈಸೂರು ಮಹಾರಾಜರ ಸರ್ಕಾರ ೧೯೩೯ ಏಪ್ರಿಲ್ ೧೧/೧೩ರಂದು ಆದೇಶ ಹೊರ ಡಿಸಿದೆ. ಈ ಆಸ್ತಿಯನ್ನು ದೇವಸ್ಥಾನದ ಪೂಜಾ ಕೈಂಕರ್ಯಕ್ಕೆ ಹಾಗೂ ಉಳಿದ ಭೂಮಿಯನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕಿತ್ತು. ಇದರಲ್ಲಿ ಭೂಮಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು

Translate »