ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ  ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ
ಮಂಡ್ಯ, ಮೈಸೂರು

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ

March 24, 2022

ಮಂಡ್ಯ, ಮಾ.೨೩- ದೇಶದ ಸ್ವಾತಂತ್ರ್ಯ ಹೋರಾಟ ದಿಂದ ಮಡಿದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ ‘ಹುತಾತ್ಮ’ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ ‘ಹುತಾತ್ಮ’ ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡು ವಂತೆ ಹೋರಾಡುತ್ತಲೇ ಇದೆ ಎಂದು ನೇಗಿಲ ಯೋಗಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರೋಟರಿ ರಮೇಶ್ ಹೇಳಿದರು.

ನಗರದ ಅರಕೇಶ್ವರ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತ ಸರ್ಕಾರ ಯುವ ಕಾರ್ಯ ಹಾಗೂ ಸಚಿವಾಲಯ ನೆಹರು ಯುವಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ಜನತೆ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆೆ ಮತ್ತು ಸಿದ್ಧಾಂತಗಳನ್ನು ಮೈಗೂಡಿಸಿ ಕೊಳ್ಳಬೇಕಿದೆ, ರಾಷ್ಟçಪ್ರೇಮ-ರಾಷ್ಟçಭಕ್ತಿಯನ್ನು ಅನಾವರಣ ಗೊಳಿಸಬೇಕಿದ್ದು, ಸ್ವಾಮಿ ವಿವೇಕಾನಂದರ ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಂಡು, ಸಮಾಜಮುಖಿಯಾಗಿ ನಿಲ್ಲಬೇಕಿದೆ ಎಂದರು. ಗುಜರಾತ್ ರಾಜ್ಯ ಸರ್ಕಾರ ಹುತಾತ್ಮ ದಿನವನ್ನು ಸರ್ಕಾರಿ ರಜಾದಿನವೆಂದು ಘೋಷಿಸಿದೆ, ಭಗತ್ ಸಿಂಗ್ ಅವರ ದೇಶಪ್ರೇಮದ ಮಾತುಗಳು ಯುವ ಜನರಿಗೆ ದಾರಿದೀಪವಾಗುವುದು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ಬಲಿದಾನ ದಿನದಂದು ಶತ ನಮನ ಸಲ್ಲಿಸಿ, ಭಾರತ ಮಾತೆಯ ಈ ಪರಾಕ್ರಮಿ ಸುಪುತ್ರರ ತ್ಯಾಗ, ಹೋರಾಟ ಮತ್ತು ಆದರ್ಶಗಳನ್ನು ನಾವು ಮೈ ಗೂಡಿಸಿಕೊಳ್ಳಬೇಕಿದೆ, ಇವರ ಹೋರಾಟದ ನುಡಿಗಳು ದೇಶವಾಸಿಗಳಲ್ಲಿ ಸದಾ ಸ್ಫೂರ್ತಿ ತುಂಬುತ್ತಿರಲಿದೆ ಎಂದು ಕಿವಿಮಾತು ಹೇಳಿದರು.

ಯುವಕೇಂದ್ರದ ಲೆಕ್ಕಾಧಿಕಾರಿ ಎಚ್.ಎಂ. ಬಸವರಾಜು ಮಾತನಾಡಿ, ಇಂದಿನ ವಿದ್ಯಾವಂತ ಸಮುದಾಯ ರಾಷ್ಟçಭಕ್ತಿಯನ್ನು ಮೆರೆಯಬೇಕಿದೆ, ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಪ್ರತಿಯೊಬ್ಬರು ಈಗಿನಿಂದಲೇ ಬ್ಯಾಂಕ್ ವ್ಯವಹಾರ ಗಳನ್ನು ಅರಿತುಕೊಂಡು ಗಣಕೀಕೃತ ಬ್ಯಾಂಕ್ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ ಎಂದರು. ಮಂಡ್ಯ ವಿಶ್ವವಿದ್ಯಾನಿ ಲಯದ ಪ್ರಾಧ್ಯಾಪಕ ಡಾ. ಲಿಂಗರಾಜು ಮಾತನಾಡಿ, ಇಂದು ದೇಶ ಮತ್ತು ವಿದೇಶಗಳಲ್ಲಿ ಬಲಿದಾನ್ ದಿವಸವನ್ನು ಆಚರಿಸಲಾ ಗುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನವಾಗಿದೆ. ಮಹಾನ್ ದೇಶಭಕ್ತರ ತ್ಯಾಗ ಬಲಿದಾನದ ಸ್ಮರಣೆಗೆ ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅರಕೇಶ್ವರನಗರ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ತ್ರಿವೇಣಿ, ಉಪ ನ್ಯಾಸಕರಾದ ಮೃತ್ಯುಂಜಯ, ಕೃಷ್ಣೇಗೌಡ, ಡಿಎಚ್‌ಓ ಕಚೇರಿಯ ಅಧಿಕಾರಿಗಳಾದ ಮರಿಸ್ವಾಮಿ, ಲೋಕೇಶ್, ಎನ್‌ವೈಕೆ ಸ್ವಯಂ ಸೇವಕ ಹರ್ಷ ಮತ್ತಿತರರಿದ್ದರು.

Translate »