ರಾಷ್ಟೀಯ ಶಿಕ್ಷಣ ನೀತಿ-೨೦೨೦ ಮೂಲಕ ಶೈಕ್ಷಣಿಕವಾಗಿ ಮತ್ತೆ ಭಾರತ `ವಿಶ್ವ ಗುರು’ ಸಾಧನೆಯಾಗಲಿ
ಮೈಸೂರು, ಮಾ.೨೩ (ಆರ್‌ಕೆಬಿ)- ರಾಷ್ಟೀಯ ಶಿಕ್ಷಣ ನೀತಿ-೨೦೨೦ (ಎನ್‌ಇಪಿ) ಭಾರತವನ್ನು ಶಿಕ್ಷಣ ಕ್ಷೇತ್ರದಲ್ಲಿ `ವಿಶ್ವ ಗುರು’ವಾಗಿ ಮಾಡಲು ಪ್ರಮುಖ ಗುರಿಯಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.
ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ ಬುಧ ವಾರ ಆಯೋಜಿಸಿದ್ದ `ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅರಿತುಕೊಳ್ಳು ವುದು’ ವಿಷಯ ಕುರಿತ ೩ ದಿನಗಳ ಕುಲಪತಿಗಳ ರಾಷ್ಟೀಯ ಸಮ್ಮೇಳನ ಮತ್ತು ಭಾರತೀಯ ವಿವಿಗಳ ಸಂಘದ ೯೬ನೇ ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ವರ್ಚುವಲ್ ವೇದಿಕೆ ಮೂಲಕ ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚು ಸಂವಾದಾತ್ಮಕ, ತಲ್ಲೀನಗೊಳಿಸುವ ಮತ್ತು ಆಹ್ಲಾದಕರ ಅನುಭವ ಪಡೆಯುವ ಗುರು ಶಿಷ್ಯ ಸಂಪ್ರದಾಯದಡಿ ಶಿಕ್ಷಣವನ್ನು ಅರ್ಥಪೂರ್ಣ ಹಾಗೂ ಸಮಗ್ರ ರೀತಿ ಯಲ್ಲಿ ಬೋಧಿಸಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವನ್ನು ತುಂಬಬೇಕು. ಯಾವುದೇ ಪ್ರತಿಕೂಲತೆಯನ್ನು ಎದುರಿಸಲು ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಸರಿ ಯಾದ ಮಾರ್ಗದಲ್ಲಿ ನಡೆಯಲು ಅವರನ್ನು ಸಿದ್ಧಗೊಳಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.
ಜ್ಞಾನದ ಪ್ರಸರಣಕಾರ ಎಂದು ಕರೆಯಲ್ಪಡುತ್ತಿದ್ದ ಭಾರತವು ಜ್ಞಾನವನ್ನು ಸೃಷ್ಟಿಸುವಲ್ಲಿ, ಅದನ್ನು ವಿಶ್ವಾದ್ಯಂತ ಹಂಚಿಕೊಳ್ಳುವಲ್ಲಿ ಪುರಾತನ ಕಾಲದಿಂದಲೂ ಮುಂಚೂಣಿ ಯಲ್ಲಿತ್ತು. ಇಡೀ ವಿಶ್ವವನ್ನು ಒಂದೇ ಕುಟುಂಬವಾಗಿ ಪರಿಗಣಿಸುವುದರಿಂದ ಮಾನವೀ ಯತೆಯ ಯೋಗಕ್ಷೇಮಕ್ಕಾಗಿ ನಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತೇವೆ. ಹಾಗಾಗಿಯೇ `ವಸುಧೈವ ಕುಟುಂಬಕA…’ ಭಾರತೀಯ ತತ್ವಶಾಸ್ತçದ ತಿರುಳಾಗಿದೆ ಎಂದರು.
ಸುಸ್ಥಿರ ಶಿಕ್ಷಣದಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ, ಶಿಕ್ಷಣದ ಗುರಿ ಕೇವಲ ಉದ್ಯೋಗವನ್ನು ಹುಡುಕುವುದಾಗಬಾರದು. ಅದು ಯುವ ಸಮುದಾಯದ ಮನಸ್ಸನ್ನು ಪ್ರಬುದ್ಧಗೊಳಿಸಬೇಕು. ನಮ್ಮ ಸಂಸ್ಕöÈತಿ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದು ಹೇಳಿದರು.
ಇಂದಿನ ಜ್ಞಾನ ಯುಗದಲ್ಲಿ ವಿಶ್ವವಿದ್ಯಾನಿಲಯಗಳು ಜ್ಞಾನ ಸೃಷ್ಟಿಯ ಕೇಂದ್ರಗಳಾಗ ಬೇಕು. ಸೃಜನಾತ್ಮಕ ಮತ್ತು ಆತ್ಮವಿಶ್ವಾಸವನ್ನು ತುಂಬಿ ಯುಕಜನರ ಜಾಗೃತಿ, ಕೌಶಲ್ಯ ಮತ್ತು ಪ್ರಗತಿಶೀಲರಾಗಲು ಉತ್ತೇಜಿಸಬೇಕು. ಯುವ ಪೀಳಿಗೆ ರಾಷ್ಟç ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಬೇಕು.೧,೦೫೦ ವಿಶ್ವ ವಿದ್ಯಾನಿಲಯಗಳು, ೪೩,೦೦೦ ಕಾಲೇಜು ಗಳು ಮತ್ತು ಸಾವಿರಾರು ವೃತ್ತಿಪರ ಕಾಲೇಜುಗಳನ್ನು ಹೊಂದಿರುವ ಭಾರತದ ಶಿಕ್ಷಣ ವ್ಯವಸ್ಥೆಯು ವಿಶ್ವದಲ್ಲಿ ಮೂರನೇ ಅತೀ ದೊಡ್ಡ ಶೈಕ್ಷಣಿಕ ವ್ಯವಸ್ಥೆಯಾಗಿದೆ. ವಿಶ್ವದ ಟಾಪ್ ೧೦ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳನ್ನು ನೋಡುವ ಕನಸನ್ನು ತಾವು ಹೊಂದಿರುವುದಾಗಿ ಉಪ ರಾಷ್ಟçಪತಿಗಳು ಆಶಿಸಿದರು.
ಭಾರತವು ಒಂದು ಕಾಲದಲ್ಲಿ ನಳಂದಾ, ತಕ್ಷಶಿಲಾ, ವಿಕ್ರಮಶೀಲ ಮತ್ತು ಪುಷ್ಪಗಿರಿ ಯಂತಹ ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯಗಳ ನೆಲೆಯಾಗಿತ್ತು. ಪ್ರಪಂಚದಾದ್ಯAತದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಭಾರತ ಮತ್ತೆ ಅಂತಹ ಶ್ರೇಷ್ಠತೆಯನ್ನು ಮರಳಿ ಪಡೆಯಬೇಕು ಎಂದು ಅವರು ಬಯಸಿದರು.
ರಾಷ್ಟೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬದ್ಧ: ಭಾರತೀಯ ವಿಶ್ವ ವಿದ್ಯಾನಿಲಯಗಳ ಸಂಘದ ಅಧ್ಯಕ್ಷರೂ ಆಗಿರುವ ಚೆನ್ನೆöÊ ಎಂಎಇಟಿ ವಿವಿ ಕುಲಪತಿ ಕರ್ನಲ್ ಡಾ.ಜಿ. ತಿರುವಾಸಗಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಲಪತಿಗಳು ವಿಶ್ವವಿದ್ಯಾನಿಲಯಗಳಲ್ಲಿ ಪರಿಣಾಮಕಾರಿ ಶೈಕ್ಷಣಿಕ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸುವ ಮೂಲಕ ಗುಣಮಟ್ಟದ ಉನ್ನತ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ. ಉನ್ನತ ಶೈಕ್ಷಣಿಕ ನಿಯಮಗಳು ಮತ್ತು ಅಧಿಸೂಚನೆಗಳನ್ನು ಪಾಲಿಸುವ ಮೂಲಕ ರಾಷ್ಟೀಯ ಶಿಕ್ಷಣ ನೀತಿ- ೨೦೨೦ ಅನ್ನು ಪರಿಣಾಮಕಾರಿಯಾಗಿ ಕೊಂಡೊಯ್ಯಲು ಬದ್ಧರಾಗಿದ್ದೇವೆ. ವಿಶ್ವವಿದ್ಯಾಲಯಗಳು ಉನ್ನತ ಸÀಂಶೋಧನೆ ಮತ್ತು ಸ್ವಾಯತ್ತತೆಯನ್ನು ಕಾಯ್ದುಕೊಂಡಿದ್ದು ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕರಿಗೆ ಉಪಯುಕ್ತ ವಾಗಿ ಕಾರ್ಯನಿರ್ವಹಿಸಲು ಬಯಸುತ್ತೇವೆ ಎಂದು ಹೇಳಿದರು. ಇದಕ್ಕೂ ಮುನ್ನ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಡಾ.ಪಂಕಜ್ ಮಿತ್ತಲ್ ವಿಷಯ ಮಂಡಿಸಿದರು. ಇದೇ ವೇಳೆ `ಯೂನಿವರ್ಸಿಟಿ ನ್ಯೂಸ್: ಎ ಜರ್ನಲ್ ಆಫ್ ಹೈಯರ್ ಎಜುಕೇಶನ್’ ಮತ್ತು ಡಾ.ಪಂಕಜ್ ಮಿತ್ತಲ್ ಮತ್ತು ಡಾ.ಎಸ್. ರಮಾದೇವಿ ಪಾಣಿ ಸಂಪಾದಿಸಿರುವ `ಬುಕ್ ಆನ್ ಇಂಪ್ಲಿಮೆAಟಿAಗ್ ನ್ಯಾಷನಲ್ ಎಜುಕೇಶನ್ ಪಾಲಿಸಿ ೨೦೨೦: ಎ ರೋಡ್‌ಮ್ಯಾಪ್’ ಬಿಡುಗಡೆ ಮಾಡಲಾಯಿತು. ರಾಜ್ಯ ಪಾಲರ ಭಾಷಣದ ನಂತರ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ ವಂದಿಸಿದರು.