ರಾಜ್ಯವೇ ಇತರೆ ರಾಜ್ಯಕ್ಕೆ ವಿದ್ಯುತ್ ಮಾರುತ್ತಿದೆ: ಸುನಿಲ್‌ಕುಮಾರ್
ಬೆಂಗಳೂರು,ಮಾ.೨೩(ಕೆಎಂಶಿ)-ಪ್ರಸಕ್ತ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಇಲ್ಲ, ಲೋಡ್ ಶೆಡ್ಡಿಂಗ್ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್ ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ನಮಗೆ ಈ ಮೊದಲು ಕಲ್ಲಿದ್ದಲಿನ ಕೊರತೆ ಇತ್ತು, ತಕ್ಷಣವೇ ಎಚ್ಚೆತ್ತು ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ಗಣಿ ಸಚಿವರ ಜೊತೆ ಸಮಾಲೋಚನೆ ನಡೆಸಿ, ನಮ್ಮ ಅಗತ್ಯತೆ ಪೂರೈಸಿಕೊಂಡೆವು. ಬೇಡಿಕೆಗಿಂತ ನಮ್ಮಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿದೆ, ನಾವೇ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರುವ ಸ್ಥಿತಿಯಲ್ಲಿದ್ದೇವೆ ಎಂದರು. ಇಂತಹ ಸನ್ನಿವೇಶದಲ್ಲಿ ವಿದ್ಯುತ್ ಅಥವಾ ಲೋಡ್ ಶೆಡ್ಡಿಂಗ್ ಪ್ರಸ್ತಾವವೇ ಇಲ್ಲ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಬಳಕೆ ಆಗಿ ದಾಖಲೆ ನಿರ್ಮಾಣವಾಗಿದೆ. ಇಷ್ಟಾದರೂ ನಾವು ಎಲ್ಲಿಯೂ ಕೊರತೆ ಉಂಟು ಮಾಡಿಲ್ಲ ಎಂದು ಸುನಿಲ್‌ಕುಮಾರ್ ತಿಳಿಸಿದರು.