ಏ.೧ರಿಂದ ವಿದ್ಯುತ್ ದರ ಏರಿಕೆ?
ಮೈಸೂರು

ಏ.೧ರಿಂದ ವಿದ್ಯುತ್ ದರ ಏರಿಕೆ?

March 24, 2022

ಬೆಂಗಳೂರು,ಮಾ.೨೩-ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏಕೆಯಾಗಿದೆ. ಏ.೧ರಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ ವಿದ್ಯುತ್ ದರವೂ ಏರಿಕೆಯಾಗುವ ನಿರೀಕ್ಷೆ ಇದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ಈಗಾಗಲೇ ಫೆ.೧೪ರಿಂದ ೨೮ರ ತನಕ ಎಸ್ಕಾಂಗಳಲ್ಲಿ ವಿದ್ಯುತ್ ದರ ಏರಿಕೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದೆ. ಎಲ್ಲಾ ಎಸ್ಕಾಂಗಳು ಸಹ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ಸಂಘ ಸಂಸ್ಥೆಗಳು, ಜನರು ಕೋವಿಡ್ ಪರಿಸ್ಥಿತಿ ಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಆದ್ದರಿಂದ ದರ ಏರಿಕೆ ಮಾಡಬಾರದು ಎಂದು ಕೆಇಆರ್‌ಸಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಎಸ್ಕಾಂಗಳು ನಷ್ಟ ಅನುಭವಿಸುತ್ತಿದ್ದು, ದರ ಏರಿಕೆ ಅನಿವಾರ್ಯವಾಗಿದೆ. ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳು ಪ್ರತಿ ಯೂನಿಟ್‌ಗೆ ೧.೫೦ರಿಂದ ೨ ರೂ. ತನಕ ದರ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಕೆಇಆರ್‌ಸಿಗೆ ಮನವಿ ಮಾಡಿವೆ.

Translate »