ಕೊರೊನಾ ನಿಯಂತ್ರಣಕ್ಕಾಗಿ ಪಿಎಂ ಪರಿಹಾರ ನಿಧಿಗೆ 44.56 ಲಕ್ಷ ರೂ. ದೇಣಿಗೆ
ಮಂಡ್ಯ

ಕೊರೊನಾ ನಿಯಂತ್ರಣಕ್ಕಾಗಿ ಪಿಎಂ ಪರಿಹಾರ ನಿಧಿಗೆ 44.56 ಲಕ್ಷ ರೂ. ದೇಣಿಗೆ

April 18, 2020

ಮಂಡ್ಯ, ಏ.17(ನಾಗಯ್ಯ)- ಕೊರೊನಾ ನಿಯಂತ್ರಣ ಕ್ಕಾಗಿ ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳಿಗೆ ಸಹಾಯವಾಗುವಂತೆ ಈವರೆಗೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮಂಡ್ಯದ ಸಾರ್ವ ಜನಿಕರು ಮತ್ತು ಸಂಘ ಸಂಸ್ಥೆಗಳಿಂದ 44,56,270 ರೂ. ದೇಣಿಗೆ ಸಂಗ್ರಹವಾಗಿದೆ.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ 10 ಲಕ್ಷ, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಿಂದ 6,78,207 ಲಕ್ಷ ರೂ., ಭಾರತೀನಗರದ ಭಾರತೀ ಶಿಕ್ಷಣ ಸಂಸ್ಥೆಯಿಂದ 5 ಲಕ್ಷ, ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ದತ್ತಿ ಸಂಸ್ಥೆಯಿಂದ 3,56 ಲಕ್ಷ, ಮೈಸೂರು ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಿಂದ 3,11,162 ಲಕ್ಷ ರೂ., ಮಾಜಿ ಸಚಿವ ಎನ್.ಚೆಲುವರಾಯ ಸ್ವಾಮಿ 3 ಲಕ್ಷ, ಮಾಜಿ ಕೆಪಿಸಿಸಿ ಸದಸ್ಯ ಎಸ್.ಸಚ್ಚಿದಾ ನಂದ 2 ಲಕ್ಷ ದೇಣಿಗೆ ನೀಡಿದ್ದಾರೆ.

ಕೀರ್ತನಾ ಟ್ರಸ್ಟ್ 1.5 ಲಕ್ಷ, ಮಾಜಿ ಶಾಸಕ ನರೇಂದ್ರ ಸ್ವಾಮಿ, ಕೆ.ಬಿ.ಚಂದ್ರಶೇಖರ್, ಎ.ಬಿ.ರಮೇಶ್ ಬಾಬು ತಲಾ 1 ಲಕ್ಷ, ಇಂಡಿಯನ್ ಮೆಡಿಕಲ್ ಅಸೋಷಿ ಯೇಷನ್ 1 ಲಕ್ಷ, ಸಿಟಿ ಕ್ಲಬ್, ಸ್ಪೋಟ್ಸ್ ಕ್ಲಬ್, ಕಾಳೇನ ಹಳ್ಳಿ ಚೇತನ ಎಜಕೇಷನ್ ಟ್ರಸ್ಟ್, ಮಂಡ್ಯ ಚೇತನ ಎಜುಕೇಷನ್ ಟ್ರಸ್ಟ್, ಕಾವೇರಿ ಎಜುಕೇಷನ್ ಟ್ರಷ್ಟ್, ಮದ್ದೂರಿನ ಅಪ್ಪು ಬಾರ್ & ರೆಸ್ಟೋರೆಂಟ್, ಪಿ.ರವಿ ಕುಮಾರ್, ಕೆ.ಎನ್.ದಿವಕಾರ್ ಅವರುಗಳು ತಲಾ 50 ಸಾವಿರ ದೇಣಿಗೆ ಸಂಗ್ರಹವಾಗಿದೆ. ಬಿ.ಆರ್.ರವಿ, ಪಿ.ವಿಶಾಲಾಕ್ಷಿ, ಕಾಳಿಕಾಂಬ ಸೇವಾ ಸಮಿತಿ, ಎ.ಎಸ್. ರಾಜಕುಮಾರ್, ಎಸ್.ಆರ್.ವೆಂಕಟೇಶ್ ತಲಾ 25 ಸಾವಿರ ನೀಡಿದ್ದು ರಾಮದೇವ ಟ್ರಸ್ಟ್ 20.901 ರೂ, ಎಸ್.ಪಿ.ನವೀನ್ ಕುಮಾರ್ 10 ಸಾವಿರ, ರೈತ ಸಂಘದ ಕೆ.ಎಸ್.ಸುಧೀರ್ ಕುಮಾರ್ 5 ಸಾವಿರ ದೇಣಿಗೆ ನೀಡಿದ್ದು ಕೋವಿಡ್ ನಿಯಂತ್ರಣ ಪರಿಹಾರ ನಿಧಿಗೆ ಸಾರ್ವಜನಿಕರು ಚೆಕ್ ಮತ್ತು ಡಿಡಿ ಮೂಲಕ ಉದಾರ ಧನ ಸಹಾಯ ನೀಡಬೇ ಕೆಂದು ಡಿಸಿ ಡಾ.ಎಂ.ವಿ.ವೆಂಕಟೇಶ್ ಕೋರಿದ್ದಾರೆ.

ಇಂದು ಕೆ. ಹೊನ್ನಲಗೆರೆಯ ಆರ್.ಕೆ. ಎಜುಕೇಷನ್ ಇನ್ಸಿಟ್ಯೂಟ್ ವತಿಯಿಂದ ಡಿಸಿ ಡಾ. ಎಂ.ವಿ. ವೆಂಕಟೇಶ್ ಅವರ ಮೂಲಕ 1.50 ಲಕ್ಷ ದೇಣಿಗೆ ನೀಡಲಾಯಿತು.

Translate »