ಅಬಕಾರಿ ಅಧಿಕಾರಿಗಳಿಂದ ವಿವಿಧ ಬಾರ್‍ಗಳಲ್ಲಿ ಮದ್ಯ ದಾಸ್ತಾನು ಪರಿಶೀಲನೆ
ಮಂಡ್ಯ

ಅಬಕಾರಿ ಅಧಿಕಾರಿಗಳಿಂದ ವಿವಿಧ ಬಾರ್‍ಗಳಲ್ಲಿ ಮದ್ಯ ದಾಸ್ತಾನು ಪರಿಶೀಲನೆ

April 18, 2020

ಮಂಡ್ಯ, ಏ.17(ನಾಗಯ್ಯ)- ಅಬಕಾರಿ ಅಧಿಕಾರಿಗಳ ತಂಡ ಶುಕ್ರವಾರ ನಗರದ ವಿವಿಧೆಡೆ ಮದ್ಯದಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿತು.

ಬೆಂಗಳೂರು ಅಬಕಾರಿ ಆಯುಕ್ತರ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ ಶಿವಪ್ರಸಾದ್ ನೇತೃತ್ವದಲ್ಲಿ ದಾಸ್ತಾನು ಪರಿಶೀಲನಾ ಕಾರ್ಯ ನಡೆಯಿತು. ಅಬಕಾರಿ ಎಸ್‍ಐ ಕಾಮಾಕ್ಷಿ ನೇತೃತ್ವದ ತಂಡ ನಗರದ ಗುರುರಾಜ ಕಾಂಟಿ ನೆಂಟಲ್ ಬಳಿಯ ಗುರುರಾಜ ಬಾರ್ & ರೆಸ್ಟೋರೆಂಟ್ ಹಾಗೂ ಶ್ರೀನಿವಾಸ್ ಗೇಟ್ ಬಳಿಯ ಚಾಮುಂಡಿಬಾರ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಯಾವುದೇ ದಾಸ್ತಾನು ಲಕ್ಕದಲ್ಲಿ ವ್ಯತ್ಯಾಸವಿಲ್ಲ ಎಂದು ತಿಳಿಸಿರುವ ಅಧಿಕಾರಿಗಳ ತಂಡ ಮತ್ತೆ ಈ ಬಾರ್ ಗಳಿಗೆ ಸೀಲ್ ಮಾಡಿ ಬೀಗ ಜಡಿದರು.

ಅಬಕಾರಿ ಎಸ್‍ಐ ಎ.ಎಸ್.ಶಿವಶಂಕರ್ ನೇತೃತ್ವದ ಅಧಿಕಾರಿಗಳ ತಂಡ ಹೊಸಹಳ್ಳ ವೃತ್ತದ ಬಳಿಯ ಜೀವನ್‍ಬಾರ್‍ಗೆ ತೆರಳಿ ಮದ್ಯದ ದಾಸ್ತಾನು ಲೆಕ್ಕವನ್ನು ಪರಿಶೀಲನೆ ನಡೆಸಿದರು. ಇಲ್ಲಿಯೂ ಸಹ ಯಾವುದೇ ಲೋಪವಿಲ್ಲ ಎಂದು ತಿಳಿಸಿದರು. ನಾಳೆಯಿಂದ ಜಿಲ್ಲೆಯ ವಿವಿಧ ಬಾರ್ ಮತ್ತು ವೈನ್ ಸ್ಟೋರ್‍ಗ¼ಲ್ಲೂ ದಾಸ್ತಾನು ಪರಿಶೀಲನಾ ಕಾರ್ಯ ನಡೆಯಲಿದೆ ಎಂದು ಉಪ ಆಯುಕ್ತ ಶಿವಪ್ರಸಾದ್ ತಿಳಿಸಿದ್ದಾರೆ.

Translate »