ಇಂದಿನಿಂದ ಮನೆಗೆ ಔಷಧ ತಲುಪಿಸುವ ‘ಔಷಧ ಮಿತ್ರ’ ಸೇವೆ ಆರಂಭ
ಚಾಮರಾಜನಗರ

ಇಂದಿನಿಂದ ಮನೆಗೆ ಔಷಧ ತಲುಪಿಸುವ ‘ಔಷಧ ಮಿತ್ರ’ ಸೇವೆ ಆರಂಭ

April 18, 2020

ಚಾಮರಾಜನಗರ, ಏ.17- ಔಷಧಿ ಅಂಗಡಿಗಳಲ್ಲಿ ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಇಂದಿನಿಂದ (ಏ.18) ನಾಗರಿಕರ ಮನೆ ಬಾಗಿಲಿಗೆ ಔಷಧವನ್ನು ಯಾವುದೇ ಸೇವಾ ಶುಲ್ಕವಿಲ್ಲದೇ ತಲುಪಿಸುವ `ಔಷಧ ಮಿತ್ರ’ ಸೇವೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರ, ಪಟ್ಟಣ ಪ್ರದೇಶಗಳ ಔಷಧಿ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಗಮನಿಸಲಾಗಿದೆ. ಹೀಗಾಗಿ ಲಾಕ್‍ಡೌನ್ ವೇಳೆ ಜನರ ಸಂಚಾರ ಕಡಿಮೆ ಮಾಡುವ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಔಷಧವನ್ನು ಮನೆ ಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಇದ ಕ್ಕಾಗಿ ಯಾವುದೇ ಸೇವಾ ಶುಲ್ಕ ನೀಡಬೇಕಾಗಿಲ್ಲ. ಔಷಧಿಗೆ ತಗಲುವ ವೆಚ್ಚ ಮಾತ್ರ ನೀಡಬೇಕಾಗುತ್ತದೆ ಎಂದರು.

ಮನೆ ಬಾಗಿಲಿಗೆ ಔಷಧ ತಲುಪಿಸಲು ಜಿಲ್ಲೆಯಲ್ಲಿ ಒಟ್ಟು 10 ಫಾರ್ಮಸಿಸ್ಟ್‍ಗಳನ್ನು ನಿಯೋಜಿಸಿ ದ್ವಿಚಕ್ರ ವಾಹನ ನೀಡಲಾಗುತ್ತಿದೆ. ಫಾರ್ಮಸಿಸ್ಟ್ ಮೊಬೈಲ್ ಸಂಖ್ಯೆಯನ್ನು ನೀಡಲಾಗುತ್ತಿದ್ದು, ಇವರ ಸಂಖ್ಯೆಗೆ ನಾಗರಿಕರು ವಾಟ್ಸಪ್ ಮೂಲಕ ವೈದ್ಯರು ನೀಡಿರುವ ಔಷಧಿ ಚೀಟಿ ಹಾಗೂ ವಿಳಾಸ ವಿವರ ಕಳುಹಿಸಿದರೆ ಮೆಡಿಕಲ್ ಸ್ಟೋರ್ ಗಳಲ್ಲಿ ಔಷಧಿ ಖರೀದಿಸಿ ಮನೆ ಬಾಗಿಲಿಗೆ ತಲುಪಿಸಲಿ ದ್ದಾರೆ. ಔಷಧ ಖರೀದಿ ಬಿಲ್ ನೀಡಿದ ಬಳಿಕ ಹಣ ನೀಡ ಬೇಕಾಗುತ್ತದೆ ಎಂದರು. ಮೊದಲಿಗೆ ಅತೀ ಹೆಚ್ಚು ಜನ ಸಂದಣಿ ಇರುವ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಗಳಲ್ಲಿ ಔಷಧ ತಲುಪಿಸುವ ಸೇವೆ ಆರಂಭವಾಗುತ್ತಿದೆ ಎಂದ ಅವರು, ಮಧುಮೇಹ, ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆ ಇರುವ ರೋಗಿಗಳಿಗೆ ಜಿಲ್ಲಾ ಸಾಂಕ್ರಾಮಿಕ ರೋಗಗಳ ಘಟಕದ ವತಿಯಿಂದ ಕ್ಲಿನಿಕಲ್ ಕಾರ್ಡಿಯಾಲಿಜಿಸ್ಟ್ ಡಾ.ರವಿಶಂಕರ್ 24×7 ಸಹಾಯವಾಣಿ ಸಂಖ್ಯೆ 9449204640 ಮೂಲಕ ಸಲಹೆ ಮತ್ತು ಸೂಚನೆ ನೀಡಲಿದ್ದಾರೆ. ಜಿಲ್ಲೆಯ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಕೋವಿಡ್-19 ಸೇರಿದಂತೆ ಇತರೆ ವೈರಸ್ ಪ್ರಕರಣಗಳ ಪರೀಕ್ಷೆ ಮಾಡುವ ಒಂದು ಪ್ರಯೋಗಾಲಯ ಆರಂಭಕ್ಕೆ ಮಂಜೂರಾತಿ ದೊರೆತಿದೆ. ನಗರದ ವೈದ್ಯಕೀಯ ಕಾಲೇಜಿನಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ದಿನಕ್ಕೆ 90 ಮಾದರಿ ಪರೀಕ್ಷೆಗಳನ್ನು ಮಾಡ ಬಹುದಾದ ಸಾಮಥ್ರ್ಯವುಳ್ಳ ಪ್ರಯೋಗಾಲಯವನ್ನು ಏ.30ರೊಳಗೆ ಆರಂಭಿಸಲು ಅಗತ್ಯ ಸಿದ್ಧತೆ ಮಾಡಲಾಗು ತ್ತಿದೆ ಎಂದರು. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ, ಬೇಕರಿ ಸೇರಿದಂತೆ ಅನುಮತಿಸಿರುವ ಅಂಗಡಿಗಳಲ್ಲಿ ಸಾಮಾ ಜಿಕ ಅಂತರ ಕಾಪಾಡಿಕೊಳ್ಳಲು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಸಂಬಂಧಪಟ್ಟ ಅಂಗಡಿಗಳನ್ನು ಮುಚ್ಚಿಸಲು ಕ್ರಮ ತೆಗೆದುಕೊಳ್ಳ ಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ತೀವ್ರ ಉಸಿರಾಟ ತೊಂದರೆ (ಸಾರಿ) ಹಾಗೂ ಶೀತದಂತಹ ಅನಾರೋಗ್ಯ (ಐಎಲ್‍ಯು) ಪ್ರಕರಣಗಳನ್ನು ಪತ್ತೆ ಹಚ್ಚುವ ಜೊತೆ ಚಿಕ್ಕ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಆರೋಗ್ಯ ಸಮೀಕ್ಷೆ ಪ್ರಗತಿಯಲ್ಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಡಿಸಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ಹಾಜರಿದ್ದರು.

ಔಷಧಿಗಾಗಿ ಸಂಪರ್ಕಿಸಿ: ಚಾಮರಾಜನಗರ ಮದನ್ (ಮೊ.9738565455), ಮಂಜುನಾಥ್ (ಮೊ.9620643151), ಪ್ರಕಾಶ್ (ಮೊ.9740137139), ಕೊಳ್ಳೇಗಾಲ ಮಹೇಶ್ (ಮೊ. 9902421090), ಕೋದಂಡರಾಮ ಪ್ರಸಾದ್ (ಮೊ. 9986813667), ಜನಾರ್ಧನ್ (ಮೊ.8217528840), ಗುಂಡ್ಲುಪೇಟೆ ಎಸ್.ಕುಮಾರ್ (ಮೊ.9945817981), ಪ್ರಸಾದ್ (ಮೊ.9008020559), ಯಳಂದೂರು ಭಾಸ್ಕರ್ (ಮೊ.9902039155), ಹನೂರು ಮುನಿ ಸ್ವಾಮಿ (ಮೊ.9480215656) ಅವರನ್ನು ಸಂಪರ್ಕಿಸಿ ನಾಗರಿಕರು ಔಷಧಿ ತರಿಸಿಕೊಳ್ಳಬಹುದು.

Translate »