Tag: Chamarajanagar

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ: ರೋಗಿಗಳ ಕುಂದು-ಕೊರತೆ ವಿಚಾರಣೆ, ನಂತರ ವಾರ್ಡ್‍ನಲ್ಲೇ ವಾಸ್ತವ್ಯ
ಚಾಮರಾಜನಗರ

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ: ರೋಗಿಗಳ ಕುಂದು-ಕೊರತೆ ವಿಚಾರಣೆ, ನಂತರ ವಾರ್ಡ್‍ನಲ್ಲೇ ವಾಸ್ತವ್ಯ

September 25, 2019

ಚಾಮರಾಜನಗರ, ಸೆ.24(ಎಸ್‍ಎಸ್)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾದ ಬಿ.ಶ್ರೀರಾಮುಲು ಅವರು ಇಂದು ದಿಢೀರ್ ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯೇ ವಾಸ್ತವ್ಯ ಹೂಡುವ ಮೂಲಕ ರೋಗಿಗಳ ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಜಿಲ್ಲಾ ಆಸ್ಪತ್ರೆಗೆ ರಾತ್ರಿ 9ರ ವೇಳೆಗೆ ಆಗಮಿಸಿದ ಸಚಿವರು, ಮೊದಲು ಕಣ್ಣಿನ ಚಿಕಿತ್ಸೆಗೆ ದಾಖ ಲಾಗಿರುವ ರೋಗಿಗಳ ವಾರ್ಡಿಗೆ ಭೇಟಿ ನೀಡಿ ರೋಗಿಗಳ ಕುಂದು-ಕೊರತೆ ವಿಚಾರಿಸಿದರು. ರೋಗಿಗಳ ಹಾಸಿಗೆಯಲ್ಲಿಯೇ ಕುಳಿತು ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ, ಔಷಧೋಪಚಾರಗಳ ಬಗ್ಗೆ ರೋಗಿಗಳಿಂದಲೇ ಮಾಹಿತಿ…

ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ಯಶಸ್ವಿ
ಚಾಮರಾಜನಗರ, ಮೈಸೂರು

ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ಯಶಸ್ವಿ

June 26, 2019

ಚಾಮರಾಜನಗರ, ಜೂ.25 (ಎಸ್‍ಎಸ್)- ಗುಂಡ್ಲುಪೇಟೆಯಲ್ಲಿ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಸಂತೇಮರಹಳ್ಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣವನ್ನು ಎಸ್‍ಐಟಿ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಪ್ರಗತಿಪರ ಮತ್ತು ದಲಿತ ಸಂಘಟನೆ ಗಳ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬಂದ್‍ಗೆ ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿದ್ದ ಕಾರಣ ಅಂಗಡಿ-ಮುಂಗಟ್ಟು ಗಳು ಬಾಗಿಲು ಮುಚ್ಚಿದ್ದವು. ಇದರಿಂದ ಜನನಿಬಿಡ ಪ್ರದೇಶಗಳಾದ ದೊಡ್ಡ ಮತ್ತು ಚಿಕ್ಕ ಅಂಗಡಿ ಬೀದಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು….

ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದ ಶಾಸಕ ಎನ್.ಮಹೇಶ್
ಮೈಸೂರು

ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದ ಶಾಸಕ ಎನ್.ಮಹೇಶ್

May 26, 2019

ಚಾಮರಾಜನಗರ: ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ. ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು ನಾನು ಬಿಜೆಪಿಗೆ ಹೋಗುವ ಮಾತೇ ಇಲ್ಲ. ನಾನು ಬಿಎಸ್‍ಪಿ ಪಕ್ಷದ ಶಿಸ್ತಿನ ಸಿಪಾಯಿ ಯಾಗಿದ್ದೇನೆ. ಪಕ್ಷದ ಹೈಕಮಾಂಡ್ ಮಾಯಾವತಿ ಅವರು ಹೇಳಿದರೆ ನಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದರು. ಇದಕ್ಕೂ ಮೊದಲು ನನ್ನ ವಿರುದ್ಧದ ಹೇಳಿಕೆಗಳು ಕೇವಲ ಉಹಾಪೆÇೀಹಗಳು ಅಷ್ಟೇ. ನಾನು ಈಗ ಸಮ್ಮಿಶ್ರ ಸರ್ಕಾರದಿಂದ ತಾಂತ್ರಿಕವಾಗಿ ಹೊರಗುಳಿದಿದ್ದೇನೆ ಎಂದು…

ಚಾಮರಾಜನಗರ  ಬಳಿ ಗಾಯಗೊಂಡಿದ್ದ ಚಿರತೆ ಸೆರೆ
ಚಾಮರಾಜನಗರ, ಮೈಸೂರು

ಚಾಮರಾಜನಗರ ಬಳಿ ಗಾಯಗೊಂಡಿದ್ದ ಚಿರತೆ ಸೆರೆ

May 21, 2019

ಚಾ.ನಗರ: ಗಾಯಗೊಂಡಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿರುವ ಘಟನೆ ತಾಲೂಕಿನ ಹೊನ್ನಹಳ್ಳಿ ಗ್ರಾಮದ ಜಮೀನಿನಲ್ಲಿ ಸೋಮವಾರ ನಡೆದಿದೆ. ಹೊನ್ನಹಳ್ಳಿ ಗ್ರಾಮದ ಮಹದೇವಶೆಟ್ಟಿ ಎಂಬುವರ ಪಂಪ್‍ಸೆಟ್ ಜಮೀನಿನ ಮನೆ ಮುಂದೆ ಚಿರತೆ ಮಲಗಿರುವುದನ್ನು ಮಹದೇವಶೆಟ್ಟಿ ಪುತ್ರ ನಾಗರಾಜು ಗಮನಿ ಸಿದ್ದಾರೆ. ಇದರಿಂದ ಗಾಬರಿಗೊಂಡ ನಾಗ ರಾಜು ಈ ವಿಷಯವನ್ನು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವುದಕ್ಕಿಂತ ಮುನ್ನವೇ ಚಿರತೆ ಮನೆ ಮುಂದಿನ ಜಾಗ ದಿಂದ ಜಮೀನಿನ ಪಕ್ಕದಲ್ಲಿದ್ದ ಕಾಲುವೆಗೆ…

ದುಡಿಮೆಯಲ್ಲಿ ದೇವರು ಕಂಡ ಕಾಯಕಯೋಗಿಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಭಿಪ್ರಾಯ
ಚಾಮರಾಜನಗರ

ದುಡಿಮೆಯಲ್ಲಿ ದೇವರು ಕಂಡ ಕಾಯಕಯೋಗಿಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಭಿಪ್ರಾಯ

May 8, 2019

ಚಾಮರಾಜನಗರ: ಕಾಯಕವೇ ಕೈಲಾಸ ತತ್ವದ ಮೂಲಕ ದುಡಿಮೆಯಲ್ಲಿ ದೇವರನ್ನು ಕಂಡ ಕಾಯಕಯೋಗಿ ಬಸವಣ್ಣನವರು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು. ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗ ದೊಂದಿಗೆ ಸರಳವಾಗಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಉದ್ಘಾ ಟಿಸಿ ಅವರು ಮಾತನಾಡಿದರು. ಕುವೆಂಪು ಅವರು 20ನೇ ಶತಮಾನ ದಲ್ಲಿ ವಿಶ್ವಮಾನವತೆಯ ಕನಸು ಕಂಡಿದ್ದರು. ಅದನ್ನು ಬಸವಣ್ಣನವರು 12ನೇ ಶತಮಾನ ದಲ್ಲಿಯೇ ಜಾರಿಗೊಳಿಸಿದ್ದರು. ಜನ ಸಾಮಾನ್ಯ ರಿಗೆ ಅರ್ಥವಾಗುವ…

ನಗರದ ವಿವಿಧೆಡೆ ಬಸವ ಜಯಂತಿ ಅದ್ಧೂರಿ ಆಚರಣೆ
ಚಾಮರಾಜನಗರ

ನಗರದ ವಿವಿಧೆಡೆ ಬಸವ ಜಯಂತಿ ಅದ್ಧೂರಿ ಆಚರಣೆ

May 8, 2019

ಚಾಮರಾಜನಗರ: ನಗರದ ವಿವಿಧೆಡೆ ಮಹಾಮಾನವತಾವಾದಿ, ಭಕ್ತಿ ಭಂಡಾರಿ, ಕ್ರಾಂತಿಯೋಗಿ ಬಸವೇಶ್ವರರ ಜಯಂತಿಯನ್ನು ಅದ್ಧೂರಿ ಯಾಗಿ ಆಚರಿಸಲಾಯಿತು. ನಗರದ ಜಿಲ್ಲಾ ಬಿಜೆಪಿ ಕಚೇರಿ, ಜಿಲ್ಲಾ ಕಾಂಗ್ರೆಸ್ ಕಚೇರಿ, ಸಾರ್ವಜನಿಕ ಜಿಲ್ಲಾಸ್ಪತ್ರೆ, ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಭಾರತ್ ಸೇವಾದಳದ ಜಿಲ್ಲಾ ಕಾರ್ಯಾಲಯದಲ್ಲಿ ಬಸವ ಜಯಂತಿಯನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿ, ಪೂಜೆ ಸಲ್ಲಿಸಿ ಆಚರಣೆ ಮಾಡಲಾಯಿತು. ಜಿಲ್ಲಾ ಬಿಜೆಪಿ ಕಚೇರಿ: ನಗರದ ಬಿಜೆಪಿ ಜಿಲ್ಲಾ ಕಚೇರಿ ಯಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸ ಲಾಯಿತು. ಈ ವೇಳೆ…

`ಕಾಯಕವೇ ಕೈಲಾಸ’ ತತ್ವ ಸಾರಿದ ಬಸವಣ್ಣ
ಚಾಮರಾಜನಗರ

`ಕಾಯಕವೇ ಕೈಲಾಸ’ ತತ್ವ ಸಾರಿದ ಬಸವಣ್ಣ

May 8, 2019

ಕೊಳ್ಳೇಗಾಲ: ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶ ವನ್ನು ಜಗತ್ತಿಗೆ ಸಾರಿ ಹೇಳಿದ ವಿಶ್ವಗುರು ಬಸವಣ್ಣನವರು ತಮ್ಮ ವಚನಗಳ ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ ಎಂದು ತಹಶೀಲ್ದಾರ್ ಎಂ.ಆನಂದಯ್ಯ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಪ್ರಸ್ತುತ ಪ್ರಪಂಚ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಸವಣ್ಣನವರ ಮಾರ್ಗದಲ್ಲಿ ನಡೆದ ಶಿವ ಶರಣರ ವಚನಗಳಲ್ಲಿ ಪರಿಹಾರವಿದೆ. ಅಂತಹ ಶರಣ…

ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶ
ಚಾಮರಾಜನಗರ

ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶ

May 8, 2019

ಬದನಗುಪ್ಪೆ: ಚಾಮರಾಜನಗರ ತಾಲೂಕಿನ ಬದನಗುಪ್ಪೆ ಯಲ್ಲಿ ಸೋಮವಾರ ಬಿದ್ದ ಬಿರುಗಾಳಿ ಸಹಿತ ಮಳೆಗೆ 3 ಎಕರೆಯಲ್ಲಿ ಬೆಳೆಯ ಲಾಗಿದ್ದ ಬಾಳೆ ಫಸಲು ನೆಲಕ್ಕುರಳಿದೆ. ಗ್ರಾಮದ ಬಿ.ಪಿ.ನಾಗರಾಜಮೂರ್ತಿ ಅವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ 3 ಎಕರೆ ಬಾಳೆ ಫಸಲು ಬಿರುಗಾಳಿ ಮಳೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. 9 ತಿಂಗಳ ಬಾಳೆ ಫಸಲು ಕಟಾವಿನ ಹಂತಕ್ಕೆ ತಲುಪಿತ್ತು. ಜಮೀನಿನಲ್ಲಿ ಬೆಳೆದಿದ್ದ ಹೆಬ್ಬೇವು ಮತ್ತು ಬೇವಿನ ಮರಗಳು ಸಹ ಬುಡ ಸಮೇತ ಮುರಿದು ಬಿದ್ದಿವೆ. ಬಿರುಗಾಳಿ ಮಳೆಯ ಆರ್ಭಟಕ್ಕೆ ಸಿಲುಕಿದ ಫಸಲು…

ಚಾಮರಾಜನಗರದಲ್ಲಿ ಮಳೆಗಾಗಿ ಪರ್ಜನ್ಯ ವಿಶೇಷ ಪೂಜೆ
ಚಾಮರಾಜನಗರ

ಚಾಮರಾಜನಗರದಲ್ಲಿ ಮಳೆಗಾಗಿ ಪರ್ಜನ್ಯ ವಿಶೇಷ ಪೂಜೆ

April 30, 2019

ಪರಿಸರ ಸಂರಕ್ಷಣೆ, ಮರಗಿಡಗಳ ಪೋಷಣೆಯಿಂದ ಸಕಾಲಕ್ಕೆ ಮಳೆ ಚಾಮರಾಜನಗರ: ಪರಿಸರ ಸಂರಕ್ಷಿಸಿ ಮರ ಗಿಡಗಳನ್ನು ಪೋಷಿಸಿ ಬೆಳೆಸಿದಾಗ ಮಾತ್ರ ಸಕಾಲಕ್ಕೆ ಮಳೆ ಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ನಮ್ಮ ಸುತ್ತಮತ್ತಲಿನ ಪರಿಸರ ಸಂರಕ್ಷಿಸ ಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮನವಿ ಮಾಡಿದರು. ನಗರದ ಜನಾರ್ಧನ ಪ್ರತಿಷ್ಠಾನದ ವತಿ ಯಿಂದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ವರುಣನ ಕೃಪೆಗಾಗಿ ಶಿವನಿಗೆ ಏರ್ಪಡಿಸಿದ್ದ ಪರ್ಜನ್ಯ ವಿಶೇಷ ಪೂಜೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಮಧ್ಯ…

ತಮಿಳುನಾಡಿನ ನೀಲಗಿರಿಯ ಕೆ.ಪಾಲಾಡದಲ್ಲಿಅದ್ಧೂರಿ ಬಸವ, ಶ್ರೀಬಸವರಾಜ ಸ್ವಾಮೀಜಿ ಜಯಂತಿ ಆಚರಣೆ
ಚಾಮರಾಜನಗರ

ತಮಿಳುನಾಡಿನ ನೀಲಗಿರಿಯ ಕೆ.ಪಾಲಾಡದಲ್ಲಿಅದ್ಧೂರಿ ಬಸವ, ಶ್ರೀಬಸವರಾಜ ಸ್ವಾಮೀಜಿ ಜಯಂತಿ ಆಚರಣೆ

April 30, 2019

ಚಾಮರಾಜನಗರ: ತಮಿಳುನಾಡಿನ ನೀಲಗಿರಿಯ ಕೆ.ಪಾಲಾಡದ ಶ್ರೀಗುರುಬಸವ ಶಾಂತಿನಿಕೇತನ ಮಠದಲ್ಲಿ ಶ್ರೀ ಬಸವರಾಜ ಮಹಾಸ್ವಾಮೀಜಿ ಅವರ 100ನೇ ವರ್ಷದ ಜಯಂತಿ ಮಹೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಇದೇ ವೇಳೆ ಬಸವಾದಿ ಶರಣರ ತತ್ವ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿದ್ದ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನಕಪುರದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ವಹಿಸಿದ್ದರು. ಮರಿಯಾಲದ…

1 2 3 69