ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ಚಾಮರಾಜನಗರ

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

March 16, 2020

ಗುಂಡ್ಲುಪೇಟೆ,ಮಾ.15-ಇಲ್ಲಿನ ಪುರ ಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆಯೇ ಆಕಾಂಕ್ಷಿ ಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಗುಂಡ್ಲುಪೇಟೆ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಬಿಜೆಪಿ 13, ಕಾಂಗ್ರೆಸ್ 8, ಪಕ್ಷೇತರ ಹಾಗೂ ಎಸ್‍ಡಿಪಿಐ ತಲಾ ಒಂದು ಸದಸ್ಯರನ್ನು ಹೊಂದಿವೆ. ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಬಿಸಿಎಂ ಬಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ. ಇದರಿಂದ ಚುನಾ ವಣೆಯಲ್ಲಿ ಗೆಲುವು ಸಾಧಿಸಿದ್ದರೂ, ಯಾವುದೇ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತಿದ್ದ ಸದಸ್ಯ ರಲ್ಲಿ ರಾಜಕೀಯ ಚಟುವಟಿಕೆಗಳು ಚುರು ಕಾಗಿದ್ದು, ಒಟ್ಟಾರೆ ಅಧಿಕ ಬಹುಮತ ಹೊಂದಿರುವ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ.

ಅಧ್ಯಕ್ಷ ಸ್ಥಾನಕ್ಕೆ ಪೈಪೆÇೀಟಿ: ಅಧ್ಯಕ್ಷ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿರುವುದ ರಿಂದ ಬಿಜೆಪಿ ಬೆಂಬಲದಿಂದ ಚುನಾವಣೆ ಯಲ್ಲಿ ಗೆದ್ದಿರುವ ಬಿಸಿಎಂ-ಬಿಗೆ ಸೇರಿದ 10ನೇ ವಾರ್ಡ್ ಸದಸ್ಯ ನಾಗೇಶ್, 4ನೇ ವಾರ್ಡ್ ಸದಸ್ಯ ಕಿರಣ್‍ಗೌಡ ಹಾಗೂ 23ನೇ ವಾರ್ಡ್ ಸದಸ್ಯೆ ವೀಣಾ ಮಂಜು ನಾಥ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾ ಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ಆರಂಭಿಸಿದ್ದಾರೆ.

ಬಿಜೆಪಿ ಹಿರಿಯ ಕಾರ್ಯಕರ್ತ ಹಾಗೂ ಶಾಸಕ ನಿರಂಜನ್ ಕುಮಾರ್ ಆಪ್ತರಾಗಿ ರುವ ನಾಗೇಶ್ ಅವರಿಗೆ ಸಂಘ ಪರಿವಾ ರದ ಬೆಂಬಲವೂ ಇದೆ. ತಾವು ಅಧ್ಯಕ್ಷ ರಾಗಿ ಆಯ್ಕೆಯಾದರೆ ಎಲ್ಲಾ ಸದಸ್ಯರ ಸಹಕಾರ ಪಡೆದು ಪಟ್ಟಣದಲ್ಲಿ ಶುಚಿತ್ವ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿರೀಕ್ಷೆ ಹೊಂದಿದ್ದಾರೆ.

ಇದೇ ರೀತಿ ಮೊದಲ ಬಾರಿಗೆ ಬಿಜೆಪಿಯಿಂದ ಗೆಲುವು ಸಾಧಿಸಿದ ಯುವಕ ಕಿರಣ್‍ಗೌಡ, 4ನೇ ವಾರ್ಡ್‍ನಲ್ಲಿ ಸಾರ್ವ ಜನಿಕರಿಗಾಗಿ ಕಚೇರಿ ತೆರೆದು ಮತದಾರರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ತಾವು ಅಧ್ಯಕ್ಷರಾದರೆ ಇದೇ ರೀತಿ ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿನ ಸಮಸ್ಯೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲೇ ಇರುವುದು ಹಾಗೂ 2ನೇ ಬಾರಿಗೆ ಜಯ ಗಳಿಸಿರುವುದರಿಂದ ಮಹಿಳಾ ಸದಸ್ಯೆಯೂ ಆದ ತಮ್ಮನ್ನೇ ಅಧ್ಯಕ್ಷರನ್ನಾಗಿ ಶಾಸಕ ನಿರಂಜನಕುಮಾರ್ ಆಯ್ಕೆ ಮಾಡಲಿದ್ದಾರೆ. ಈ ಮೂಲಕ ಪಟ್ಟಣದ ಸಮಗ್ರ ಅಭಿ ವೃದ್ಧಿಗೆ ಶ್ರಮಿಸಲಿದ್ದೇನೆ ಎಂದು ವೀಣಾ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೂ ಭಾರೀ ಪೈಪೆÇೀಟಿ: ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 7 ಮಹಿಳಾ ಸದಸ್ಯರೂ ಆಕಾಂಕ್ಷಿಗಳಾಗಿದ್ದಾರೆ. ಸತತ 3 ಬಾರಿ ಜಯಗಳಿಸಿದ 11ನೇ ವಾರ್ಡ್ ಸದಸ್ಯೆ ಪುಷ್ಪಾ ವೆಂಕಟೇಶ್, ಎರಡನೇ ಬಾರಿಗೆ ಜಯಗಳಿಸಿದ 16ನೇ ವಾರ್ಡ್ ಸದಸ್ಯೆ ಮಂಜುಳಾ, 23ನೇ ವಾರ್ಡ್ ಸದಸ್ಯೆ ವೀಣಾ ಮಂಜುನಾಥ್(ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು ಇದು ಕೈ ತಪ್ಪಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೆÇೀಟಿ ನಡೆಸಲಿದ್ದಾರೆ ಎಂಬುದು ಗಮನಾರ್ಹ), ಮೊದಲ ಬಾರಿಗೆ ಜಯಗಳಿಸಿದ 4ನೇ ವಾರ್ಡ್ ಸದಸ್ಯೆ ದೀಪಿಕಾ ಅಶ್ವಿನ್, 3ನೇ ವಾರ್ಡ್ ಸದಸ್ಯೆ ಹೀನಾ ಕೌಸರ್ ಹಾಗೂ 1ನೇ ವಾರ್ಡ್ ಸದಸ್ಯೆ ಸಾಜಿರಾ ಹಿನಾ ಯತ್ ಸಹಾ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಒಟ್ಟಾರೆ ಮೊದಲ ಬಾರಿಗೆ ಬಿಜೆಪಿ ಆಡಳಿತ ಮಂಡಳಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಉತ್ತಮ ಸೇವಾ ಮನೋಭಾವನೆಯುಳ್ಳವರನ್ನು ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸು ವವರನ್ನು ಅಧ್ಯಕ್ಷ ಮತ್ತು ಉಪಾಧ್ಯಕರನ್ನಾಗಿ ಮಾಡಿ ಪಟ್ಟಣವನ್ನು ಮಾದರಿಯಾಗಿಸಲಿ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸೋಮಶೇಖರ್

Translate »