ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸಿ
ಮೈಸೂರು

ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸಿ

March 15, 2020

ಮೈಸೂರು, ಮಾ.14(ಆರ್‍ಕೆ)- ಕೋವಿಡ್-19 (ಕೊರೊನಾ ವೈರಸ್) ಸೋಂಕು ಹರಡದಂತೆ ವಿಶೇಷ ಎಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಶನಿವಾರ ವಿವಿಧ ಇಲಾಖೆಗಳ 90 ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು 90 ಮಂದಿ ಅಧಿಕಾರಿಗಳನ್ನು ಉಲ್ಲೇ ಖಿಸಿ ಸಾರ್ವತ್ರಿಕ ಪತ್ರ ಬರೆದಿರುವ ಜಿಲ್ಲಾಧಿ ಕಾರಿಗಳು, ಕೋವಿಡ್-19 ಹರಡುವುದನ್ನು ತಡೆ ಗಟ್ಟಲು ಸರ್ಕಾರದ ಆದೇಶದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ವನ್ನು ಕೈಗೊಳ್ಳಬೇಕೆಂದು ನಿರ್ದೇ ಶನ ನೀಡಿದ್ದಾರೆ.

ರಾಜ್ಯಕ್ಕೆ ವಿದೇಶದಿಂದ ಆಗಮಿ ಸುವ ಭಾರತೀಯರು ಹಾಗೂ ವಿದೇ ಶಿಯರು ಆಗಮಿಸಿದಾಗ ಅವರಿಗೆ ರೋಗ ಲಕ್ಷಣ ಇಲ್ಲದಿದ್ದರೂ (ಚಿ sಥಿmಠಿಣomಚಿಣiಛಿ) ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸ ಬೇಕು. ಇಡೀ ರಾಜ್ಯದಲ್ಲಿ ಇಂದಿ ನಿಂದ ಒಂದು ವಾರ ನಿರ್ಬಂಧ ಜಾರಿಯಲ್ಲಿರುವುದ ರಿಂದ ಸಿನಿಮಾ ಮಂದಿರ, ಮಾಲ್, ನಾಟಕ, ರಂಗ ಮಂದಿರ, ಪಬ್, ನೈಟ್ ಕ್ಲಬ್, ವಸ್ತುಪ್ರದರ್ಶನ, ಸಂಗೀತ ಕಾರ್ಯಕ್ರಮ, ಕ್ಲಬ್, ಮ್ಯಾರಥಾನ್, ಕ್ರೀಡಾಕೂಟ, ಮದುವೆ ಇನ್ನಿತರೆ ಜನ ಸೇರುವ ಕಾರ್ಯಕ್ರಮಗಳನ್ನು ನಡೆಸದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ ಗಳಿಗೆ ಆದಷ್ಟು ಕಡಿಮೆ ಸಂಖ್ಯೆಯ ಜನರು ಸೇರುವಂತೆ ತಿಳುವಳಿಕೆ ನೀಡಬೇಕು. ಹೆಚ್ಚು ಜನರು ಬಳಸುವ ಸ್ವಿಮ್ಮಿಂಗ್ ಪೂಲ್, ಜಿಮ್‍ಗಳು, ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳು ಹಾಗೂ ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಿಸಬೇಕು ಮತ್ತು ನಿಗದಿಯಾಗಿರುವ ಪರೀಕ್ಷೆಗಳನ್ನು ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ನಡೆಸಬೇಕು ಎಂದೂ ಅಭಿರಾಂ ಜಿ.ಶಂಕರ್ ತಿಳಿಸಿ ದ್ದಾರೆ. ವಿವಿಧ ದೇಶಗಳಿಗೆ ಭೇಟಿ ನೀಡಲಿರುವ ಐಟಿ- ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಆಯಾ ಕಂಪನಿಗಳು ಸೂಚಿಸುವಂತೆ ಕ್ರಮ ವಹಿಸಬೇಕು ಹಾಗೂ ಖಾಸಗಿ ವೈದ್ಯರು, ಆಸ್ಪತ್ರೆಗಳು, ನರ್ಸಿಂಗ್ ಹೋಂ ಗಳು 2020ರ ಫೆಬ್ರವರಿ 21ರ ನಂತರ ವಿದೇಶದಿಂದ ಬಂದು, ರೋಗ ಲಕ್ಷಣಗಳಿರುವವರು ತಮ್ಮ ಬಳಿಗೆ ಬಂದಲ್ಲಿ ತಡಮಾಡದೆ ಜಿಲ್ಲಾ ಆರೋಗ್ಯಾಧಿಕಾರಿ ಗಳಿಗೆ 104 ಸಹಾಯವಾಣಿ, ಫೋನ್ ಅಥವಾ ಫ್ಯಾಕ್ಸ್ ಮೂಲಕ ಮಾಹಿತಿ ನೀಡುವಂತೆಯೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Translate »