ಕೊರೊನಾ ಭೀತಿ; ನಗರಪಾಲಿಕೆ ತಂಡದಿಂದ ಮಾರುಕಟ್ಟೆ ಪರಿಶೀಲನೆ, ವರ್ತಕರಿಗೆ ಸೂಚನೆ
ಮೈಸೂರು

ಕೊರೊನಾ ಭೀತಿ; ನಗರಪಾಲಿಕೆ ತಂಡದಿಂದ ಮಾರುಕಟ್ಟೆ ಪರಿಶೀಲನೆ, ವರ್ತಕರಿಗೆ ಸೂಚನೆ

March 15, 2020

ಮೈಸೂರು, ಮಾ.14(ಎಂಟಿವೈ)- ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೇಯರ್ ಹಾಗೂ ನಗರಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಮತ್ತು ಆರೋಗ್ಯಾಧಿಕಾರಿ ಶನಿವಾರ ಬೆಳಿಗ್ಗೆ ಮೈಸೂರಿನ ದೇವರಾಜ ಮಾರು ಕಟ್ಟೆ, ಬೋಟಿ ಬಜಾರ್‍ಗೆ ತೆರಳಿ ಪರಿ ಶೀಲಿಸಿ, ಸ್ವಚ್ಛತೆ ಕಾಪಾಡುವಂತೆ ಅಲ್ಲಿನ ವರ್ತಕರಿಗೆ ಸೂಚನೆ ನೀಡಿದರು.

ಮೇಯರ್ ತಸ್ನೀಂ, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮತ್ತಿತರರು ದೇವರಾಜ ಮಾರುಕಟ್ಟೆ, ಬೋಟಿ ಬಜಾರ್ ಸುತ್ತಮುತ್ತ ಪರಿಶೀಲನೆ ನಡೆಸಿ ದರು. ಮಾರುಕಟ್ಟೆಯಲ್ಲಿ ಅಂಗಡಿಗಳ ಮುಂದೆ ಕಸ ಸುರಿದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

`ಕೊರೊನಾ ವೈರಾಣು ಹರಡುತ್ತಿದೆ. ಜತೆಗೆ ಬೇಸಿಗೆಯೂ ಆರಂಭವಾಗಿದೆ. ಸ್ವಚ್ಛತೆ ಕಾಪಾಡದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ’ ಎಂದು ವ್ಯಾಪಾರಿ ಗಳಲ್ಲಿ ಜಾಗೃತಿ ಮೂಡಿಸಲೆತ್ನಿಸಿದರು.

ಈ ವೇಳೆ ಮೇಯರ್ ತಸ್ನೀಂ, ಬೇಸಿಗೆ ಹಾಗೂ ಕೊರೊನಾ ವೈರಸ್ ಭೀತಿ ಹಿನ್ನೆಲೆ ಯಲ್ಲಿ ಪಾಲಿಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾರುಕಟ್ಟೆ ವ್ಯಾಪಾರಿ ಗಳಿಗೆ ಸ್ವಚ್ಛತೆ ಬಗ್ಗೆ ಮನವರಿಕೆ ಮಾಡಿ ಕೊಡಲು ಇಂದು ಸ್ಥಳ ಪರಿಶೀಲನೆ ನಡೆಸಲಾಯಿತು ಎಂದರು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ. ಗೋಪಿ, ಸ್ವಚ್ಛತೆ ಕಾಪಾಡಲು ಪೌರಕಾರ್ಮಿ ಕರು, ಪರಿಸರ ಅಭಿಯಂತರರು, ಆರೋ ಗ್ಯಾಧಿಕಾರಿಗಳು, ನಿರೀಕ್ಷಕರು ಶ್ರಮಿಸುತ್ತಿ ದ್ದಾರೆ. ಸಾರ್ವಜನಿಕರೂ ಕೈಜೋಡಿಸ ಬೇಕು ಎಂದು ಮನವಿ ಮಾಡಿದರು.

ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮಾತನಾಡಿ, ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳಿಗೆ ಹಲವು ಬಾರಿ ಸೂಚನೆ ನೀಡಿದ್ದರೂ ಸ್ವಚ್ಛತೆ ಕಾಪಾಡುವಲ್ಲಿ ವಿಫಲ ರಾಗಿದ್ದಾರೆ. ಸದ್ಯ ಕೊರೊನಾ ವೈರಸ್ ಭೀತಿ ಎದುರಾಗಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಲೇಬೇಕಿದೆ. ಇದನ್ನು ವರ್ತಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ಯೋಗ ಸೆಂಟರ್ ಸೇರಿದಂತೆ ವಿದೇಶಿ ಗರು ಬಂದಿರುವ ಸ್ಥಳಗಳತ್ತ ನಿಗಾ ವಹಿಸಿ, ಕೊರೊನಾ ಹರಡದಂತೆ ಕ್ರಮ ಕೈಗೊಳ್ಳ ಲಾಗುತ್ತಿದೆ. ವಿದೇಶಿಯರಿಂದ ಘೋಷಣಾ ಪತ್ರ ಪಡೆಯಲು ತಂಡವೊಂದನ್ನು ರಚಿಸ ಲಾಗುವುದು ಎಂದರು. ಈ ಸಂದರ್ಭ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಎಂ.ಎಸ್.ಶೋಭ, ಶಾರದಮ್ಮ, ಉಷಾ ನಾರಾಯಣ್, ಭಾಗ್ಯ ಮಾದೇಶ್, ಅಯಾಜ್ ಪಾಷ ಮತ್ತಿತರರು ಹಾಜರಿದ್ದರು.

Translate »