ಕೊರೊನಾ: ಬಂಡೀಪುರದಲ್ಲಿ ಸಫಾರಿ, ರೆಸಾರ್ಟ್ ಬಂದ್
ಚಾಮರಾಜನಗರ

ಕೊರೊನಾ: ಬಂಡೀಪುರದಲ್ಲಿ ಸಫಾರಿ, ರೆಸಾರ್ಟ್ ಬಂದ್

March 16, 2020

ಗುಂಡ್ಲುಪೇಟೆ,ಮಾ.15(ಸೋಮ್.ಜಿ)-ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬಂಡೀ ಪುರದಲ್ಲಿ ಸಫಾರಿ ಸ್ಥಗಿತಗೊಳಿಸಿ, ಸುತ್ತಮು ತ್ತಲಿನ ರೆಸಾರ್ಟ್‍ಗಳನ್ನು ಬಂದ್ ಮಾಡಲಾಗಿದೆ.

ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.15ರಿಂದ 22ರವರೆಗೆ ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೊರಡಿ ಸಿದ ಆದೇಶದ ಮೇರೆಗೆ ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್‍ಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ನಂಜುಂಡಯ್ಯ ಖುದ್ದಾಗಿ ಪರಿಶೀಲಿಸಿದರು.

ಬಂಡೀಪುರ ಸುತ್ತಲಿನ ಕಂಟ್ರಿ ಕ್ಲಬ್, ಸರಾಯ್, ವಿಂಡ್ ಫ್ಲವರ್, ಜಂಗಲ್ ಲಾಡ್ಜ್ ಸೇರಿದಂತೆ ಪ್ರತಿಷ್ಠಿತ ರೆಸಾರ್ಟ್ ಗಳಲ್ಲಿ ಗ್ರಾಹಕರಿಲ್ಲದಿರುವುದನ್ನು ಖಚಿತ ಪಡಿಸಿಕೊಂಡ ತಹಶೀಲ್ದಾರ್, ಯಾವುದೇ ರೆಸಾರ್ಟ್‍ಗಳಲ್ಲಿ ವಿದೇಶಿಗರು ಬುಕಿಂಗ್ ಮಾಡಿದ್ದರೆ, ಇಲ್ಲವೇ ಆಗಮಿಸಿದ್ದರೆ ಕೂಡಲೇ ಮಾಹಿತಿ ನೀಡಬೇಕು. ಯಾವುದೇ ಮುಂಗಡ ಬುಕಿಂಗ್ ಇದ್ದರೂ ಅವುಗಳನ್ನು ರದ್ದುಪಡಿಸಿ ಎಂದು ತಾಕೀತು ಮಾಡಿದರು. ನಂತರ ಅರಣ್ಯ ಇಲಾಖೆ ಸಫಾರಿ ಕೌಂಟರಿಗೆ ತೆರಳಿ ಪರಿಶೀಲನೆ ನಡೆಸಿದರು.

Translate »