ಕೊರೊನಾ: ವಿವಿಧ ಸರ್ಕಾರಿ ಸೇವೆಗಳು ತಾತ್ಕಾಲಿಕ ಸ್ಥಗಿತ
ಚಾಮರಾಜನಗರ

ಕೊರೊನಾ: ವಿವಿಧ ಸರ್ಕಾರಿ ಸೇವೆಗಳು ತಾತ್ಕಾಲಿಕ ಸ್ಥಗಿತ

March 21, 2020

ಚಾಮರಾಜನಗರ,ಮಾ.20-ಜಿಲ್ಲೆ ಯಲ್ಲಿ ಕೊರೊನಾ ವೈರಸ್ ಹರಡದಂತೆ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂ ಡಿದ್ದು, ಏಕಕಾಲದಲ್ಲಿ ಸಾರ್ವಜನಿಕರು ಒಟ್ಟಿಗೆ ಸೇರುವುದನ್ನು ತಪ್ಪಿಸುವ ಸಲು ವಾಗಿ ಹಲವು ಸರ್ಕಾರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಾರ್ವಜ ನಿಕರು ಸರ್ಕಾರದ ವಿವಿಧ ಸೇವೆಗಳನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಮಟ್ಟದ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಏಕಕಾಲ ದಲ್ಲಿ ಸಾರ್ವಜನಿಕರು ಒಂದೆಡೆ ಸೇರುವು ದರಿಂದ ವೈರಾಣು ಹರಡುವ ಸಂಭವವಿ ರುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಮುಂದಿನ ಆದೇಶದವರೆಗೆ ವಿವಿಧ ಸೇವೆಗಳನ್ನು ತಾತ್ಕಾ ಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.

ಸ್ಥಗಿತಗೊಂಡ ಸೇವೆಗಳು: ಜಿಲ್ಲಾ ವ್ಯಾಪ್ತಿ ಯಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಅಟಲ್ ಜೀ, ಸೇವಾ ಸಿಂಧು, ಜನಸ್ನೇಹಿ ಕೇಂದ್ರ, ಸ್ಪಂದನಾ ಕೇಂದ್ರ ಮತ್ತು ಆಧಾರ್ ಕೇಂದ್ರ ಗಳಲ್ಲಿ ಸಾರ್ವಜನಿಕರಿಗೆ ನೀಡಲಾ ಗುತ್ತಿರುವ ಸೇವೆಗಳನ್ನು ಸ್ಥಗಿತಗೊಳಿಸ ಲಾಗಿದೆ. ಬ್ಯಾಂಕ್, ಅಂಚೆ ಕಚೇರಿ, ಇತರೆ ಕೇಂದ್ರಗಳಲ್ಲಿ ಒದಗಿಸುತ್ತಿರುವ ಆಧಾರ್ ಸೇವೆಗಳು ಸಹ ಸ್ಥಗಿತಗೊಳಿಸಲಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾ ಗುತ್ತಿರುವ ಹೊಸ ವಾಹನ ಚಾಲನಾ ಪರ ವಾನಗಿ, ಕಲಿಯುವವರ ಪರವಾನಗಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸ್ಥಿರ ಆಸ್ತಿ ನೊಂದಣಿ ಸೇವೆಗಳು ಸಹ ಸ್ಥಗಿತ ವಾಗಲಿವೆ ಎಂದರು. ನಗರ ಸ್ಥಳೀಯ ಸಂಸ್ಥೆಗಳು ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವ ಜನಿಕರಿಗೆ ನೀಡಲಾಗುತ್ತಿರುವ ಸೇವೆಗ ಳಾದ ಖಾತೆ, ಸಾರ್ವಜನಿಕ ಹರಾಜು, ಲೈಸೆನ್ಸ್ ನೀಡುವಿಕೆ, ಜನನ ಮರಣ ಪ್ರಮಾಣ ಪತ್ರ ವಿತರಿಸುವ ಸೇವೆಗಳು, ಗ್ರಾಮ ಸಭೆಗಳು, ಬಾಪೂಜೀ ಸೇವಾ ಕೇಂದ್ರಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ವಿವರಿಸಲಾಗಿರುವ ನಿರ್ಬಂಧಿತ ಸೇವೆಗಳ ಪಟ್ಟಿಗೆ ಹೊಸ ಸೇವೆಗಳನ್ನು ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಪರಿಸ್ಥಿತಿಯ ತೀವ್ರತೆ ಅನುಗುಣ ವಾಗಿ ಕ್ರಮ ವಹಿಸಲಾಗುವುದು ಎಂದರು.

ಸ್ಥಗಿತಗೊಳ್ಳದ ಸೇವೆಗಳು: ತುರ್ತು ಹಾಗೂ ದಿನನಿತ್ಯದ ಸೇವೆಗಳಾದ ಬ್ಯಾಂಕ್, ಅಂಚೆ ಕಚೇರಿ, ಕೆಎಸ್‍ಆರ್‍ಟಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇವೆಗಳು, ಸ್ವಚ್ಛತಾ ಕಾರ್ಯಕ್ರಮಗಳು, ಕುಡಿಯುವ ನೀರು, ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಶವ ಸಂಸ್ಕಾರ, ತುರ್ತು ಸೇವೆಗಳು ನಿರ್ಬಂ ಧಿತ ಆದೇಶಗಳಿಗೆ ಅನ್ವಯವಾಗುವುದಿಲ್ಲ.

ಸರ್ಕಾರಿ ನೌಕರರಿಗೆ ರಜೆ ಇಲ್ಲ: ಹಲವಾರು ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದರೂ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿಲ್ಲ. ಎಲ್ಲಾ ಅಧಿ ಕಾರಿ ಸಿಬ್ಬಂದಿ ಎಂದಿನಂತೆ ಕಚೇರಿ ಯಲ್ಲಿ ಲಭ್ಯರಿರಬೇಕು. ಸರ್ಕಾರಿ ಕಚೇರಿ ಗಳಿಗೆ ಅಥವಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವ ಜನಿಕರು ಭೇಟಿ ನೀಡುವುದನ್ನು ಸಾಧ್ಯವಾ ದಷ್ಟು ಮಟ್ಟಿಗೆ ತಡೆಯುವುದು ನಮ್ಮ ಉದ್ದೇಶ. ಮೇಲ್ಕಂಡ ಸೇವೆಗಳಲ್ಲಿ ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿ ಸಿದ ಪ್ರಕರಣಗಳು ಮತ್ತು ಅತೀ ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ. ಆದೇಶ ಪಾಲಿಸದಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದರು.

ತೆರಕಣಾಂಬಿ, ಗುಂಡ್ಲುಪೇಟೆ ಎಪಿಎಂಸಿ ಸ್ಥಗಿತ: ಜಿಲ್ಲೆಯ ತೆರಕಣಾಂಬಿ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ವ್ಯಾಪಾರಕ್ಕಾಗಿ ಗಡಿಗೆ ಹೊಂದಿಕೊಂಡಿ ರುವ ತಮಿಳುನಾಡು ಮತ್ತು ಕೇರಳ ರಾಜ್ಯಗಳ ವ್ಯಾಪಾರಿಗಳು ಆಗಮಿಸುವುದ ರಿಂದ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ.20ರ ಮಧ್ಯರಾತ್ರಿಯಿಂದ ಮಾ.29ರ ಮಧ್ಯರಾತ್ರಿ ವರೆಗೆ ಗುಂಡ್ಲುಪೇಟೆ ಮತ್ತು ತೆರಕಣಾಂಬಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವ್ಯಾಪಾ ರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಲಾಗಿದೆ ಎಂದರು. ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಸೇರುವಂತಹ ಸ್ಥಳಗಳಲ್ಲಿ ನಡೆಯುವ ಜಾತ್ರಾ ಮಹೋ ತ್ಸವ, ಸಭೆ, ಸಮಾರಂಭ, ಇನ್ನಿತರ ಸಾರ್ವಜನಿಕ ಕಾರ್ಯಕ್ರಮ ಗಳನ್ನು ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಮಾ.29ರವರೆಗೆ ವಿಸ್ತರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಇತರರು ಹಾಜರಿದ್ದರು.

ಮೂವರ ಪರೀಕ್ಷಾ ವರದಿ ನೆಗೆಟಿವ್
ಚಾಮರಾಜನಗರ,ಮಾ.20-ಜಿಲ್ಲೆಗೆ ವಿದೇಶದಿಂದ ಆಗಮಿಸಿದವರ ಪೈಕಿ ಮೂವರ ಕಫÀ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಸಂಬಂಧ ಪ್ರಾವಿಷನಲ್ ವರದಿ ಬಂದಿದ್ದು, ಮೂವರ ಪರೀಕ್ಷಾ ವರದಿಯಲ್ಲೂ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ವಿದೇಶದಿಂದ ಆಗಮಿಸಿದವರ ಪೈಕಿ ತಪಾಸಣೆ ನಡೆಸಿ ಮೂವರ ಕಫ ಹಾಗೂ ರಕ್ತದ ಮಾದರಿಯನ್ನು ಮೈಸೂರಿನ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ವರದಿಯು ನೆಗೆಟಿವ್ ಆಗಿದೆ. ಆದರೂ ಸಹ ಈ ಮೂವರನ್ನು ಆಸ್ಪತ್ರೆಯಲ್ಲಿಯೇ ಇರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಇಂದೂ ಸಹ ವಿದೇಶದಿಂದ 10 ಮಂದಿ ಬಂದಿದ್ದಾರೆ. ಎಲ್ಲರೂ ಆರೋಗ್ಯ ವಾಗಿದ್ದಾರೆ. ಈ ಎಲ್ಲರನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ನಿಗಾ ವಹಿಸಲಾಗುತ್ತಿದೆ ಎಂದರು.

ಒಟ್ಟಾರೆ ಇದುವರೆಗೆ 33 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. 26 ಮಂದಿ ಯನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಲ್ವರು 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ ಎಂದರು.

ತಮಿಳುನಾಡು-ಕೇರಳಕ್ಕೆ ವಾಹನ ಸಂಚಾರ ನಿಷಿದ್ಧ
ಚಾಮರಾಜನಗರ,ಮಾ.20-ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಚಾಮರಾಜನಗರ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸರ್ಕಾರಿ ಸಾರಿಗೆ (ಕೆಎಸ್‍ಆರ್‍ಟಿಸಿ) ಮತ್ತು ಖಾಸಗಿ ಸಾರಿಗೆ (ಆಗಮನ ಮತ್ತು ನಿರ್ಗಮನ) ವಾಹನ ಸಂಚಾರವನ್ನು ಮಾ.20ರ ಮಧ್ಯರಾತ್ರಿಯಿಂದ ಮಾ.29ರ ಮಧ್ಯರಾತ್ರಿಯವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿ ಡಿಸಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

ಮಡಿಕೇರಿ:ಗಡಿಭಾಗವಾದ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 6 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು- ಕಾಸರಗೋಡು ನಡುವಿನ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಸಂಪರ್ಕವನ್ನು ಕಡಿತಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

Translate »