Tag: Chamarajanagar

ರಾಜ್ಯ ಬಜೆಟ್: ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಹೆಸರೇ ಪ್ರಸ್ತಾಪವಿಲ್ಲ
ಚಾಮರಾಜನಗರ

ರಾಜ್ಯ ಬಜೆಟ್: ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಹೆಸರೇ ಪ್ರಸ್ತಾಪವಿಲ್ಲ

March 6, 2020

ಚಾಮರಾಜನಗರ, ಮಾ.5- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ಬಜೆಟ್‍ನಲ್ಲಿ ಗಡಿಜಿಲ್ಲೆ ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಜಿಲ್ಲೆಯ ಹೆಸರೇ ಪ್ರಸ್ತಾಪ ಮಾಡದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದ್ದು, ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಮಂಡಿಸಿದ 2020-21ನೇ ಸಾಲಿನ ಬಜೆಟ್‍ನಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗ ಲಿದೆ. ಹೊಸ-ಹೊಸ ಯೋಜನೆಗಳು ಜಾರಿಯಾಗಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಯಾಗಲಿದೆ. ಕೈಗಾರಿಕೆಗಳು ಸ್ಥಾಪನೆ ಗೊಂಡು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯಲಿದೆ ಎಂಬ ನಿರೀಕ್ಷೆಯನ್ನು ಜಿಲ್ಲೆ ಜನರು ಇಟ್ಟುಕೊಂಡಿದ್ದರು. ಈ ಎಲ್ಲಾ ನಿರೀಕ್ಷೆ…

ಉಚಿತ ಲ್ಯಾಪ್‍ಟಾಪ್ ವಿತರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಚಾಮರಾಜನಗರ

ಉಚಿತ ಲ್ಯಾಪ್‍ಟಾಪ್ ವಿತರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

March 5, 2020

ಚಾಮರಾಜನಗರ, ಮಾ.4 (ಎಸ್‍ಎಸ್)- ಸರ್ಕಾರಿ ಇಂಜಿನಿಯ ರಿಂಗ್ ಪದವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆಲ್‍ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ಸಮಾವೇಶಗೊಂಡ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದರು. ಬಳಿಕ, ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಲ್.ಆನಂದ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರವು ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್…

ಬಾಲ್ಯವಿವಾಹದ ದುಷ್ಪರಿಣಾಮ ಬಗ್ಗೆ ಅರಿವು ಮೂಡಿಸಿ: ಸಲಹೆ
ಚಾಮರಾಜನಗರ

ಬಾಲ್ಯವಿವಾಹದ ದುಷ್ಪರಿಣಾಮ ಬಗ್ಗೆ ಅರಿವು ಮೂಡಿಸಿ: ಸಲಹೆ

March 3, 2020

ಚಾಮರಾಜನಗರ, ಮಾ.2- ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿನಿಯರು ಪೋಷಕರಿಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಸಿ.ಜೆ.ವಿಶಾಲಾಕ್ಷಿ ಸಲಹೆ ನೀಡಿದರು. ನಗರದ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಬಾಲ್ಯವಿವಾಹ ನಿಷೇಧ, ವಿಶ್ವ ಗ್ರಾಹಕರ ಹಕ್ಕುಗಳ ಕುರಿತ ಕಾನೂನು ಅರಿವು ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಕಲಿಯುವ ವಯಸ್ಸಿನಲ್ಲಿ ಮಕ್ಕಳಿಗೆ ವಿವಾಹ ಮಾಡುವುದರಿಂದ ಬಾಲ್ಯ…

ದೆಹಲಿ ಗಲಭೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ
ಚಾಮರಾಜನಗರ

ದೆಹಲಿ ಗಲಭೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ

February 28, 2020

ಚಾಮರಾಜನಗರ, ಫೆ.27- ದೆಹಲಿ ಗಲಭೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಲಾರಿ ನಿಲ್ದಾಣದಲ್ಲಿ ಜಮಾಯಿ ಸಿದ ಎಸ್‍ಡಿಪಿಐ ಕಾರ್ಯಕರ್ತರು, ಜಿಲ್ಲಾ ಧ್ಯಕ್ಷ ಎನ್. ಖಲೀಲ್ ಉಲ್ಲಾ ನೇತೃತ್ವದಲ್ಲಿ ಮೆರವಣಿಗೆ ಹೊರಟು ಡಿವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ದೆಹಲಿ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ…

ಗುಂಡ್ಲುಪೇಟೆ ಪಿಕಾರ್ಡ್ ಬ್ಯಾಂಕ್  ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಚಾಮರಾಜನಗರ

ಗುಂಡ್ಲುಪೇಟೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

February 28, 2020

ಗುಂಡ್ಲುಪೇಟೆ, ಫೆ.27 (ಸೋಮ್.ಜಿ)- ಇಲ್ಲಿನ ಪಿಕಾರ್ಡ್ ಬ್ಯಾಂಕ್ ನೂತನ ಅಧ್ಯಕ್ಷ ರಾಗಿ ಎನ್.ಮಲ್ಲೇಶ್ ಮತ್ತು ಉಪಾಧ್ಯಕ್ಷ ರಾಗಿ ಗೌರಮ್ಮ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಇಲ್ಲಿನ ಪಿಕಾರ್ಡ್ ಆಡಳಿತ ಮಂಡಳಿಯಲ್ಲಿ ಒಟ್ಟು 14 ಮಂದಿ ನಿರ್ದೇ ಶಕರಿದ್ದು, ಬಿಜೆಪಿ 10 ಮತ್ತು ಕಾಂಗ್ರೆಸ್ 4 ನಿರ್ದೇಶಕರಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಎನ್.ಮಲ್ಲೇಶ್ ಮತ್ತು ಉಪಾಧ್ಯಕ್ಷರಾಗಿ ಗೌರಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ರೈತರ ಹಿತ ಕಾಪಾಡಿ…

ಮಹದೇಶ್ವರಬೆಟ್ಟ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ
ಚಾಮರಾಜನಗರ

ಮಹದೇಶ್ವರಬೆಟ್ಟ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ

January 24, 2020

ಚಾಮರಾಜನಗರ, ಜ.23- ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೈಗೊಂಡಿ ರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮತ್ತು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಇಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ…

ಯಳಂದೂರು ತಾಪಂ ಅಧ್ಯಕ್ಷರ ಅವಿರೋಧ ಆಯ್ಕೆ
ಚಾಮರಾಜನಗರ

ಯಳಂದೂರು ತಾಪಂ ಅಧ್ಯಕ್ಷರ ಅವಿರೋಧ ಆಯ್ಕೆ

January 24, 2020

ಯಳಂದೂರು, ಜ.23(ವಿ.ನಾಗರಾಜು)- ತಾಪಂ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದೆ ಉಪಾಧ್ಯಕ್ಷರಾಗಿದ್ದ ಮಲ್ಲಾಜಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಭಾಗ್ಯಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಆಗಿದೆ ಎಂದು ಚುನಾವಣಾ ಧಿಕಾರಿ ನಿಕಿತಾ ಚಿನ್ನಸ್ವಾಮಿ ತಿಳಿಸಿದರು. ಭಾಗ್ಯಮ್ಮ ಮಾತನಾಡಿ, ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದು ತುಂಬಾ ಖುಷಿ ತಂದಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರ ಮೇರೆಗೆ ನನಗೆ ಉಪಾಧ್ಯಕ್ಷ ಸ್ಥಾನ ದೊರಕಿದ್ದು, ಪಕ್ಷಕ್ಕೆ ಮತ್ತು ತಾಲೂಕಿನ ಜನತೆಗೆ ಚಿರಋಣಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದರು. ಶ್ರೀಮತಿ…

ಚಾ.ನಗರ ಜಿಲ್ಲೆ ಜನಪದರ ಶ್ರೀಮಂತ ನಾಡು
ಚಾಮರಾಜನಗರ

ಚಾ.ನಗರ ಜಿಲ್ಲೆ ಜನಪದರ ಶ್ರೀಮಂತ ನಾಡು

January 24, 2020

ಹನೂರು, ಜ.23(ಸೋಮಶೇಖರ್)- ಚಾ.ನಗರ ಜಿಲ್ಲೆ ಜನಪದರ ಶ್ರೀಮಂತನಾಡು, ಅಕ್ಷರ ಜ್ಞಾನವೇ ಇಲ್ಲದವರು ಜನಪದರು, ಅವರು ಕಟ್ಟಿಕೊಟ್ಟ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆ ನಮ್ಮದಾಗಿದೆ. ವೈಭವಯುತ ರಾಜವಂಶ ರಾಜ್ಯವಾಳಿದ ಐತಿಹ್ಯ ನಮಗಿದೆ. ಮೊಟ್ಟ ಮಾದಲ ಮಹಾಕಾವ್ಯವನ್ನು ಕೊಡುಗೆ ಯಾಗಿ ಕೊಟ್ಟ ಪುಣ್ಯ ಜಿಲ್ಲೆ ಇದು. ನನಗೆ ಹೆಸರು ತಂದು ಕೊಟ್ಟಿದ್ದು ಈ ಜಿಲ್ಲೆಯ ಮಹದೇಶ್ವರರು ಎಂದು ಜಾನಪದ ತಜ್ಞ, ವಿದ್ವಾಂಸ ಡಾ. ರಾಜಶೇಖರ್ ಹೇಳಿದರು. ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ 10ನೇ ಸಾಹಿತ್ಯ…

ವಿವೇಕಾನಂದರು ಆಧುನಿಕ ಭಾರತ ಯುವಜನರ ಪ್ರೇರಕಶಕ್ತಿ
ಚಾಮರಾಜನಗರ

ವಿವೇಕಾನಂದರು ಆಧುನಿಕ ಭಾರತ ಯುವಜನರ ಪ್ರೇರಕಶಕ್ತಿ

January 13, 2020

ಚಾಮರಾಜನಗರ, ಜ.12- ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಸಂದೇಶದ ಮೂಲಕ ದೇಶದ ಯುವಜನತೆಯನ್ನು ಬಡಿ ದೆಬ್ಬಿಸಿದ ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಯುವಜನರ ಪ್ರೇರಕಶಕ್ತಿಯಾಗಿದ್ದಾರೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಜೆ.ಎಚ್. ಪಟೇಲ್ ಸಭಾಂಗಣ ದಲ್ಲಿಂದು ರಾಷ್ಟ್ರೀಯ ಯುವ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಬಲೀಕರಣ ಕೇಂದ್ರದ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು…

ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾದೇವಿ ಪೂಜೆ
ಚಾಮರಾಜನಗರ

ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾದೇವಿ ಪೂಜೆ

January 13, 2020

ಗುಂಡ್ಲುಪೇಟೆ, ಜ.11(ಸೋಮ್.ಜಿ)- ಪಟ್ಟಣದಲ್ಲಿರುವ ಪುರಾತನ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾ ದೇವಿಯ ಪೂಜೆಯನ್ನು ವಿಜೃಂಭಣೆ ಯಿಂದ ನೆರವೇರಿಸಲಾಯಿತು. ಬನದ ಹುಣ್ಣಿಮೆಯ ದಿನದಂದು ನಡೆಯುವ ಆರಿದ್ರಾದೇವಿ ಪೂಜೆಗಾಗಿ ದೇವಾಲಯವನ್ನು ಶುದ್ಧೀಕರಿಸಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾ ಗಿತ್ತು. ಗುರುವಾರ ರಾತ್ರಿ ಅಂಧಕಾಸುರನ ಸಂಹಾರ ಕಾರ್ಯಕ್ರಮದ ನಂತರ ಶುಕ್ರವಾರ ದಂದು ಮುಂಜಾನೆಯಿಂದಲೇ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಮತ್ತು ಕಣ್ಣನ್ ನೇತೃತ್ವದಲ್ಲಿ ದೇವರಿಗೆ ಅಭಿ ಷೇಕ, ಪೂಜೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು. ಈ ವಿಶೇಷ ಪೂಜಾ…

1 2 3 4 74
Translate »