ಚಾ.ನಗರ ಜಿಲ್ಲೆ ಜನಪದರ ಶ್ರೀಮಂತ ನಾಡು
ಚಾಮರಾಜನಗರ

ಚಾ.ನಗರ ಜಿಲ್ಲೆ ಜನಪದರ ಶ್ರೀಮಂತ ನಾಡು

January 24, 2020

ಹನೂರು, ಜ.23(ಸೋಮಶೇಖರ್)- ಚಾ.ನಗರ ಜಿಲ್ಲೆ ಜನಪದರ ಶ್ರೀಮಂತನಾಡು, ಅಕ್ಷರ ಜ್ಞಾನವೇ ಇಲ್ಲದವರು ಜನಪದರು, ಅವರು ಕಟ್ಟಿಕೊಟ್ಟ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆ ನಮ್ಮದಾಗಿದೆ. ವೈಭವಯುತ ರಾಜವಂಶ ರಾಜ್ಯವಾಳಿದ ಐತಿಹ್ಯ ನಮಗಿದೆ. ಮೊಟ್ಟ ಮಾದಲ ಮಹಾಕಾವ್ಯವನ್ನು ಕೊಡುಗೆ ಯಾಗಿ ಕೊಟ್ಟ ಪುಣ್ಯ ಜಿಲ್ಲೆ ಇದು. ನನಗೆ ಹೆಸರು ತಂದು ಕೊಟ್ಟಿದ್ದು ಈ ಜಿಲ್ಲೆಯ ಮಹದೇಶ್ವರರು ಎಂದು ಜಾನಪದ ತಜ್ಞ, ವಿದ್ವಾಂಸ ಡಾ. ರಾಜಶೇಖರ್ ಹೇಳಿದರು. ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ನಮ್ಮ ನೆಲದಲ್ಲಿ ನಮ್ಮ ಸಂಸ್ಕøತಿಯನ್ನು ಕಲಿತು ಗೌರವಿಸುವಂತಾಗಬೇಕು. ಸಮಾಜದಲ್ಲಿ ಒಂದು ವರ್ಗಕ್ಕೆ ಸಿಗುವ ವಿದ್ಯೆ, ಮತ್ತೊಂದು ವರ್ಗಕ್ಕೆ ಸಿಗುತ್ತಿಲ್ಲ. ಹಾಗಾಗಿ ಶಿಕ್ಷಣದಲ್ಲಿ ತಾರತಮ್ಯ ನೀತಿ ನಡೆಯತ್ತಿದೆ. ಇದು ಶ್ರೀಮಂತರು ಹಾಗೂ ರಾಜಕಾರಣಿಗಳು ಮಾಡುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎನ್. ಮಹೇಶ್ ಮಾತನಾಡಿ, ಇಡೀ ದೇಶ ವಿಷಮ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಗಡಿನಾಡಿನಲ್ಲಿ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಪೌರತ್ವದ ಬಗ್ಗೆ ಪರ, ವಿರೋಧ ಮಾತನಾಡಿ ರಾಜಕೀಯ ಮಾತನಾಡುವವರು ಕಣ್ಣು, ಕಿವಿ ತೆರೆದುಕೊಳ್ಳಲಿ, ದೇಶದ ಜ್ವಲಂತ ಸಮಸ್ಯೆಗೆ ಧ್ವನಿಯಾಗಲಿ ಎಂದರು.

500 ವರ್ಷ ಇತಿಹಾಸವಿರುವ ಹಿಂದಿ ಭಾಷೆ ಎರಡೂವರೆ ಸಾವಿರ ವರ್ಷ ಇತಿಹಾಸವಿರುವ ನಮ್ಮ ಕನ್ನಡದ ಮೇಲೆ ಸವಾರಿ ಮಾಡುತ್ತಿದೆ. ಸಂವಿಧಾನದ ಅನುಸೂಚಿಯಲ್ಲಿ 22 ಭಾಷೆ ಸಮಾನ ರಾಷ್ಟ್ರೀಯ ಭಾಷೆಗೆ ನೀಡಲಾಗಿದೆ. 22 ಭಾಷೆಗಿಲ್ಲದ ಗೌರವ ಹಿಂದಿಗೆ ನೀಡಲಾಗಿದೆ. ಸಂವಿಧಾನದ 344, 351ರ ವಿಧಿ ಇದಕ್ಕೆ ಕಾರಣವಾಗಿದ್ದು, ಇದನ್ನು ರದ್ದು ಮಾಡಲು ನಾನು ಕೇಂದ್ರವನ್ನು ಆಗ್ರಹಿ ಸುವೆ. ಇಂದಿನ ಸಮ್ಮೇ ಳನದಲ್ಲಿ ಆಯಾ ಭಾಷೆಯ ಲ್ಲಿಯೇ ಕೇಂದ್ರದ ಪರೀಕ್ಷಾ ಪದ್ಧತಿ ಬದಲಾಗಲಿ ಎಂಬ ನಿರ್ಣಯವಾಗಲಿ ಎಂದರು.

ಸರ್ವಾಧ್ಯಕ್ಷ ಚಾಮಶೆಟ್ಟಿ ಮಾತನಾಡಿ, ನಮ್ಮ ಕನ್ನಡ ಸಾಹಿತ್ಯವು ಹಲವಾರು ಕನ್ನಡರತ್ನಗಳಿಂದ ತುಂಬಿದೆ. ಅದರಲ್ಲಿ ಸತ್ಯವಿದೆ, ಸತ್ವವಿದೆ, ಶಕ್ತಿಯಿದೆ. ಇಷ್ಟಾದರೂ ಇಂಗ್ಲಿಷ್ ಭಾಷೆ ನಮ್ಮ ಕನ್ನಡದ ಭಾಷೆಯನ್ನು ಮಂಜಿನಂತೆ ಆವರಿಸಿರುವುದು ಒಂದು ದುರದೃಷ್ಟಕರ. ಸಾಹಿತ್ಯ ಸಮ್ಮೇಳನದ ಹಬ್ಬ ಒಂದು ಸಂತೋಷ, ಸಂಭ್ರಮ, ಸಡಗರ ಹಾಗೂ ಮನೋರಂಜನೆ ಯನ್ನು ಉಂಟು ಮಾಡಿದೆ.

ಕನ್ನಡ ತುಂಬಾ ಪ್ರಾಚೀನ ಭಾಷೆ. ಸಾಧಾ ರಣವಾಗಿ ಭಾಷೆಯ ಹುಟ್ಟು ನಿರ್ದಿಷ್ಟವಾಗಿ ಗೊತ್ತು ಮಾಡುವುದು ಬಹಳ ಕಷ್ಟ, ಅದೊಂದು ವಿಸ್ಮಯ ಸರಿ. ಸಾಹಿತ್ಯವು ಜನರ ಜೀವನವನ್ನೇ ಚಿತ್ರಿಸುತ್ತದೆ ಮತ್ತು ಸೃಷ್ಟಿಸುತ್ತದೆ. ಕನ್ನಡ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಸೇರಿ ಸಲು ಮನಸ್ಸು ಮಾಡಿದರೆ ಕನ್ನಡ ಭಾಷೆ ಖಂಡಿತ ಉಳಿದು ಹೆಮ್ಮರವಾಗಿ ಬೆಳೆಯಲು ಸಾಧ್ಯವಿದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷ ಬಿ.ಎಸ್. ವಿನಯ್, ಪೆÇ್ರ. ಡಾ.ಶಿವರಾಜಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುಸ್ವಾಮಿ, ಹನೂರು ಅಧ್ಯಕ್ಷ ಶ್ರೀನಿವಾಸ ನಾಯ್ಡು, ಕೊಳ್ಳೇ ಗಾಲ ಅಧ್ಯಕ್ಷ ನಂದೀಶ್, ಮಾಜಿ ಜಿಲ್ಲಾಧ್ಯಕ್ಷ ನಾಗಮಲ್ಲಪ್ಪ, ಚನ್ನಮಾದೇ ಗೌಡ, ವೆಂಕಟೇಶ್ ಇನ್ನಿತರರು ಇದ್ದರು.

Translate »