ಯಳಂದೂರು ತಾಪಂ ಅಧ್ಯಕ್ಷರ ಅವಿರೋಧ ಆಯ್ಕೆ
ಚಾಮರಾಜನಗರ

ಯಳಂದೂರು ತಾಪಂ ಅಧ್ಯಕ್ಷರ ಅವಿರೋಧ ಆಯ್ಕೆ

January 24, 2020

ಯಳಂದೂರು, ಜ.23(ವಿ.ನಾಗರಾಜು)- ತಾಪಂ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದೆ ಉಪಾಧ್ಯಕ್ಷರಾಗಿದ್ದ ಮಲ್ಲಾಜಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಭಾಗ್ಯಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಆಗಿದೆ ಎಂದು ಚುನಾವಣಾ ಧಿಕಾರಿ ನಿಕಿತಾ ಚಿನ್ನಸ್ವಾಮಿ ತಿಳಿಸಿದರು.

ಭಾಗ್ಯಮ್ಮ ಮಾತನಾಡಿ, ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದು ತುಂಬಾ ಖುಷಿ ತಂದಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರ ಮೇರೆಗೆ ನನಗೆ ಉಪಾಧ್ಯಕ್ಷ ಸ್ಥಾನ ದೊರಕಿದ್ದು, ಪಕ್ಷಕ್ಕೆ ಮತ್ತು ತಾಲೂಕಿನ ಜನತೆಗೆ ಚಿರಋಣಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

ಶ್ರೀಮತಿ ಭಾಗ್ಯಮ್ಮ ಅವರನ್ನು ಪಕ್ಷದ ಮುಖಂಡರಾದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಡಿಸಿಸಿ ಅಧ್ಯಕ್ಷ ಮರಿಸ್ವಾಮಿ, ಜಿಪಂ ಸದಸ್ಯ ಜೆ.ಯೋಗೇಶ್, ತಾಪಂ ಅಧ್ಯಕ್ಷ ಎಂ.ನಿರಂಜನ್, ಸದಸ್ಯರಾದ ಅಗರ ವೆಂಕಟೇಶ್, ಎಂ. ಸಿದ್ದರಾಜು, ಪುಟ್ಟು, ಶಾರದಾಂಬ, ಪಲ್ಲವಿ, ಮಣಿ, ಪದ್ಮಾವತಿ, ಟೌನ್ ಪಂಚಾಯತ್ ಸದಸ್ಯ ಮಹದೇವನಾಯಕ, ಬಳೆಪೇಟೆ ರವಿ, ಮಂಜು, ರಂಗನಾಥ್ ಮುಖಂಡರಾದ ರಂಗರಾಜು, ಕಂದಹಳ್ಳಿ ಮಹೇಶ್, ಪ್ರಭುಪ್ರಸಾದ್, ಪರಶಿವ, ಜೆ. ಶ್ರೀನಿವಾಸ್, ಗುಂಬಳ್ಳಿ ರಾಜಣ್ಣ, ಇ.ಓ.ರಾಜು, ದುಗ್ಗಹಟ್ಟಿ ಮಾದೇಶ್ ಹಾಗೂ ಕಾರ್ಯಕರ್ತರು, ಶುಭ ಹಾರೈಸಿದರು.