ಕಪಿಲಾ ನದಿಯಲ್ಲಿ ಚಿರತೆ ಕಳೇಬರ ಪತ್ತೆ
ಮೈಸೂರು ಗ್ರಾಮಾಂತರ

ಕಪಿಲಾ ನದಿಯಲ್ಲಿ ಚಿರತೆ ಕಳೇಬರ ಪತ್ತೆ

April 18, 2020

ಸರಗೂರು, ಏ. 17 (ನಾಗೇಶ್)- ಇಲ್ಲಿಗೆ ಸಮೀಪದ ಹಾಲಗಡ ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಹಾಲಗಡ ಮತ್ತು ಇಟ್ನಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಪಿಲಾ ನದಿ ಸಮೀಪ ನಿರ್ಮಾಣ ಹಂತದಲ್ಲಿರುವ ಸೇತುವೆಯ ಪಿಲ್ಲರ್ ಬಳಿ 3ರಿಂದ 4 ವರ್ಷದ ಚಿರತೆ ಕಳೇಬರ ಪತ್ತೆ ಯಾಗಿದೆ. ಪಶುವೈದ್ಯ ಡಾ.ಮಹೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಚಿರತೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಂಗಾಂಗ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಎಸಿಎಫ್ ಪರಮೇಶ್ವರ್, ಸರಗೂರು ಆರ್‍ಎಫ್ ಮಧು ಹಾಗೂ ಅರಣ್ಯ ಸಿಬ್ಬಂದಿ ಸ್ಥಳದಲ್ಲಿದ್ದರು.

Translate »