ಕಪಿಲೆಯಲ್ಲಿ ಮುಳುಗುತ್ತಿದ್ದ ಬೆಂಗಳೂರು ವೃದ್ಧ ದಂಪತಿ
ಮೈಸೂರು

ಕಪಿಲೆಯಲ್ಲಿ ಮುಳುಗುತ್ತಿದ್ದ ಬೆಂಗಳೂರು ವೃದ್ಧ ದಂಪತಿ

July 25, 2018

ನಂಜನಗೂಡು: ಬೆಂಗಳೂರಿನ ವೃದ್ಧ ದಂಪತಿ ಕಪಿಲಾ ನದಿಯಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರು ವೃದ್ಧೆಯನ್ನು ಪಾರು ಮಾಡಿದರೆ, ವೃದ್ಧ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಈ ದುರಂತ ಇಂದು ನಂಜನಗೂಡಿನ ಹದಿನಾರು ಕಾಲು ಮಂಟಪದ ಬಳಿ ನಡೆದೆ.

ಬೆಂಗಳೂರಿನ ದಾಸರಹಳ್ಳಿ ನಿವಾಸಿ ನಾಗ ರಾಜು(70) ನೀರಲ್ಲಿ ಮುಳುಗಿ ಸಾವಿಗೀಡಾದರೆ, ಅವರ ಪತ್ನಿ ಕಲಾವತಿ(60)ಯನ್ನು ರಕ್ಷಿಸಲಾಗಿದೆ. ಮರದ ಕೊಂಬೆಯೊಂದಕ್ಕೆ ಸಿಲುಕಿದ್ದ ಕಲಾವತಿಯವರನ್ನು ಸ್ಥಳೀಯರು ರಕ್ಷಿಸಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿ ಸಿದ್ದಾರೆ.

ಆದರೆ, ತಾನು ಮತ್ತು ಪತಿ ನಂಜನ ಗೂಡು ದೇವಸ್ಥಾನಕ್ಕೆ ಬಂದಿದ್ದು, ಹದಿನಾರು ಕಾಲು ಮಂಟಪದ ಬಳಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾಗಿ ಕಲಾವತಿಯವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದು, ನಂಜನಗೂಡು ಪಟ್ಟಣ ಪೊಲೀಸರು ಅವರ ಹೇಳಿಕೆ ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅದೇ ವೇಳೆ ಈ ದಂಪತಿ ನಾಪತ್ತೆಯಾಗಿ ದ್ದಾರೆ ಎಂದು ಇವರ ಪುತ್ರ ಸಂತೋಷ್, ಕಳೆದ ಮೂರು ದಿನಗಳ ಹಿಂದೆ ಬೆಂಗ ಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆ ಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಕಪಿಲಾ ನದಿಯಲ್ಲಿ ಪ್ರಾಣ ತ್ಯಾಗ ಮಾಡಿದರೆ ಮೋಕ್ಷ ದೊರೆಯುತ್ತದೆ ಎಂಬ ಮೂಢ ನಂಬಿಕೆಯಿಂದ ಈ ದಂಪತಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿ ಪ್ರಸಾರ ಮಾಡಿದೆ.

ಕಳೆದ ಮೂರು ದಿನಗಳ ಹಿಂದೆಯೇ ಯಾರಿಗೂ ಹೇಳದೆ, ಮನೆ ಬಿಟ್ಟು ಬಂದಿರುವ ಈ ದಂಪತಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದರೇ? ಅಥವಾ ಮೌಢ್ಯದಿಂದ ಮೋಕ್ಷ ಪ್ರಾಪ್ತಿಗಾಗಿ ಕಪಿಲೆಗೆ ಹಾರಿದರೇ? ಇಲ್ಲವೇ ಕಾಲು ಜಾರಿ ಬಿದ್ದರೇ? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

Translate »