ಶೀಘ್ರದಲ್ಲೇ ತಗಡೂರು, ಹುಲ್ಲಹಳ್ಳಿಯಲ್ಲೂ ಕೋವಿಡ್ ಆಸ್ಪತ್ರೆ
ಮೈಸೂರು

ಶೀಘ್ರದಲ್ಲೇ ತಗಡೂರು, ಹುಲ್ಲಹಳ್ಳಿಯಲ್ಲೂ ಕೋವಿಡ್ ಆಸ್ಪತ್ರೆ

May 1, 2021

ನಂಜನಗೂಡು, ಏ. 30 (ರವಿ)- ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಆಕ್ಸಿಜನ್ ವ್ಯವಸ್ಥೆಯುಳ್ಳ ಹಾಸಿಗೆಗಳಿವೆ. ಮುಂದಿನ 2 ದಿನಗಳಲ್ಲಿ ತಗಡೂರು ಮತ್ತು ಹುಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ 100 ಹಾಸಿಗೆಗಳನ್ನು ಕಲ್ಪಿಸಲಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಕೊರೊನಾ ವೈರಾಣುವನ್ನು ಸಮರ್ಪಕವಾಗಿ ಕಟ್ಟಿ ಹಾಕಲು ತಾಲೂಕು ಆಡಳಿತ ಸನ್ನದ್ಧ ವಾಗಿದೆ ಎಂದು ತಹಸೀಲ್ದಾರ್ ಮೋಹನ್ ಕುಮಾರಿ ತಿಳಿಸಿದರು.

ತಾಲೂಕು ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಯಲ್ಲಿ 35 ಹಾಸಿಗೆ ಸೌಲಭ್ಯವಿದ್ದು, 5 ವೆಂಟಿಲೇಟರ್ ಸೌಲಭ್ಯ ವಿದೆ. ಮಹದೇವನಗರ ಕೋವಿಡ್ ಸೆಂಟರ್ ನಲ್ಲೂ 100 ಹಾಸಿಗೆ ಸೌಲಭ್ಯ ಕಲ್ಪಿಸ ಲಾಗಿದೆ. ಮುಂದಿನ 2 ದಿನಗಳಲ್ಲಿ ಹುಲ್ಲಹಳ್ಳಿ ಮತ್ತು ತಗಡೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಿ ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯ ಒದಗಿಸಲಾಗುವುದು ಎಂದರು.

ಈಗಾಗಲೇ ಕೋವಿಡ್ ವಾರ್ ರೂಮ್ ಗಳನ್ನು ಸ್ಥಾಪಿಸಲಾಗಿದ್ದು, ನೋಡಲ್ ಅಧಿ ಕಾರಿಯನ್ನಾಗಿ ಕೆ.ಜಿ.ಮಹೇಶ್ ಅವರನ್ನು ನೇಮಿಸಲಾಗಿದೆ. ಕೊರೊನಾ ಸೋಂಕಿಗೆ ಒಳಗಾದ ರೋಗಿಗಳು ಚಿಕಿತ್ಸೆಗಾಗಿ ದಿನದ 24 ಗಂಟೆಗಳಲ್ಲೂ 08221-295387 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹು ದಾಗಿದೆ.

ತಾಲೂಕಿನ ಮಹದೇವನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಸ್ಥಾಪಿಸ ಲಾಗಿದೆ. ಅಲ್ಲಿಗೆ ಸಮಾಜ ಕಲ್ಯಾಣ ಇಲಾಖೆಯ ಜನಾರ್ಧನ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸ ಲಾಗಿದೆ. ಅವರ ಮೊ.9945047204 ಕಂಟೈನ್‍ಮೆಂಟ್ ಜೋನ್ ನೋಡಲ್ ಅಧಿಕಾರಿಯನ್ನಾಗಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಅವರನ್ನು ನೇಮಿಸಲಾಗಿದೆ. ಮೊ.9845182080ಗೆ ಕರೆ ಮಾಡ ಬಹುದಾಗಿದೆ. ಅಲ್ಲದೆ ತಾಲೂಕು ಆರೋಗ್ಯಾಧಿಕಾರಿ ಡಾ. ಈಶ್ವರ್ ಮೊ. 9731081616ಗೆ ಕರೆ ಮಾಡಿ ಆಸ್ಪತ್ರೆ, ಹಾಸಿಗೆಯ ಸಂಬಂಧ ಮಾಹಿತಿ ಪಡೆಯ ಬಹುದಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಆಡಳಿತ ಕೊರೊನಾ ಲಸಿಕೆ ಹಾಕುವ ಕಾರ್ಯದಲ್ಲೂ ಮುಂದಿದ್ದು, ಇಲ್ಲಿವರೆವಿಗೆ ಸುಮಾರು 70 ಸಾವಿರ ಮಂದಿ ಲಸಿಕೆಗೆ ಒಳಪಟ್ಟಿದ್ದಾರೆ. ಈಗಾಗಲೇ 18 ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಲಸಿಕೆಯಿಂದ ಯಾವುದೇ ಹಾನಿ ಸಂಭವಿಸು ವುದಿಲ್ಲ. ಜನರು ಆತಂಕ ಭಯ ಪಡದೇ ಲಸಿಕೆ ತೆಗೆದುಕೊಳ್ಳಲು ಮುಂದಾಗಬೇಕು. ಅನಾವಶ್ಯಕವಾಗಿ ಓಡಾಡದೆ ಮನೆಯಲ್ಲೇ ಸುರಕ್ಷಿತವಾಗಿದ್ದು ತಮ್ಮ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಹುಲ್ಲಹಳ್ಳಿ ಭಾಗದಲ್ಲಿ ಹೆಚ್ಚು ಸೋಂಕು: ತಾಲೂಕಿನಲ್ಲಿ ಹುಲ್ಲಹಳ್ಳಿ ಭಾಗದಲ್ಲಿ ಅತೀ ಹೆಚ್ಚಿನ ಜನರು ಕೊರೊನಾ ಸೋಂಕಿಗೆ ಒಳಪಡುತ್ತಿದ್ದಾರೆ. ಆದ್ದರಿಂದ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿ, ಸಾಮಾಜಿಕ ಅಂತರ ವನ್ನು ಕಾಯ್ದುಕೊಂಡು ಕೊರೊನಾ ಹಿಮ್ಮೆಟ್ಟಿಸಲು ಸಹಕರಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಈಶ್ವರ್ ಕಾನಡ್ಕೆ ಮಾತನಾಡಿ, ತಾಲೂಕಿನಲ್ಲಿ 307 ಸಕ್ರಿಯ ಪ್ರಕರಣಗಳಿದ್ದು, ತಾಲೂಕು ಆಸ್ಪತ್ರೆಯಲ್ಲಿ 35 ಜಿಲ್ಲಾಸ್ಪತ್ರೆಯಲ್ಲಿ 5, ಮಹದೇವನಗರ ಕೋವಿಡ್ ಸೆಂಟರ್‍ನಲ್ಲಿ 35 ಜನ, ಮಂಡಕಳ್ಳಿಯ ಕೋವಿಡ್ ಸೆಂಟರ್ ನಲ್ಲಿ 19 ಜನರಿದ್ದು, ಹೋಂ ಐಸೋಲೇಷನ್ ನಲ್ಲಿ 213 ಜನರು ಚಿಕಿತ್ಸೆ ಪಡೆಯುತ್ತಿ ದ್ದಾರೆ. ಕಳೆದ ವರ್ಷದಿಂದ ಈವರೆವಿಗೆ ತಾಲೂಕಿನಲ್ಲಿ 3061 ಮಂದಿ ಸೋಂಕಿತ ರಾಗಿದ್ದು, 2695 ಮಂದಿ ಚಿಕಿತ್ಸೆ ಪಡೆದು ಗುಣಮುಖ ರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಶಿರಸ್ತೇದಾರ್ ಶ್ರೀಪಾದು, ಆರ್.ಐ.ನಾಗರಾಜು, ಪ್ರಕಾಶ್, ತಾಲೂಕು ಪಂಚಾಯ್ತಿ ವ್ಯವಸ್ಥಾಪಕ ಜನಾರ್ಧನ್ ಸೇರಿದಂತೆ ಹಲವಾರು ಪ್ರಮುಖರು ಇದ್ದರು.

Translate »