ಶ್ರೀಕಂಠೇಶ್ವರಸ್ವಾಮಿ ದೇಗುಲ ಸಿಬ್ಬಂದಿಗೆ ಸುತ್ತೂರು ಸಂಸ್ಥಾನದಿಂದ ದಿನಸಿ ಕಿಟ್ ವಿತರಣೆ
ಮೈಸೂರು, ಮೈಸೂರು ಗ್ರಾಮಾಂತರ

ಶ್ರೀಕಂಠೇಶ್ವರಸ್ವಾಮಿ ದೇಗುಲ ಸಿಬ್ಬಂದಿಗೆ ಸುತ್ತೂರು ಸಂಸ್ಥಾನದಿಂದ ದಿನಸಿ ಕಿಟ್ ವಿತರಣೆ

May 27, 2020

ನಂಜನಗೂಡು, ಮೇ 26(ರವಿ)-ಶ್ರೀಕ್ಷೇತ್ರ ಸುತ್ತೂರು ಮಹಾಸಂಸ್ಥಾನದಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಪುರೋಹಿತರು, ನೌಕರರು ಹಾಗೂ ದೇವಾಲಯದ ದಾಸೋಹ ಭವನದ ಹೊರಗುತ್ತಿಗೆ ನೌಕರರು ಸೇರಿ 245 ಕುಟುಂಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಜೆಎಸ್‍ಎಸ್ ವಿದ್ಯಾಪೀಠ ಕಾರ್ಯದರ್ಶಿ ಮಂಜುನಾಥ್ ಕಿಟ್ ವಿತರಿಸಿ ಮಾತನಾಡಿ, ನಂಜನಗೂಡಿಗೆ ಆರಂಭಿಕ ದಿನಗಳಲ್ಲಿ ಆವರಿಸಿದ ಸಂಕಷ್ಟ ಸದ್ಯಕ್ಕೆ ದೂರವಾಗಿದೆ. ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಿಂದ ಸಾಕಷ್ಟು ಜನ ಸೋಂಕಿಗೆ ತುತ್ತಾದರು. ಸದ್ಯ ಯಾವುದೇ ಸಾವು ಸಂಭವಿಸಲ್ಲಿಲ್ಲ. ಅದು ಕ್ಷೇತ್ರಾಧಿಪತಿ ಶ್ರೀಕಂಠೇಶ್ವರನ ಕೃಪೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೊರೊನಾದಿಂದ ಬಹಳಷ್ಟು ಜನರು ಜೀವನ ಸಂಕಷ್ಟದಲ್ಲಿದೆ. ದೇವಾಲಯದ ನೌಕರ ವರ್ಗ ಸಹ ಸಂಕಷ್ಟಕ್ಕೆ ಸಿಲುಕಿದ್ದು ಅವರಿಗೆ ನೆರವು ನೀಡಲಾಗುತ್ತಿದೆ. ಎಲ್ಲರ ಸಂಕಷ್ಟವನ್ನು ಭಗವಂತ ನೀವಾರಿಸಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ದೇವಾಲಯದ ಇಓ ಶಿವಕುಮಾರ್, ಸುತ್ತೂರು ಸಂಸ್ಥೆ ನಂಜುಂಡಸ್ವಾಮಿ, ದೇವಾಲಯದ ವ್ಯವಸ್ಥಾಪನಾ ಮಂಡಳಿ ಶ್ರೀಧರ್, ನೌಕರ ಸಂಘದ ಅಧ್ಯಕ್ಷ ಶ್ರೀಕಂಠ, ನಗರ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಮಂಗಳಾ ಸೋಮಶೇಖರ್, ನಾಗಪ್ಪ, ಉಮೇಶ್, ಶ್ರೀಕಂಠ, ಬಸವಣ್ಣ, ಧನರಾಜ್ ಇತರರಿದ್ದರು.

Translate »