ಕಫ್ರ್ಯೂವಿನಿಂದ ಕಂಗಾಲಾಗಿರುವ ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಿಸಿ
News

ಕಫ್ರ್ಯೂವಿನಿಂದ ಕಂಗಾಲಾಗಿರುವ ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಿಸಿ

May 1, 2021
  • ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ 
  • ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸುದೀರ್ಘ ಪತ್ರ 
  • ವಲಸೆಯಿಂದ ಹಳ್ಳಿಗಳಲ್ಲಿನ ಒತ್ತಡ ತಡೆದು ಶೀಘ್ರ ಪರಿಹಾರ ಕ್ರಮಕ್ಕೆ ಒತ್ತಾಯ 
  • ಕೇರಳದಂತೆ ಪ್ರತಿ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲು ಆಗ್ರಹ

ಬೆಂಗಳೂರು, ಏ.30(ಕೆಎಂಶಿ)- ರಾಜ್ಯದಲ್ಲಿ ಈಗ ಕಫ್ರ್ಯೂ ವಿಧಿಸಿರುವುದ ರಿಂದ ಈಗಾಗಲೇ ಬಸವಳಿದು ಹೋಗಿ ರುವ ದುಡಿಯುವ ವರ್ಗದ ಜನರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜನ್ನು ಘೋಷಿಸುವ ಮೂಲಕ ಬಿಕ್ಕಟ್ಟಿನಲ್ಲಿರುವ ರಾಜ್ಯದ ದುಡಿಯುವ ಸಮುದಾಯಗಳ ಸಂಕಷ್ಟವನ್ನು ಹೋಗಲಾಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಟಕವೂ ಸೇರಿದಂತೆ ಅನೇಕ ಜಿಲ್ಲೆಗಳ ಜನ ಬೇಸಿಗೆಯಲ್ಲಿ ನಗರ ಗಳಿಗೆ ವಲಸೆ ಹೋಗಿ ಕೂಲಿ ನಾಲಿ ಮಾಡಿ ಒಂದಿಷ್ಟು ಹಣ ಸಂಪಾದಿಸಿ ಅದನ್ನು ಮುಂಗಾರಿನ ಕೃಷಿ ಕೆಲಸಗಳಿಗೆ ವಿನಿ ಯೋಗಿಸುತ್ತಾರೆ. ಈಗ ಲಾಕ್ ಡೌನ್ ಹೇರಿಕೆ ಮಾಡಿರುವುದರಿಂದ ಅವರ ದುಡಿಮೆ ಸಂಪೂರ್ಣ ಹಾಳಾಗಿದೆ. ದುಡಿಯ ಲೆಂದು ಬಂದವರು ಮರಳಿ ವಾಪಸ್ಸು ಹೋಗಿದ್ದಾರೆ. ಆದ್ದರಿಂದ ಸರ್ಕಾರ ಈ ಎಲ್ಲ ರೈತಾಪಿ ಕುಟುಂಬಗಳಿಗೆ ಬೀಜ, ಗೊಬ್ಬರ, ಔಷಧ ಮುಂತಾದವುಗಳನ್ನು ಉಚಿತವಾಗಿ ವಿತರಿಸಬೇಕು.

ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿ.ಪಿ.ಎಲ್. ವರ್ಗಕ್ಕೆ ಸೇರಿದ ಕುಟುಂಬ ಗಳಿವೆ. ಈ ಕುಟುಂಬಗಳಿಗೆ ಸೇರಿದ ಬಹುಪಾಲು ಜನರು ಅಸಂಘಟಿತ ವಲಯ ಗಳಲ್ಲಿ ದುಡಿಯುತ್ತಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಖ್ಯೆ ಸುಮಾರು 1.5 ಕೋಟಿಗಳಷ್ಟಿದೆ.

ಎಲ್ಲ ದುಡಿಯುವ ವರ್ಗಗಳು, ಸಮುದಾಯಗಳು ಹಾಗೂ ಬಿ.ಪಿ.ಎಲ್ ವರ್ಗದಡಿ ಬರುವ ಕುಟುಂಬಗಳು ದುಡಿಮೆ ಇಲ್ಲದೆ ಆರ್ಥಿಕ ಚೈತನ್ಯ ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ, ಅವರೆ ಲ್ಲರಿಗೂ ಪ್ರತಿ ತಿಂಗಳು ಕನಿಷ್ಟ 10000 ಸಾವಿರ ರೂಪಾಯಿಗಳ ಆರ್ಥಿಕ ಪ್ಯಾಕೇ ಜನ್ನು ಈ ಕೂಡಲೇ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ 87 ಲಕ್ಷ ರೈತಾಪಿ ಕುಟುಂಬ ಗಳಿವೆ. ರೈತರಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಿಡುವಳಿಗಳನ್ನು ಹೊಂದಿರುವ ಕುಟುಂಬ ಗಳು ಶೇ. 90 ರಷ್ಟಿವೆ. ಬಹುಪಾಲು ಈ ಕುಟುಂಬಗಳು ಬಿ.ಪಿ.ಎಲ್ ವರ್ಗದಡಿಯೇ ಇವೆ. ಹಾಗಾಗಿ ಈ ರೈತಾಪಿ ಕುಟುಂಬ ಗಳಿಗು ತಿಂಗಳಿಗೆ 10,000 ರೂ.ಗಳ ಪ್ಯಾಕೇಜನ್ನು ಘೋಷಿಸಬೇಕು. ರಾಜ್ಯದ ಕೃಷಿಕರು ಸಂಕಷ್ಟದಲ್ಲಿರುವುದರಿಂದ ಅವರಿಗೆ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕು ಗಳ ಮೂಲಕ ಬಡ್ಡಿರಹಿತ ಕೃಷಿ ಸಾಲ ಗಳನ್ನು ಕನಿಷ್ಟ 5 ಲಕ್ಷ ರೂ ಗಳವರೆಗೆ ನೀಡಬೇಕು. ಇದನ್ನು ಮಾಡುವುದು ಕಷ್ಟದ ವಿಚಾರವೇನೂ ಅಲ್ಲ. ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಸಂಬಂಧಿಸಿದ ಸುಮಾರು 10.5 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ವಸೂಲು ಮಾಡದೆ ಕೈ ಬಿಡಲಾಗಿದೆ. ಅಂಥದ್ದರಲ್ಲಿ ರೈತಾಪಿ ವರ್ಗಗಳಿಗೆ ನೀಡುವ ಕೆಲವು ಸಾವಿರ ಕೋಟಿಗಳಷ್ಟು ಬಡ್ಡಿ ರಹಿತ ಸಾಲದಿಂದ ದೇಶದ ಆರ್ಥಿಕತೆ ಮುಳುಗಿ ಹೋಗುವುದಿಲ್ಲ. ಬದಲಿಗೆ ಆರ್ಥಿಕತೆ ಸುಧಾರಣೆಯಾಗುತ್ತದೆ. ಆದ್ದರಿಂದ ಬಡ್ಡಿ ರಹಿತ ಸಾಲವನ್ನು ನೀಡಿ ರೈತರ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.

ಗೊಬ್ಬರದ ಬೆಲೆ ಇಳಿಸಿ: ಗ್ರಾಮೀಣ ಪ್ರದೇಶಗಳಿಗೆ ವ್ಯಾಪಕ ವಲಸೆ ಹೋಗು ತ್ತಿರುವುದರಿಂದ ಕಳೆದ ವರ್ಷದಂತೆ ಈ ವರ್ಷವೂ ಸಹ ಕೃಷಿ ಕ್ಷೇತ್ರದ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಕೃಷಿ ಅವಶ್ಯಕ ವಸ್ತುಗಳಾದ ಬೀಜ, ಔಷಧ, ರಸಗೊಬ್ಬರಗಳ ದಾಸ್ತಾನನ್ನು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿಸಬೇಕು. ರಸ ಗೊಬ್ಬರಗಳ ಬೆಲೆಗಳನ್ನು ಅದರಲ್ಲೂ ಮುಖ್ಯವಾಗಿ ಡಿ.ಎ.ಪಿ. ಕಾಂಪ್ಲೆಕ್ಸ್‍ಗಳ ಬೆಲೆಗಳನ್ನು ಕ್ವಿಂಟಾಲಿಗೆ ರೂ.1,250/- ರಿಂದ ರೂ.1,400/- ಗಳವರೆಗೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದೆ. ಸದರಿ ಆದೇಶ ವನ್ನು ಹಿಂಪಡೆದು ಹಳೆಯ ದರಗಳಲ್ಲೇ ಮಾರಾಟ ಮಾಡಬೇಕು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ರಿಯಾಯಿತಿ ದರಗಳಲ್ಲಿ ಸಾಧ್ಯವಾದರೆ ಉಚಿತವಾಗಿ ರಸಗೊಬ್ಬರಗಳನ್ನು ವಿತರಿಸಬೇಕು ಎಂದು ತಿಳಿಸಿದ್ದಾರೆ.

ನಗರಗಳಿಂದ ಗ್ರಾಮಗಳಿಗೆ ವಲಸೆ ಹೊರಟ ಕಾರ್ಮಿಕರಿಗೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯಡಿ [ನರೇಗಾ] ಯೋಜನೆಯಡಿ ಕನಿಷ್ಟ 150 ಮಾನವ ದಿನಗಳಷ್ಟು ಮತ್ತು ಅದಕ್ಕೂ ಹೆಚ್ಚು ಬೇಡಿಕೆ ಇರುವ ಕಡೆ ಬೇಡಿಕೆ ಯನ್ನು ಆಧರಿಸಿ ಉದ್ಯೋಗ ನೀಡಬೇಕು. ಹಿಂದೆ ನಿಮ್ಮದೇ ಸರ್ಕಾರವಿದ್ದಾಗ ಮನಮೋಹನಸಿಂಗರು ಪ್ರಧಾನಮಂತ್ರಿ ಗಳಾಗಿದ್ದಾಗ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 150 ಮಾನವ ದಿನಗಳಿಗೆ ಹೆಚ್ಚಿಸಿ ಎಂದಾಗ ಅವರು ಅದಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಿದ್ದರು. ಈಗಲೂ ರಾಜ್ಯ ಸರ್ಕಾರ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ರಾಜ್ಯದ ಬಿ. ಜೆ.ಪಿ ಸಂಸದರು ಈ ಕುರಿತು ಪ್ರಧಾನಿಗಳನ್ನು ಒತ್ತಾಯ ಮಾಡಿ ರಾಜ್ಯದ ಜನರ ನೆರವಿಗೆ ನಿಲ್ಲಬೇಕು.

ಈ ಯೋಜನೆಯನ್ನು ಕೃಷಿಯ ವಿಸ್ತರಿತ ಪ್ರದೇಶಗಳಾದ ಪಟ್ಟಣ ಪಂಚಾ ಯಿತಿ, ಪುರಸಭೆ, ನಗರಸಭೆಗಳ ಜನರಿಗೂ ವಿಸ್ತರಿಸಬೇಕು. ಅವರೂ ಸಹ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ನರೇಗಾ ಯೋಜನೆಯ ಕೂಲಿ ದರಗಳನ್ನು ಹಣದುಬ್ಬರವನ್ನು ಆಧರಿಸಿ ಕೂಡಲೇ ಹೆಚ್ಚು ಮಾಡಬೇಕು ಎಂದು ಹೇಳಿದ್ದಾರೆ.

ಕೇರಳ ರಾಜ್ಯದಂತೆ ಆಹಾರ ಪ್ಯಾಕೇಟ್ ನೀಡಿಕೆ: ರಾಜ್ಯದ ಯಾರೊಬ್ಬರೂ ಹಸಿವಿ ನಿಂದ ಬಳಲದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪಕ್ಕದ ಕೇರಳ ರಾಜ್ಯದಂತೆ ಪ್ರತಿ ಕುಟುಂಬಕ್ಕೆ ಆಹಾರ ಧಾನ್ಯಗಳ, ಜೀವನಾವಶ್ಯಕ ಅಗತ್ಯ ವಸ್ತುಗಳನ್ನೊಳ ಗೊಂಡ ಕಿಟ್‍ಗಳನ್ನು ಒದಗಿಸಬೇಕು. ಕಿಟ್‍ಗಳಲ್ಲಿ ಪ್ರತಿಯೊಬ್ಬರಿಗೆ ಕನಿಷ್ಟ 10 ಕೆ.ಜಿ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಬೇಳೆಕಾಳುಗಳು ಮುಂತಾದ ದಿನಸಿ ಪದಾರ್ಥಗಳು ಇರುವಂತೆ ನೋಡಿಕೊಳ್ಳ ಬೇಕು. ಸಣ್ಣ, ಅತೀ ಸಣ್ಣ, ಗೃಹ ಮತ್ತು ಮಧ್ಯ ಪ್ರಮಾಣದ ಕೈಗಾರಿಕೆಗಳು ಕೇಂದ್ರದ ನಿರಂತರ ಗದಾ ಪ್ರಹಾರಗಳಿಂದ ಬಸವಳಿದು ಹೋಗಿವೆ. ಮೊದಲು ಕಷ್ಟದಲ್ಲಿರುವವರಿಗೆ ಉಸಿರಾಡಲು ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ಸ್ಥಿತಿಯಲ್ಲಿರು ವವರಿಗೂ ನೆರವಾಗಬೇಕು. ಆದ್ದರಿಂದ ಈ ವಲಯಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸುಗಮವಾಗಿ ಸಿಗುವಂತೆ ನೋಡಿ ಕೊಳ್ಳಬೇಕು. ಇವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರು ವವರೆಗೆ ಸಾಲದ ಮೇಲಿನ ಬಡ್ಡಿಗಳನ್ನು ಮನ್ನಾ ಮಾಡಬೇಕು. ಇದಕ್ಕಾಗಿ ತಾವು ಕೇಂದ್ರವನ್ನು ಒತ್ತಾಯಿಸಬೇಕು. ಶತಾಯ ಗತಾಯ ಪ್ರಯತ್ನ ಮಾಡಿ ಇವರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಉಚಿತ ವಿದ್ಯುತ್ ಕಲ್ಪಿಸಿ: ರಾಜ್ಯದಲ್ಲಿ ಯಥೇಚ್ಛವಾಗಿ ವಿದ್ಯುತ್ ಉತ್ಪಾದನೆಯಾ ಗುತ್ತಿದೆ. ಹಾಗಾಗಿ ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ, ಮಧ್ಯಮ ಪ್ರಮಾಣದ ಈ ಕಂಪೆನಿಗಳಿಗೆ ಉಚಿತವಾಗಿ ವಿದ್ಯುತ್ ಅನ್ನು ಪೂರೈಸಬೇಕು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಲ್ಲದಿದ್ದರೂ ಅದಾನಿ ಮುಂತಾದವರಿಗೆ ವರ್ಷಕ್ಕೆ ಅನಾಮತ್ತಾಗಿ ಸಾವಿರಾರು ಕೋಟಿಗಳನ್ನು ನೀಡಲಾಗು ತ್ತಿದೆ. ಅದನ್ನು ನಿಲ್ಲಿಸಿ ಸರ್ಕಾರ ಉದ್ಯೋಗ ಸೃಷ್ಟಿಸುವ ಈ ಕೈಗಾರಿಕೆಗಳ ನೆರವಿಗೆ ನಿಲ್ಲಬೇಕು. ಈ ಕಂಪೆನಿಗಳು ಉತ್ಪಾದಿಸಿ ರಫ್ತು ಮಾಡುವ ಉತ್ಪನ್ನಗಳಿಗೆ ರಫ್ತು ಶುಲ್ಕಕ್ಕೆ ವಿನಾಯಿತಿ ನೀಡಬೇಕು. ಆಮದು ಶುಲ್ಕವನ್ನೂ ಕಡಿಮೆ ಮಾಡಬೇಕು.
ಶಾಲೆಗಳಲ್ಲಿ ಶುಲ್ಕ ಮನ್ನಾ ಮಾಡಿ: ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ದೊಡ್ಡ ಮಟ್ಟದ ರಿಯಾಯಿತಿ ಕೊಡಿಸುವುದಾಗಿ ಘೋಷಿಸಿತು. ಆದರೆ ಅದು ಜಾರಿಗೆ ಬರಲಿಲ್ಲ. ಈ ವರ್ಷ ಮತ್ತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಿಸಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಶುಲ್ಕ ಮನ್ನಾ ಮಾಡಲು ಅಥವಾ ಶೇ. 50 ರಷ್ಟಾದರೂ ಕಡಿತಗೊಳಿಸಲು ಕಠಿಣ ನಿಯಮಾವಳಿ ಗಳನ್ನು ರೂಪಿಸಬೇಕು. ಈ ಎಲ್ಲ ಒತ್ತಾಯ ಗಳನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಆರ್ಥಿಕ ಪ್ಯಾಕೇಜುಗಳನ್ನು ಘೋಷಿಸಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

Translate »