ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘನೆ ಮೈಸೂರಲ್ಲಿ ಒಂದೇ ದಿನ 281 ವಾಹನಗಳ ವಶ
ಮೈಸೂರು

ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘನೆ ಮೈಸೂರಲ್ಲಿ ಒಂದೇ ದಿನ 281 ವಾಹನಗಳ ವಶ

May 1, 2021

ಮೈಸೂರು, ಏ. 30(ಆರ್‍ಕೆ)- ಕೊರೊನಾ ಕಫ್ರ್ಯೂ ಜಾರಿಯಲ್ಲಿರುವುದರಿಂದ ನಿಯಮ ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ತಪಾಸಣೆಯನ್ನು ತೀವ್ರ ಗೊಳಿಸಿದ್ದಾರೆ. ಯಾವುದೇ ನಿರ್ದಿಷ್ಠ ಹಾಗೂ ತುರ್ತು ಕೆಲಸವಿಲ್ಲದಿದ್ದರೂ, ಅನಗತ್ಯ ವಾಗಿ ದ್ವಿಚಕ್ರ ವಾಹನ, ಕಾರುಗಳಲ್ಲಿ ಸಂಚ ರಿಸುವವರನ್ನು ತಡೆದು ವಿಚಾರಿಸುತ್ತಿರುವ ಪೊಲೀಸರು ಅವರಿಂದ ಮಾಹಿತಿ ಪಡೆದು, ತಿಳಿ ಹೇಳಿ ಕಳುಹಿಸುತ್ತಿದ್ದಾರೆ. ಅಲ್ಲದೆ, ಕೋವಿಡ್ ಕಫ್ರ್ಯೂ ಮಾರ್ಗಸೂಚಿ ಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದವರ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

ಲಷ್ಕರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸುರೇಶ್‍ಕುಮಾರ್, ಇರ್ವಿನ್ ರಸ್ತೆ, ಅಶೋಕ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ, ಅನಗತ್ಯವಾಗಿ ಸಂಚರಿಸುವವರಿಗೆ ಬ್ರೇಕ್ ಹಾಕಿದ್ದರು. ವಾಹನ ಸವಾರರಿಂದ ಸಮಂಜಸ ಮಾಹಿತಿ ಪಡೆದು, ಅದು ಸೂಕ್ತ ವಾಗಿದ್ದರೆ ಕೊರೊನಾ ಎಚ್ಚರಿಕೆ ನೀಡಿ ಕಳುಹಿಸಿದರೆ, ಸಮರ್ಪಕ ಉತ್ತರ ನೀಡದವರ ವಾಹನ ವಶಕ್ಕೆ ಪಡೆದುಕೊಂಡರು.

ಹೀಗೆ ಗುರುವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಏಪ್ರಿಲ್ 29ರಂದು ಒಂದೇ ದಿನ ಮೈಸೂರು ನಗರದಲ್ಲಿ 281 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

248 ದ್ವಿಚಕ್ರವಾಹನಗಳು, 4 ಆಟೋ ರಿಕ್ಸಾ, ಗೂಡ್ಸ್ ಆಟೋ, 28 ಕಾರು ವಶಪಡಿಸಿಕೊಂಡು ಆಯಾ ಪೊಲೀಸ್ ಠಾಣೆಗಳ ಆವರಣದಲ್ಲಿ ನಿಲ್ಲಿಸಲಾಗುತ್ತಿದೆ. ನಂತರ ಅವುಗಳ ವಾರಸುದಾರರಿಗೆ ಕೊರೊನಾ ಸೋಂಕು ನಿಯಂತ್ರಿಸಲೆಂದು ಜಾರಿಗೆ ತಂದಿರುವ ಕಫ್ರ್ಯೂ ಆದೇಶ ವನ್ನು ಪಾಲಿಸಬೇಕು ಎಂದು ನೀತಿ ಪಾಠ ಹೇಳಿ ಲಘು ಪ್ರಕರಣ ದಾಖಲಿಸಿ, ಮುಚ್ಚಳಿಕೆ ಬರೆಸಿಕೊಂಡು ವಾಹನಗಳನ್ನು ಬಿಟ್ಟು ಕಳುಹಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಮುಂದಿನ ದಿನ ಗಳಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನಾವಶ್ಯಕವಾಗಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಚಂದ್ರಗುಪ್ತ ತಿಳಿಸಿದ್ದಾರೆ. ಏಪ್ರಿಲ್ 27ರ ರಾತ್ರಿ 9ರಿಂದ ಮೇ 12ರ ಬೆಳಿಗ್ಗೆ 6 ಗಂಟೆ ವರೆಗೆ ಕೊರೊನಾ ಕಫ್ರ್ಯೂ ಜಾರಿಯಲ್ಲಿ ರುವುದರಿಂದ ಪ್ರತೀ ದಿನ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅತ್ಯವಶ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಉಳಿದ ಅವಧಿಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲು ಪೊಲೀಸರು ಬ್ಯಾರಿ ಕೇಡ್‍ಗಳನ್ನು ಅಳವಡಿಸಿ ತಪಾಸಣಾ ಕಾರ್ಯಾಚರಣೆಯನ್ನು ತೀವ್ರಗೊಳಿ ಸಿದ್ದಾರೆ. ಮೈಸೂರಿನ ಮೆಟ್ರೋಪೋಲ್ ಸರ್ಕಲ್, ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರೋಡ್ ಜಂಕ್ಷನ್, ಶೃಂಗಾರ್ ಹೋಟೆಲ್ ಜಂಕ್ಷನ್, ಓಲ್ಡ್ ಆರ್‍ಎಂಸಿ ಸರ್ಕಲ್ ಸೇರಿದಂತೆ ಮೈಸೂರು ನಗರ ದಾದ್ಯಂತ ಪ್ರಮುಖ ಜಂಕ್ಷನ್, ಸರ್ಕಲ್ ಗಳಲ್ಲಿ ಬ್ಯಾರಿಕೇಡ್ ಅಳವಡಿಸಿಕೊಂಡು ಆಯಾ ಠಾಣಾ ಪೊಲೀಸರು ಹಾಗೂ ಹೋಂ ಗಾರ್ಡ್ ಸಿಬ್ಬಂದಿಗಳನ್ನು ಬಂದೋ ಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಉಳಿದಂತೆ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು-ಬೆಂಗಳೂರು ಹೆದ್ದಾರಿ, ಕೆಆರ್‍ಎಸ್ ರಸ್ತೆ, ಹುಣಸೂರು ರಸ್ತೆ, ಬೋಗಾದಿ ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆ, ಬನ್ನೂರು ರಸ್ತೆ ಹಾಗೂ ಮಹ ದೇವಪುರ ರಸ್ತೆಗಳ ಚೆಕ್‍ಪೋಸ್ಟ್‍ಗಳಲ್ಲೂ ವಾಹನಗಳನ್ನು ನಿಲ್ಲಿಸಿ, ವಿಚಾರಿಸಿ, ಗುರುತಿನ ಚೀಟಿ ಮತ್ತು ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಅನಿವಾರ್ಯ ಹಾಗೂ ತುರ್ತು ಸಂದರ್ಭ ವನ್ನು ಹೊರತುಪಡಿಸಿ ಸಾಮಾನ್ಯ ಕಾರಣ ಹೇಳಿ ಅನಗತ್ಯವಾಗಿ ಓಡಾಡುತ್ತಿರುವವ ರನ್ನು ವಾಪಸ್ ಕಳುಹಿಸುತ್ತಿದ್ದಾರೆ.

ಸರ್ಕಾರಿ ಕಚೇರಿ, ಆಸ್ಪತ್ರೆ ಕೆಲಸ, ಕೋವಿಡ್ ಕರ್ತವ್ಯ, ಸಾವು, ಅನಾರೋಗ್ಯ, ಕೋವಿಡ್ ಲಸಿಕೆ, ಆರ್‍ಟಿಪಿಸಿಆರ್ ಟೆಸ್ಟ್‍ನಂತಹ ಸಕಾರಣಗಳಿದ್ದರೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ ಯಾದ್ದರಿಂದ ಸಾರ್ವಜನಿಕರು ಅನಾ ವಶ್ಯವಾಗಿ ಓಡಾಡದೇ ಮನೆಯಲ್ಲಿ ಸುರಕ್ಷಿತ ವಾಗಿದ್ದು, ಅಪಾಯಕಾರಿ ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Translate »