ಭಯವಿಲ್ಲದೆ ತೆರೆದಿರುವ ಅಂಗಡಿ, ಮುಂಗಟ್ಟುಗಳು
ಮೈಸೂರು

ಭಯವಿಲ್ಲದೆ ತೆರೆದಿರುವ ಅಂಗಡಿ, ಮುಂಗಟ್ಟುಗಳು

May 1, 2021

ತಿ.ನರಸೀಪುರ, ಏ. 30 (ಎಸ್‍ಕೆ)-ತಿ.ನರಸೀಪುರ ಪಟ್ಟಣದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡಬೇಕಾದ ತಾಲೂಕು ಆಡಳಿತ ಬೇಜವಾಬ್ದಾರಿತನ ತೋರಿರು ವುದು ಕಂಡು ಬಂದಿದೆ.

ತಾಲೂಕಿನಲ್ಲಿ ಕೊರೊನಾ ಸೋಂಕು ಊಹೆಗೂ ನಿಲುಕದಂತೆ ದಿನಕ್ಕೆ 100ರ ಸಂಖ್ಯೆಯಲ್ಲಿ ಹರಡುತ್ತಿದ್ದು, ಸಾವಿರ ಗಡಿದಾಟಿ ಮುನ್ನುಗ್ಗುತ್ತಿದೆ. ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಜನರ ಜೀವ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಆದರೆ ಮಾರ್ಗಸೂಚಿಗಳನ್ನು ಕಠಿಣವಾಗಿ ಜಾರಿಗೊಳಿಸ ಬೇಕಾದ ತಾಲೂಕು ಆಡಳಿತ ಮಾತ್ರ ತನ್ನ ಕರ್ತವ್ಯ ನಿಭಾಯಿಸಲು ವಿಫಲವಾಗಿರುವುದು ಕಂಡು ಬಂದಿದೆ.

ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕ ರಿಗೆ ಬೆಳಗ್ಗೆ 6 ರಿಂದ 10 ರವರೆಗೆ ಅವಕಾಶ ಕಲ್ಪಿಸ ಲಾಗಿದೆ. ಅಂತೆಯೇ ದಿನನಿತ್ಯ ಅವಶ್ಯಕ ಪದಾರ್ಥಗಳ ಅಂಗಡಿಗಳಿಗೆ ಮಾತ್ರ ಸಮಯ ನಿಗದಿಮಾಡ ಲಾಗಿದ್ದು, ಇನ್ನಿತರೆ ಅಂಗಡಿಗಳನ್ನು ಸಂಪೂರ್ಣ ವಾಗಿ ಮುಚ್ಚುವಂತೆ ಆದೇಶ ನೀಡಲಾಗಿದೆ. ಅದರಲ್ಲಿ ಜವಳಿ ಅಂಗಡಿ, ಸ್ಟೇಷನರಿ ಅಂಗಡಿಗಳು ಹಾಗೂ ದಿನ ನಿತ್ಯ ಅಗತ್ಯವಿಲ್ಲದ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸುವಂತೆ ಆದೇಶ ನೀಡಲಾಗಿದೆ. ಆದರೆ ಪಟ್ಟಣದಲ್ಲಿ ಮಾತ್ರ ಕೊರೊನಾ ನಿಯಮವನ್ನು ಉಲ್ಲಂಘಿಸಿರುವ ಜವಳಿ, ಸ್ಟೇಷನರಿ ಅಂಗಡಿಗಳು ಸೇರಿದಂತೆ ಇನ್ನಿತರೆ ಅಂಗಡಿಗಳು ರಾಜಾ ರೋಷ ವಾಗಿ ವ್ಯಾಪಾರದಲ್ಲಿ ನಿರತರಾಗಿರುವುದು ಕಂಡು ಬಂದಿದೆ.

ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಅದರ ಸಹವಾಸವೇ ಬೇಡ ವೆಂದು ಹೋಟೆಲ್ ಮಾಲೀಕರು ಸಂಪೂರ್ಣವಾಗಿ ಹೋಟೆಲ್‍ಗಳನ್ನು ಮುಚ್ಚಿದ್ದರೆ, ಫುಟ್‍ಪಾತ್ ಹೋಟೆಲ್ ನವರು ಮಾತ್ರ ಯಾವುದೇ ಎಗ್ಗಿಲ್ಲದೇ ಸ್ಥಳದಲ್ಲೇ ತಿಂಡಿ ತಿನ್ನಲು ಅವಕಾಶ ಮಾಡಿಕೊಡುವ ಮೂಲಕ ಸರ್ಕಾರದ ಆದೇಶಕ್ಕೆ ಸೆಡ್ಡುಹೊಡೆದಿದ್ದಾರೆ. ಪಟ್ಟಣ ಪೆÇಲೀಸ್ ಠಾಣೆಯ ಎದುರಿನಲ್ಲಿಯೇ ಫಾಸ್ಟ್ ಫುಡ್ ವ್ಯಾಪಾರ ನಡೆಯುತ್ತಿದ್ದರೂ ನಿಯಂತ್ರಿಸಬೇಕಾದ ಪೆÇಲೀಸರೇ ಅಲ್ಲಿ ಉಪಹಾರ ಸೇವಿಸುತ್ತಿರುವುದು ನಿಯಮ ಉಲ್ಲಂಘನೆಗೆ ಸಾಕ್ಷಿಯಾಗಿದೆ.
ಲಿಂಕ್ ರಸ್ತೆಯಲ್ಲಿ ಜವಳಿ ಅಂಗಡಿ ಮಾಲೀಕರು ಸಹ ಯಾವುದೇ ಯಾವುದೇ ಭಯವಿಲ್ಲದೇ ರಾಜಾ ರೋಷವಾಗಿ ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ನಿರತರಾಗಿದ್ದರೂ ಅಧಿಕಾರಿಗಳು ಮಾತ್ರ ಕಾಣದಂತೆ ವರ್ತಿಸುತ್ತಿರುವುದು ಅನುಮಾನಕ್ಕೆಡೆ ಮಾಡಿದಂತಾ ಗಿದೆ. ಜವಳಿ ಹಾಗೂ ಸ್ಟೇಷನರಿ ಅಂಗಡಿ ತೆರೆದಿರುವ ಬಗ್ಗೆ ಸಾರ್ವಜನಿಕರು ಸಾಕ್ಷಿ ಸಮೇತ ಗಮನಕ್ಕೆ ತಂದರೂ ತಹಶೀಲ್ದಾರರು ಯಾವುದೇ ಕ್ರಮಕ್ಕೆ ಮುಂದಾಗ ದಿರುವುದು ತಾಲೂಕು ಆಡಳಿತದ ಬೇಜವಾಬ್ದಾರಿ ತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

10 ಗಂಟೆಯ ನಂತರ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರನ್ನು ಬೆದರಿಸಿ ಕಳುಹಿಸುವ ಬೆಳವಣಿಗೆ ಹೊರತು ಪಡಿಸಿ ಕೊರೊನಾ ನಿಯಮ ಪಾಲನೆಯಾಗದಿರುವುದು ಮಾತ್ರ ವಿಪರ್ಯಾಸ.

ತಾಲೂಕು ಆಡಳಿತದ ಬೇಜವಾಬ್ದಾರಿಯ ಹಿನ್ನೆಲೆ ಯಲ್ಲಿ ಕೊರೊನಾ ತಾಲೂಕಿನಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Translate »