ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
ಮೈಸೂರು

ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

May 1, 2021

ಸಾಲಿಗ್ರಾಮ, ಏ.30(ಜ್ಯೋತಿ)- ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮೈಸೂರು ಗ್ರಾಮಾಂತರ ಡಿವೈಎಸ್ಪಿ ಸುಮೀತ್ ಮನವಿ ಮಾಡಿದರು.

ಸಾಲಿಗ್ರಾಮದ ಎಸ್‍ಎಲ್‍ಆರ್ ಕಲ್ಯಾಣ ಮಂಟಪದಲ್ಲಿ ಕೊರೊನಾ ವಾರಿಯರ್ಸ್‍ಗೆ ಮಾಸ್ಕ್, ಕೈ ಗ್ಲೌಸ್, ಸ್ಯಾನಿಟೈಸರ್ ಮತ್ತು ಫೇಸ್‍ಶೀಲ್ಡ್‍ಗಳ ಕಿಟ್‍ಗಳನ್ನು ವಿತರಿಸಿ ಮಾತನಾಡಿ, ಕೊರೊನಾ ಸೋಂಕು ಹೆಚ್ಚು ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಗುಂಪು ಸೇರದೆ, ಮನೆಯಿಂದ ಹೊರ ಬರದೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ವಾಹನಗಳಲ್ಲಿ ಓಡಾಡಬಾರದು. ಅವಶ್ಯಕತೆ ಇದ್ದರೆ ಮಾತ್ರ ಬರಬೇಕು. ಬೆಳಗ್ಗೆ 10 ಗಂಟೆ ನಂತರ ತಿರುಗಾಡಬಾರದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಉದ್ಯಮಿ ಸಂದೇಶ್ ಅವರು, ಡಿ.ರವಿ ಶಂಕರ್ ಅವರ ನೇತೃತ್ವದಲ್ಲಿ ನಾಡಕಚೇರಿ, ಗ್ರಾಮ ಪಂಚಾಯಿತಿ, ಪೆÇಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸುಮಾರು 600ಕ್ಕೂ ಮಂದಿಗೆ ಕಿಟ್‍ಗಳನ್ನು ನೀಡಿದರು. ಸರ್ಕಲ್ ಇನ್ಸ್‍ಪೆಕ್ಟರ್ ಲವ, ಪಿಎಸ್‍ಐ ಆರತಿ, ಡಾ.ದರ್ಶನ್, ಸುನಿಲ್, ತೇಜುಕುಮಾರಮ, ಬಲರಾಮ ಮಂಜ, ಅರುಣ್ ರಾಜ್ ಇದ್ದರು.

Translate »