ಮಳೆಯಿಂದ ಶಾಲಾ ಮಕ್ಕಳ ಬವಣೆ: ಪೋಷಕರ ಆಕ್ರೋಶ
ಮೈಸೂರು

ಮಳೆಯಿಂದ ಶಾಲಾ ಮಕ್ಕಳ ಬವಣೆ: ಪೋಷಕರ ಆಕ್ರೋಶ

July 25, 2018

ಪಿರಿಯಾಪಟ್ಟಣ: ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಪಟ್ಟಣದ ಆದಿಚುಂಚನಗಿರಿ ಶಾಲೆಯ ಆವರಣ ಕೆಸರು ಗದ್ದೆಯಂತಾಗಿದ್ದು, ಮಕ್ಕಳ ಸ್ಥಿತಿ ಹೇಳತೀರದಾಗಿದೆ. ಇದರಿಂದ ಕುಪಿತಗೊಂಡ ಪೋಷಕರು ಶಾಲೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ ಪ್ರಸಂಗ ಇಂದು ನಡೆಯಿತು.

ಪಟ್ಟಣದ ಅಬ್ಬೂರು ವ್ಯಾಪ್ತಿಗೆ ಸೇರಿರುವ ಅದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣ ಮಳೆಯಿಂದಾಗಿ ಶಾಲೆಗೆ ಹೋಗುವ ಮತ್ತು ಬರುವ ಸಂದರ್ಭದಲ್ಲಿ ಮಕ್ಕಳು ಪಡುತ್ತಿರುವ ಸಂಕಷ್ಟದಿಂದ ಪೋಷಷಕರು ಆತಂಕಗೊಂಡು ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ಪೋಷಷಕರಾದ ಟಿ.ಜ.ಪುಟ್ಟರಾಜು ಮೆಲ್ಲಹಳ್ಳಿ ಪರಮೇಶ್, ಪಟ್ಟಣದ ನಟರಾಜ್, ದೇವರಾಜ್ ಸೇರಿದಂತೆ ಹಲವು ಮಂದಿ ಕಿಡಿಕಾರಿದರು

ಸಂಸ್ಥೆ ಕೇಳಿದಷ್ಟು ಶುಲ್ಕ ನಾವು ನೀಡುತ್ತೇವೆ. ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ ಎಂದು ವ್ಯವಸ್ಥಾಪಕರ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ರಸ್ತೆಗೆ ಹಾಗೂ ಆವರಣದ ಸುತ್ತ ಇರುವ ಕೊಚ್ಚೆಗೆ ಕನಿಷ್ಟ ಪಕ್ಷ ಮಣ್ಣನ್ನಾದರೂ ಸುರಿದು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಪೋಷಕರು ಆಗ್ರಹಿಸಿದರು. ಈ ಸಂಸ್ಥೆಯಲ್ಲಿ ಸುಮಾರು ಒಂದು ಸಾವಿರದ ಐದುನೂರು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಳೆಗಾಲದಲ್ಲಿ ಮಕ್ಕಳ ಪರಿಸ್ಥಿತಿ ಹೇಳತೀರದಾಗಿದ್ದು, ಸಂಬಂಧಪಟ್ಟ ಸಂಸ್ಥೆ ಮುಖ್ಯಸ್ಥರು ತಕ್ಷಣ ಗಮನ ಹರಿಸಬೇಕೆಂದು ಒತ್ತಾಯಿಸಿದರು

Translate »