ರಾಜಕೀಯ ಪ್ರತಿಷ್ಠೆಯಾದ ಶ್ರದ್ಧಾಂಜಲಿ ಮೆರವಣಿಗೆ
ಮೈಸೂರು

ರಾಜಕೀಯ ಪ್ರತಿಷ್ಠೆಯಾದ ಶ್ರದ್ಧಾಂಜಲಿ ಮೆರವಣಿಗೆ

January 23, 2019

ಪಿರಿಯಾಪಟ್ಟಣ: ದೇಶ ಕಂಡ ಅಪ್ರತಿಮ ಸಂತ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಶ್ರದ್ಧಾಂಜಲಿ ಮೆರವಣಿಗೆ ರಾಜಕೀಯ ಪ್ರತಿಷ್ಠೆಯ ಕಣವಾಗಿ ಎರಡು ಗುಂಪುಗಳಾಗಿ ಹೊರಟು ಶ್ರೀಗಳ ಭಕ್ತರಲ್ಲಿ ಗೊಂದಲ ಹಾಗೂ ಬೇಸರ ಮೂಡಿಸಿದ ಸಂಗತಿ ಪಟ್ಟಣದಲ್ಲಿ ಇಂದು ನಡೆಯಿತು.

ಸೋಮವಾರ ಶ್ರೀಗಳ ಲಿಂಗೈಕ್ಯ ವಾರ್ತೆ ತಿಳಿದ ಪಟ್ಟಣದ ಜನತೆ ಬೆಟ್ಟದಪುರ ಸರ್ಕಲ್‍ನಲ್ಲಿ ಪಕ್ಷ ಭೇದ ಮರೆತು ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಸಂಖ್ಯಾತ ಕಾರ್ಯಕರ್ತರು ಹಾಗೂ ಶ್ರೀಗಳ ಭಕ್ತಾದಿಗಳು ಸಭೆ ಸೇರಿ ಇಂದು ಪಟ್ಟಣದ ಪೆÇಲೀಸ್ ಠಾಣೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಗಳವರ ಭಾವಚಿತ್ರ ಮೆರವಣಿಗೆ ನಡೆಸಿ ನಂತರ ಬಸವನಗುಡಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಅದರಂತೆಯೇ ಇಂದು 11 ಗಂಟೆಗೆ ಸರಿಯಾಗಿ ಪೆÇಲೀಸ್ ಠಾಣೆ ಮುಂದೆ ಹಲವು ಶ್ರೀಗಳ ಭಕ್ತಾದಿಗಳು ಸೇರಿದ್ದರು. ಸುಮಾರು 11.30ಕ್ಕೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಅವರ ಬೆಂಬಲಿಗರು ಶ್ರೀಗಳ ಫೆÇೀಟೋಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಭೆ ಮುಗಿಸಿ ಸಾರ್ವಜನಿಕ ಮೆರವಣಿಗೆಗೆ ಭಾಗವಹಿಸಲು ಠಾಣೆಯ ಮುಂಭಾಗಕ್ಕೆ ಬಂದರು. ಅಷ್ಟರಲ್ಲಿ ಹಾಲಿ ಶಾಸಕ ಕೆ.ಮಹದೇವ್ ಸ್ಥಳದಲ್ಲಿ ಹಾಜರಿದ್ದ ಸಂದರ್ಭವನ್ನೇ ಕಾಯ್ದುಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣವೇ ಮೆರವಣಿಗೆಯನ್ನು ಆತುರವಾಗಿ ಹೊರಡಿಸಲು ಅನುವಾದರು. ಅಷ್ಟರಲ್ಲಿ ಕೆಲವು ಜೆಡಿಎಸ್ ಕಾರ್ಯಕರ್ತರು ಶಾಸಕರು ಬರುವವರೆಗೆ ಮೆರವಣಿಗೆ ನಿಧಾನಿಸುವಂತೆ ಮನವಿ ಮಾಡಿದರೂ ಸಹ ಸ್ಪಂದಿಸದ ಮಾಜಿ ಶಾಸಕ ಕೆ.ವೆಂಕಟೇಶ್ ಅಭಿಮಾನಿಗಳು ಮೆರವಣಿಗೆ ಮುಂದಕ್ಕೆ ಹೊರಡಿಸಿದರು. ಇದರಿಂದ ವಿಚಲಿತಗೊಂಡ ಜೆಡಿಎಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನು ಶಾಸಕರು ಬರುವವರೆಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಯಶಸ್ವಿಯಾದರು.

ತಡವಾಗಿ ಬಂದ ಶಾಸಕ ಕೆ.ಮಹದೇವ್ ಅಲ್ಲಿ ಉಳಿದಿದ್ದ ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರತ್ಯೇಕ ಗುಂಪಿನೊಂದಿಗೆ ಮತ್ತೆ ಶ್ರೀಗಳ ಭಾವಚಿತ್ರವನ್ನು ತರಿಸಿ ಬೆಟ್ಟದಪುರ ಸರ್ಕಲ್‍ವರೆಗೆ ಮೆರವಣಿಗೆಯಲ್ಲಿ ಬಂದು ಅಲ್ಲಿ ಮತ್ತೆ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಒಟ್ಟಿನಲ್ಲಿ ಸಿದ್ಧಗಂಗಾ ಮಠದಲ್ಲಿ ಸರ್ಕಾರದ ಮಟ್ಟದಲ್ಲಿ ಎಲ್ಲಾ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿ-ಭಾವ ಮೆರೆದರೆ ಇಲ್ಲಿ ಶ್ರೀಗಳ ಶ್ರದ್ಧಾಂಜಲಿಯಲ್ಲಿ ರಾಜಕೀಯ ಮೆರೆದ ಮುಖಂಡರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು.

Translate »