ನವಜಾತ ಶಿಶು ಸಾವು: ವೈದ್ಯೆ ವಿರುದ್ಧ ದೂರು
ಮೈಸೂರು

ನವಜಾತ ಶಿಶು ಸಾವು: ವೈದ್ಯೆ ವಿರುದ್ಧ ದೂರು

February 10, 2019

ಪಿರಿಯಾಪಟ್ಟಣ: ವೈದ್ಯರ ನಿರ್ಲಕ್ಷ್ಯದಿಂದಲೇ ನವ ಜಾತ ಶಿಶು ಸಾವನ್ನಪ್ಪಿದೆ ಎಂದು ಆರೋಪಿಸಿ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಲಾಗಿದೆ. ಪಟ್ಟಣದ ಕಾವಟಗೇರಿ ಬೀದಿಯ ನಿವಾಸಿ ಯತೀಶ್ ಎಂಬುವವರ ಪತ್ನಿ ಕಾವ್ಯ ಕಳೆದ ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶನಿವಾರ ಬೆಳಿಗ್ಗೆ ವೈದ್ಯರು ಮಗುವನ್ನು ಪರೀಕ್ಷಿಸಿ ಮಗುವಿಗೆ ಜಾಂಡಿಸ್ ಇದೆ ಎಂದು ಹೇಳಿ, ಮೈಸೂರಿನ ಚಲುವಾಂಬ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ನಂತರ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಬಿಳಿಕೆರೆ ಬಳಿ ಮಗು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೂಡಲೇ ಪಟ್ಟಣಕ್ಕೆ ಹಿಂದಿರುಗಿದ ಪೋಷಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಾಕ್ಟರ್ ವೀಣಾ ಸಿಂಗ್ ಸ್ಪಂದಿಸದ ಕಾರಣದಿಂದಲೇ ಮಗು ಸಾವನ್ನಪ್ಪಿದೆ ಎಂದು ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಿವೈಎಸ್‍ಪಿ ವೈ.ಎನ್.ಭಾಸ್ಕರ್ ರೈ, ಸಿಪಿಐ ಬಿ.ಆರ್. ಪ್ರದೀಪ್, ಪಿಎಸ್‍ಐ ಗಣೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿಗೆ ಕಳುಹಿಸಿಕೊಡಲಾಗಿದೆ.

Translate »