ವೀರಶೈವರು ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ದೇವನೂರು ಮಹಾಂತಸ್ವಾಮಿಗಳು
ಮೈಸೂರು

ವೀರಶೈವರು ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ದೇವನೂರು ಮಹಾಂತಸ್ವಾಮಿಗಳು

February 10, 2019

ನಂಜನಗೂಡು: ನಂಜನಗೂಡು ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀರಶೈವರಿದ್ದರೂ ಸಂಘಟನೆಯಲ್ಲಿ ಕೊರತೆ ಇದೆ. ಹಾಗಾಗಿ ತಾವೆಲ್ಲರೂ ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ದೇವ ನೂರಿನ ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮಿಗಳು ಹೇಳಿದರು.

ನೂತನವಾಗಿ ಆಯ್ಕೆಯಾಗಿರುವ ವೀರ ಶೈವ ಮಹಾಸಭಾದ ತಾಲೂಕು ಅಧ್ಯಕ್ಷರು ಹಾಗೂ ತಂಡದವರು ಮಠದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಸ್ವಾಮೀಜಿ ಮಾತನಾಡಿದರು.

ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ. ನಮ್ಮ ಸಮಸ್ಯೆಗಳನ್ನು ನಾವೇ ಪರಿ ಹರಿಸಿಕೊಳ್ಳಬೇಕು. ಒಂದೇ ಸಮಾಜ ದವರಾದ ನಾವು ಒಗ್ಗಟ್ಟಿನಿಂದ ಶ್ರಮಿಸಿ ನಮ್ಮ ಸಮಾಜದ ಇತಿಹಾಸ, ಗೌರವ ಮತ್ತು ಘನತೆÀಯನ್ನು ಉಳಿಸಿಕೊಳ್ಳಬೇಕೆಂದು ತಿಳಿಸಿದರು. ಇಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಸಾಕಷ್ಟಿದೆ. ಸಂಘಟನೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಯುವಕರು ಮುಂದೆ ಬರಬೇಕು ಎಂದರು.

ವೀರಶೈವ ಮುಖಂಡ ತರಗನಹಳ್ಳಿ ನಂಜುಂಡಸ್ವಾಮಿ, ಕಾಂಗ್ರೆಸ್‍ನ ಬ್ಲಾಕ್ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಶೆಟ್ಟಹಳ್ಳಿ ಗುರುಸ್ವಾಮಿ, ಬೆಂಗಳೂರಿನ ವೀರಶೈವ ಸಮಾಜದ ನಿರ್ದೇಶಕ ಶಿವನಂಜಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಮಾಜಿ ತಾ.ಪಂ ಅಧ್ಯಕ್ಷ ಚಿಕ್ಕಮಾದಪ್ಪ, ಕಲ್ಕುಂದ ರತ್ನಾಕರ್, ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಮೇಲ್ವಿಚಾರಣಾ ಸಮಿತಿ ಸದಸ್ಯ ಹಾಗೂ ಹಾಲಿ ನಿರ್ದೇಶಕರಾದ ಹೆಚ್.ಎಂ.ಮಂಜುಳ ಮಧು, ಮುಂತಾದವರು ಮಾತನಾಡಿ, ವೀರಶೈವ ಸಮಾಜದ ಅಭಿ ವೃದ್ಧಿ ಮತ್ತು ಸಂಘಟನೆ ಬಗ್ಗೆ ತಮ್ಮ ಅಭಿ ಪ್ರಾಯಗಳನ್ನು ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ ಬುಲೆಟ್ ಮಹದೇವಪ್ಪ ಮಾತನಾಡಿದರು. ಮಹಾಸಭಾ ತಾಲೂಕು ಘಟಕ ನಿರ್ದೇಶಕರುಗಳಾದ ಸುತ್ತೂರಿನ ಸುಧಾ ನಂಜನಗೂಡಿನ ನಂಜಮ್ಮಣಿ, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಮಂಜುಳ, ಮಂಜುಳ ರಾಜೇಶ್, ಹುಳಿಮಾವಿನ ಸೋಮೇಶ್ವರಿ, ಮಲ್ಲಳ್ಳಿ ಹೇಮಾ, ಬಳ್ಳೂರುಂಡಿ ಬಿ.ಪಿ.ಶಿವ ನಾಗಪ್ಪ, ಕಲ್ಕುಂದ ಲೋಕೇಶ್, ನಂದಗುಂದ ಬಿ.ಗುರುಪ್ರಸಾದ್, ತಾಂಡವಪುರ ಟಿ.ಎಂ. ಮಾಧು, ಬಸವಟ್ಟಿಗೆ ನಂಜಪ್ಪ, ಚುಂಚನಹಳ್ಳಿ ಪಿ.ನಾಗರಾಜು, ಬದನವಾಳು ಬಿ.ಎನ್. ಮಂಜುನಾಥ್, ಹಿರಿಯ ವಕೀಲ ಮುದ್ದ ಹಳ್ಳಿ ಎಂ.ಕೆ.ಬಸವಣ್ಣ(ಶಿವಬಸಪ್ಪ), ಹೆಗ್ಗಡ ಹಳ್ಳಿ ಡಿ.ಎಂ.ಶಿವಪ್ರಕಾಶ್, ಕಸುವಿನಹಳ್ಳಿ ಕೆ.ಎನ್.ಚಿನ್ನಸ್ವಾಮಿ, ಸಿಂಧುವಳ್ಳಿಪುರ ಎಸ್.ಎನ್. ಮಲ್ಲೇಶ್, ಕಾಂಗ್ರೆಸ್ ಬ್ಲಾಕ್ ಅಧÀ್ಯಕ್ಷ ಶೆಟ್ಟಹಳ್ಳಿ ಗುರುಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ತಗಡೂರು ಟಿ.ಎಸ್.ವೀರೇಶ್ ಕುಮಾರ್ ಹಾಗೂ ವೀರಶೈವ ಮುಖಂಡರು ಭಾಗವಹಿಸಿದ್ದರು.

Translate »