ಚುನಾವಣಾ ಆಯೋಗಕ್ಕೆ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ಸಲಹೆ: `ಆಪರೇಷನ್ ಪಕ್ಷ’ದಲ್ಲಿ ಭಾಗಿಯಾದವರಿಗೆ 25 ವರ್ಷ ಚುನಾವಣೆಯಿಂದ ಹೊರಗಿಡಿ 
ಮೈಸೂರು

ಚುನಾವಣಾ ಆಯೋಗಕ್ಕೆ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ಸಲಹೆ: `ಆಪರೇಷನ್ ಪಕ್ಷ’ದಲ್ಲಿ ಭಾಗಿಯಾದವರಿಗೆ 25 ವರ್ಷ ಚುನಾವಣೆಯಿಂದ ಹೊರಗಿಡಿ 

February 10, 2019

ಮೈಸೂರು: ಮಂತ್ರಿ, ಶಾಸಕರನ್ನು ಹಣ ಕೊಟ್ಟು ಖರೀದಿಸುವ ಆಪರೇಷನ್ ಕಮಲ, ಆಪರೇಷನ್ ಜೆಡಿಎಸ್, ಆಪರೇ ಷನ್ ಕಾಂಗ್ರೆಸ್ ಹೀಗೆ ಅಕ್ರಮದಲ್ಲಿ ಭಾಗಿಯಾದ ಶಾಸ ಕರು, ಮಂತ್ರಿಗಳನ್ನು 25 ವರ್ಷಗಳ ಕಾಲ ಚುನಾವಣೆ ಗಳಲ್ಲಿ ನಿಲ್ಲದಂತಹ ಕಠಿಣ ನಿಯಮವನ್ನು ಚುನಾವಣಾ ಆಯೋಗ ರೂಪಿಸಿದರೆ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು. ಪಕ್ಷಗಳಲ್ಲಿನ ಆಪರೇಷನ್‍ಗಳಿಗೆ ಚುನಾವಣಾ ಆಯೋಗದ ನೀತಿಯಲ್ಲಿರುವ ಲೋಪಗಳೇ ಕಾರಣವಾಗಿದ್ದು, ಆಯೋಗ ಕೂಡಲೇ ಇದನ್ನು ಪರಿಷ್ಕರಿಸಿ ಇಂತಹ ಅಕ್ರಮಗಳಿಗೆ ಅವಕಾಶವಾಗದಂತೆ ತಡೆಗಟ್ಟಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಜೆಟ್ ಮಂಡನೆಗೂ ಮೊದಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ  ಮಾಡಿರುವ ಆಡಿಯೋದಲ್ಲಿ ಉನ್ನತ ಹುದ್ದೆಗಳಲ್ಲಿರುವವರನ್ನು ಬುಕ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದರಲ್ಲಿ ಶಾಮೀಲಾಗಿರುವವರು ಯಾರು ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ತಮ್ಮ ಪಕ್ಷ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ಅಂಬರೀಶ್ ಅವರ ಪತ್ನಿ ಸುಮಲತಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಯಸಿದರೆ ತಮ್ಮ ಪಕ್ಷ ಅವರಿಗೆ ಅವಕಾಶ ನೀಡಲಿದ್ದು, ತಕ್ಷಣ ಬಿ.ಫಾರಂ ನೀಡಲಿದೆ ಎಂದರು. ಸುದ್ದಿಗೋಷ್ಠಿ ವೇಳೆ ಪಕ್ಷದ ಪದಾಧಿಕಾರಿಗಳಾದ ಕುಮಾರಸ್ವಾಮಿ, ಗುರುಲಿಂಗ ಉಪಸ್ಥಿತರಿದ್ದರು.

Translate »