ಮಳೆ ಆಶ್ರಯದ ದೇಸಿ ಭತ್ತವೂ  ಸಿರಿಧಾನ್ಯವಾಗಿ ಮಾರುಕಟ್ಟೆ ಪಡೆಯಲಿ
ಮೈಸೂರು

ಮಳೆ ಆಶ್ರಯದ ದೇಸಿ ಭತ್ತವೂ ಸಿರಿಧಾನ್ಯವಾಗಿ ಮಾರುಕಟ್ಟೆ ಪಡೆಯಲಿ

February 10, 2019

ಮೈಸೂರು: ಮಳೆ ಆಶ್ರಯದಲ್ಲಿ ಬೆಳೆಯುವ ದೇಸಿ ಭತ್ತದ ತಳಿಗಳನ್ನು ಸಿರಿಧಾನ್ಯವಾಗಿ ಘೋಷಿಸಿ ಮಾರು ಕಟ್ಟೆ ಕಲ್ಪಿಸುವ(ಬ್ರಾಂಡ್ ಕ್ರಿಯೇಟ್) ಅವಶ್ಯ ಕತೆಯಿದೆ ಎಂದು ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕಾಡಾ ಕಚೇರಿ ಅವರಣ ದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗ, ಕೃಷಿ ಇಲಾಖೆ, ಜಿ¯್ಲÁ ಕೃಷಿ ತರಬೇತಿ ಕೇಂದ್ರ, ಸಹಜ ಸಮೃದ್ಧ ಸಂಸ್ಥೆಯ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಿರುವ ಎರಡು ದಿನ ಗಳ `ದೇಸಿ ಅಕ್ಕಿ ಮೇಳ’ದಲ್ಲಿ ಮಾತನಾಡಿದ ಅವರು, ಮಳೆ ಆಶ್ರಯದಲ್ಲಿ ಭತ್ತ ಬೆಳೆಯುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಕ್ತ ಬೆಲೆ ಸಿಗದ ಕಾರಣ ಭತ್ತ ಬೆಳೆಯು ವುದನ್ನೇ ನಿಲ್ಲಿಸುತ್ತಿದ್ದಾರೆ. ಈ ಪದ್ಧತಿಯಲ್ಲಿ 2 ಸಾವಿರ ರೂ. ವೆಚ್ಚ ಮಾಡಿ ಒಂದು ಕ್ವಿಂಟಾಲ್ ಭತ್ತ ಬೆಳೆದರೆ ಕೇವಲ 1600 ರೂ.ಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ಮಳೆ ಆಶ್ರಯದಲ್ಲಿ ಭತ್ತ ಬೆಳೆಯುವುದು ಪ್ರತಿ ವರ್ಷ 1 ಲಕ್ಷ ಹೆಕ್ಟೇರ್ ಪ್ರದೇಶ ದಷ್ಟು ಕಡಿಮೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.

ನಮಗೆ ಭತ್ತವೇ ಸಿರಿಧಾನ್ಯ ಎನಿಸಿದೆ. ಮಳೆ ಆಶ್ರಯದಲ್ಲಿ ಬೆಳೆಯುವ ರಾಜಮುಡಿ ಮತ್ತು ಇತರೆ ಸಾಂಪ್ರದಾಯಕ ದೇಸಿ ಭತ್ತದ ತಳಿಗಳ ಗುಣ, ವಿಶೇಷಗಳನ್ನು ಗ್ರಾಹಕರಿಗೆ ತಿಳಿಸಬೇಕು. ಇದರಿಂದ ಗ್ರಾಹಕರು ದೇಸಿ ತಳಿ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀ ದಿಸಲು ಮುಂದಾಗುತ್ತಾರೆ. ಇದು ರೈತರಿಗೆ ಅನುಕೂಲವಾಗಿ ಪರಿಣಮಿಸಲಿದೆ. ಮಲೆ ನಾಡು ಮತ್ತು ಕರಾವಳಿ ಜನರಿಗೆ ರಾಗಿ, ಜೋಳ ತಿಂದರೆ ಜೀರ್ಣವಾಗುವುದಿಲ್ಲ. ಎಲ್ಲ ಬೆಳೆಗಳಿಗೂ ಗುಣಮಟ್ಟದ ಆಧಾರದ ಮೇಲೆ ಬೆಂಬಲ ಬೆಲೆ ನಿಗದಿಯಾಗಬೇಕು. ಎಲ್ಲ ಭತ್ತಕ್ಕೆ ಒಂದೇ ರೀತಿ ಬೆಂಬಲ ಬೆಲೆ ನೀಡುವುದು ಸರಿಯಲ್ಲ. ಭತ್ತದ ತಳಿಯ ಗುಣಮಟ್ಟ, ಪೌಷ್ಟಿಕತೆಗಳ ಆಧಾರದ ಮೇಲೆ ಬೆಂಬಲ ಬೆಲೆ ನೀಡಬೇಕು. ನೀರಾವರಿ ಕೃಷಿಯಲ್ಲಿ ಬೆಳೆಯುವ ಭತ್ತಕ್ಕಿಂತ ಮಳೆ ಯಾಶ್ರಿತ ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು ಆಗ್ರಹಿಸಿದರು.

ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಬೆಳೆ ಯುವ ರೈತರಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಮತ್ತು ಸರ್ಕಾರದಿಂದ ಒಳ್ಳೆ ಬೆಂಬಲ ಬೆಲೆ ಕೊಡಿಸುವ ಆಲೋಚನೆ ಆಯೋ ಗದ ಮುಂದಿದೆ. ಈ ಕುರಿತು ತಜ್ಞರ ಅಭಿ ಪ್ರಾಯ ಪಡೆದು ಸರ್ಕಾರಕ್ಕೆ ವರದಿ ಸಲ್ಲಿ ಸುತ್ತೇವೆ ಎಂದರು. ದೇಸಿ ಅಕ್ಕಿ ಮೇಳಗಳು ನಿರಂತರವಾಗಿಸಿದಾಗ ಮಾತ್ರ ಜನರಲ್ಲಿ ದೇಸಿ ಭತ್ತದ ತಳಿಯ ಬಗ್ಗೆ ಜಾಗೃತಿ ಮೂಡಿಸಬಹುದು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್ ರೈತ ಪರ ಬಜೆಟ್ ಆಗಿದೆ. ಕೃಷಿ ಬೆಲೆ ಆಯೋಗ ಸಲ್ಲಿಸಿದ್ದ 5 ಶಿಫಾರಸ್ಸುಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ ಎಂದರು. ಮೇಯರ್ ಪುಷ್ಪಲತಾ ಜಗನ್ನಾಥ್ ವಸ್ತು ಪ್ರದರ್ಶನ ವನ್ನು ಉದ್ಘಾಟಿಸಿದರು. ಶಾಸಕ ಎಸ್.ಎ. ರಾಮದಾಸ್, ಪಶ್ಚಿಮ ಬಂಗಾಳದದ ಸಹಾಯಕ ಕೃಷಿ ನಿರ್ದೇಶಕ ಡಾ.ಅನು ಪಮ್ ಪಾಲ್, ಜಿ.ಪಂ ಸದಸ್ಯ ಕೃಷ್ಣ, ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಜಿ. ಕೃಷ್ಣಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಮಹಂತೇಶಪ್ಪ, ಮಂಡ್ಯ ವಿಸಿ ಫಾರಂ ಪ್ರಾಧ್ಯಾಪಕ ಡಾ. ರಾಜಣ್ಣ, ರಾಜಮುಡಿ ಭತ್ತ ಸಂರಕ್ಷಕ ಹೊಯ್ಸಳ ಎಸ್.ಅಪ್ಪಾಜಿ, ರಾಜಭೋಗ ತಳಿ ಸಂರಕ್ಷಕಿ ಪದ್ಮಾವತಮ್ಮ, ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ರಮೇಶ್ ಪಿ.ರಂಗಸಮುದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »