ಒಣ ಹುಲ್ಲು ಮಾರಾಟ ನಿರ್ಬಂಧ ಸಡಿಲಗೊಳಿಸಲು ಡಿಸಿಗೆ ರೈತ ಸಂಘ ಮನವಿ
ಕೊಡಗು

ಒಣ ಹುಲ್ಲು ಮಾರಾಟ ನಿರ್ಬಂಧ ಸಡಿಲಗೊಳಿಸಲು ಡಿಸಿಗೆ ರೈತ ಸಂಘ ಮನವಿ

February 10, 2019

ಗೋಣಿಕೊಪ್ಪಲು: ರೈತರ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾ ಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯ ಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರ ನಿಯೋಗ ತೆರಳಿ ಕೊಡಗು ಜಿಲ್ಲೆಯ ನೂತನ ಜಿಲ್ಲಾ ಧಿಕಾರಿಗಳಾದ ಕಣ್ಮಣಿ ಜಾಯ್‍ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಜಿಲ್ಲೆಯ ರೈತರು ತಮ್ಮ ಗದ್ದೆಗÀಳಲ್ಲಿ ಬೆಳೆದ ಭತ್ತದ ಒಣ ಹುಲ್ಲನ್ನು ತಮ್ಮ ಕಣಗಳಲ್ಲಿ ಶೇಖರಿಸಿಟ್ಟಿದ್ದು ಇವುಗಳನ್ನು ವಿಲೇವಾರಿ ಮಾಡಲು ಕಾನೂನಿನ ತೊಡಕಿದ್ದು ಇದನ್ನು ತಕ್ಷಣವೇ ಸಡಿಲಗೊಳಿಸುವ ಮೂಲಕ ಇತರ ರಾಜ್ಯಗಳಿಗೆ ಒಣ ಹುಲ್ಲನ್ನು ರೈತರು ಮಾರಾಟ ಮಾಡಲು ಕ್ರಮ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ಕಣ್ಮಣಿ ಜಾಯ್ ರವರಿಗೆ ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾಧಿಕಾರಿಗಳು ರೈತ ಸಂಘದ ಮನವಿಗೆ ಸ್ಪಂದಿಸಿ ಹಿಂದಿನ ಜಿಲ್ಲಾ ಧಿಕಾರಿಗಳ ಅವಧಿಯಲ್ಲಿ ಹೊರ ರಾಜ್ಯ ಗಳಿಗೆ ಹುಲ್ಲನ್ನು ಮಾರಾಟ ಮಾಡಲು ನಿರ್ಬಂಧ ಹೇರಲಾಗಿದೆ. ಇದು ಎಲ್ಲಾ ಜಿಲ್ಲೆ ಗಳಿಗೂ ಅನ್ವಯವಾಗಿದೆ. ಆದುದರಿಂದ ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ರಾದ ಕಾಡ್ಯಮಾಡ ಮನು ಸೋಮಯ್ಯ ಕಳೆದ ಕೆಲವು ತಿಂಗಳ ಹಿಂದೆ ಕೊಡಗಿ ನಿಂದ ಕೇರಳಕ್ಕೆ ಒಣ ಹುಲ್ಲು ಸಾಗಾಟ ಮಾಡದಂತೆ ಜಿಲ್ಲಾಧಿಕಾರಿಗಳು ಹೊರಡಿ ಸಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾ ಲಯ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು. ನ್ಯಾಯಾಲಯದ ಆದೇಶ ಪ್ರತಿ ತಲುಪಿಸು ವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ದರು. ನಂತರ ಜಿಲ್ಲಾಧಿಕಾರಿಗಳಿಗೆ ತಡೆ ಯಾಜ್ಞೆ ಪ್ರತಿಯನ್ನು ನೀಡಲಾಯಿತು.

ತಾಲೂಕು ಮಟ್ಟದಲ್ಲಿ ಹಿರಿಯ ಅಧಿಕಾರಿ ಗಳ ಹಾಗೂ ರೈತ ಮುಖಂಡರುಗಳ ಸಭೆ ಆಯೋಜಿಸುವ ಮೂಲಕ ರೈತರ ಸಮಸ್ಯೆ ಗಳನ್ನು ಆಲಿಸುವ ಪ್ರಯತ್ನವಾಗಿ ತಾಲೂಕು ಮಟ್ಟದ ಸಭೆ ನಡೆಸುವಂತೆ ರೈತ ಮುಖಂ ಡರು ಮನವಿ ಮಾಡಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಜನಸಂಪರ್ಕ ಸಭೆ ನಡೆಸುವ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲಾಗುವುದು. ಈ ಸಭೆಗೆ ರೈತ ಮುಖಂಡರುಗಳನ್ನು ಆಹ್ವಾನಿಸಲಾಗುವುದು ಎಂದರು. ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಸಂಚಾಲಕರಾದ ಪುಚ್ಚಿಮಾಡ ಶುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಖಜಾಂಜಿ ತೀತಿರ ಸಭಿತ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆ ಮಾಡ ಮಂಜುನಾಥ್, ಮುಖಂಡರಾದ ಮಂಡೇಪಂಡ ಪ್ರವೀಣ್, ಕೋದೇಂಗಡ ಸುರೇಶ್ ಚಂಗಪ್ಪ, ಗಾಡಂಗಡ ಉತ್ತಯ್ಯ, ಸದಸ್ಯರಾದ ಎಂ.ಬಿ.ಅಶೋಕ್, ಎಂ.ಬಿ. ಹರೀಶ್, ಹೆಚ್.ಕೆ.ದಿನೇಶ್, ಡಿಕ್ಕಿ, ಪ್ರಕಾಶ್, ಸಾಗರ್, ಹೆಚ್.ಎಂ.ಸ್ವಾಮಿ, ರಾಮು, ಸಣ್ಣಪ್ಪ, ಪುರುಷೊತ್ತಮ್, ಬಸವರಾಜು, ವಸಂತ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *