Tag: Kodagu

ಕೊಡಗಲ್ಲಿ 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ
ಮೈಸೂರು

ಕೊಡಗಲ್ಲಿ 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ

November 1, 2019

ಬೆಂಗಳೂರು, ಅ.31(ಕೆಎಂಶಿ)- ಕೊಡಗಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆಯುಳ್ಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲು ಸಂಪುಟ ಸಭೆ ನಿರ್ಧರಿಸಿದೆ. ಹಾಗೆಯೇ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಬೆದರಿಕೆಗೆ ರಾಜ್ಯ ಸರ್ಕಾರ ಮಣಿದಿಲ್ಲ. ಚಿಕ್ಕಬಳ್ಳಾ ಪುರದಲ್ಲಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ಆರಂಭಿಸಲು ಇಂದಿಲ್ಲಿ ಸೇರಿದ್ದ ಸಂಪುಟ ಸಭೆ ಅನು ಮತಿ ನೀಡಿದೆ. ಕಳೆದ ಸಂಪುಟ ಸಭೆಯಲ್ಲಿ ಸಮಾ ಲೋಚನೆ ನಡೆಸಿ, ಅನುಮತಿ ನೀಡಿದ್ದರೂ, ಇಂದು ಮತ್ತೆ ಕಾಲೇಜು ಪ್ರಾರಂಭಿಸಲು ಅನುಮೋದನೆ ನೀಡಿದೆ. ಇದೇ ಸಂದರ್ಭದಲ್ಲಿ…

ಕೊಡಗಿನ ನಾಲ್ವರ ದಾರುಣ ಸಾವು
ಮೈಸೂರು

ಕೊಡಗಿನ ನಾಲ್ವರ ದಾರುಣ ಸಾವು

October 2, 2019

ಮಡಿಕೇರಿ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಳ್ಯ ಸಮೀಪ ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಮಂಗಳ ವಾರ ಮಧ್ಯಾಹ್ನ ನಡೆದಿದೆ. ಕೊಡಗಿನ ನಾಪೋಕ್ಲು ಸಮೀಪದ ಕೊಟ್ಟ ಮುಡಿ ನಿವಾಸಿಗಳಾದ ಹಚ್ಚಯಾ ಹಾಜಿ (80), ಮಕ್ಕಳಾದ ಇಬ್ರಾಹಿಂ(45), ಉಮ್ಮರ್ (50), ಹ್ಯಾರಿಸ್(45) ಮೃತಪಟ್ಟ ವರು. ಮತ್ತೋರ್ವ ವ್ಯಕ್ತಿ ಉಮ್ಮರ್ ಫಾರುಕ್ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ….

ಕೊಡಗಿನಲ್ಲಿ ಭಾರೀ ಮಳೆಯಾಯ್ತು, ನೆರೆ ಬಂದಾಯ್ತು, ಗುಡ್ಡವು ಕುಸಿದಿದ್ದೂ ಆಯ್ತು, ಈಗ ಉರುಳುತ್ತಿವೆ ಬಂಡೆಗಳು
ಮೈಸೂರು

ಕೊಡಗಿನಲ್ಲಿ ಭಾರೀ ಮಳೆಯಾಯ್ತು, ನೆರೆ ಬಂದಾಯ್ತು, ಗುಡ್ಡವು ಕುಸಿದಿದ್ದೂ ಆಯ್ತು, ಈಗ ಉರುಳುತ್ತಿವೆ ಬಂಡೆಗಳು

September 15, 2019

ಮಡಿಕೇರಿ, ಸೆ.14-ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಪೆರಾಜೆ ಗ್ರಾಮದ ಕೋಳಿಕಲ್ಲು ಮಲೆ ಬೆಟ್ಟದಿಂದ ಭಾರೀ ಬಂಡೆ ಉರುಳಿ ಬಿದ್ದಿರುವ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ. ಬೆಟ್ಟದ ತಪ್ಪಲಿ ನಲ್ಲಿ ಹಲವಾರು ಕುಟುಂಬಗಳು ನೆಲೆ ನಿಂತಿದ್ದು, ನೂರಾರು ಗ್ರಾಮಸ್ಥರು ಜೀವ ಭಯ ಎದುರಿಸುತ್ತಿದ್ದಾರೆ. ಭಾಗಮಂಡಲ ಅರಣ್ಯ ವ್ಯಾಪ್ತಿಯ ಈ ಪ್ರದೇಶ ಹಚ್ಚ ಹಸುರಿನ ಶೋಲಾ ಕಾಡು ಗಳಿಂದ ಆವೃತ್ತವಾಗಿದ್ದು, ಬೆಟ್ಟದ ಮೇಲಿಂದ ಉರುಳಿದ ಬೃಹತ್ ಗಾತ್ರದ ಬಂಡೆಗಳು ಅರಣ್ಯದೊಳಗಿನ ಮರಗಳ ನೆಲಸಮಗೊಳಿಸಿ, ಭಾರೀ ಮರ ತಡೆದು ನಿಂತಿವೆ….

ಕೊಡಗಿನ ತೋರಾ ಗ್ರಾಮದ ಭೂಕುಸಿತ ಪ್ರದೇಶದಲ್ಲಿ ಕಾರ್ಯಾಚರಣೆ ಸ್ಥಗಿತ
ಮೈಸೂರು

ಕೊಡಗಿನ ತೋರಾ ಗ್ರಾಮದ ಭೂಕುಸಿತ ಪ್ರದೇಶದಲ್ಲಿ ಕಾರ್ಯಾಚರಣೆ ಸ್ಥಗಿತ

September 2, 2019

ಮಡಿಕೇರಿ, ಸೆ.1- ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿದು ಇವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದು, ಇತರ 4 ಮಂದಿ ಇಂದಿಗೂ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆ ಸಂಭವಿಸಿ ಇಂದಿಗೆ 23 ದಿನಗಳೇ ಕಳೆದಿದ್ದು, ನಾಪತ್ತೆಯಾದ ಇತರ 4 ಮಂದಿಗಾಗಿ ನಡೆಸ ಲಾಗುತ್ತಿದ್ದ ಶೋಧ ಕಾರ್ಯವನ್ನು ತಾತ್ಕಾಲಿಕ ವಾಗಿ ಸ್ಥಗಿತ ಮಾಡಲಾಗಿದೆ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಗಿನ 10.30ರ ಸಮಯದಲ್ಲಿ ಘಟಿಸಿದ ಈ ಘೋರ ದುರಂತದಲ್ಲಿ ಹರೀಶ್ ಅವರ ಪತ್ನಿ 8 ತಿಂಗಳ ತುಂಬು…

ಕಾವೇರಿ ತವರು ತತ್ತರ: ಪ್ರವಾಹ ಭೀತಿಯಲ್ಲಿ ಕಂಗಾಲಾಗಿರುವ ಜನ
ಮೈಸೂರು

ಕಾವೇರಿ ತವರು ತತ್ತರ: ಪ್ರವಾಹ ಭೀತಿಯಲ್ಲಿ ಕಂಗಾಲಾಗಿರುವ ಜನ

August 11, 2019

ಮಡಿಕೇರಿ, ಆ.10- ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ.10ರ ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಘೋಷಣೆ ಮಾಡಲಾಗಿದ್ದ “ರೆಡ್ ಅಲರ್ಟ್” ಅನ್ನು ಮುಂದುವರೆಸಿದ್ದು, ಭಾರೀ ಮಳೆಯಿಂದಾಗಿ ಕ್ಷಣದಿಂದ ಕ್ಷಣಕ್ಕೆ ಕಾವೇರಿ ತವರಿನ ಪರಿಸ್ಥಿತಿ ಸಂಪೂರ್ಣ ವಿಷಮಕ್ಕೆ ತಿರುಗುತ್ತಿದ್ದು, ರಕ್ಷಣಾ ಕಾರ್ಯನಿರತ ಸಿಬ್ಬಂದಿಗಳೇ ಕಂಗಾಲಾಗಿದ್ದಾರೆ. ವಿರಾಜಪೇಟೆ, ಭಾಗಮಂಡಲ, ನಾಪೋಕ್ಲು ಪ್ರದೇಶ ಗಳಲ್ಲಿ ಭಾರೀ ಗಾಳಿ ಮಳೆ ಸಹಿತ ಭೂ ಕುಸಿತದ ಎಲ್ಲಾ ಸಾಧ್ಯತೆಗಳಿದ್ದು ಅಲ್ಲಿನ ನಿವಾಸಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು…

ಮೈಸೂರು ಅಗ್ನಿಶಾಮಕ ದಳದಿಂದ ಕೊಡಗಿಗೆ ರಕ್ಷಣಾ ಸಾಮಗ್ರಿ
ಮೈಸೂರು

ಮೈಸೂರು ಅಗ್ನಿಶಾಮಕ ದಳದಿಂದ ಕೊಡಗಿಗೆ ರಕ್ಷಣಾ ಸಾಮಗ್ರಿ

August 11, 2019

ಮೈಸೂರು,ಆ.10(ಆರ್‍ಕೆ)-ಭಾರೀ ಮಳೆಯಿಂದ ಪ್ರವಾಹಕ್ಕೆ ಸಿಲುಕಿರುವ ಕೊಡಗಿನ ಸಂತ್ರಸ್ತರನ್ನು ರಕ್ಷಿಸಲು ಮೈಸೂರಿನ ಅಗ್ನಿಶಾಮಕ ಠಾಣೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಉಪಕರಣ ಗಳೊಂದಿಗೆ ಧಾವಿಸಿದ್ದಾರೆ. ಕಾವೇರಿ, ಲಕ್ಷ್ಮಣತೀರ್ಥ, ಕೀರೆ ಪೋಲ್ ಮತ್ತು ಹಲವು ನದಿಗಳು ತುಂಬಿ ಹರಿ ಯುತ್ತಿರುವುದರಿಂದ ಉಂಟಾಗಿರುವ ಪ್ರವಾಹದಿಂದ ಸುತ್ತಲಿನ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಅಪಾಯ ದಲ್ಲಿ ಸಿಲುಕಿದ್ದಾರೆ. ಅವರ ನೆರವಿಗಾಗಿ ಮೈಸೂರಿನ ಅಗ್ನಿಶಾಮಕ ದಳ, ಎರಡು ವಾಹನಗಳಲ್ಲಿ ದೋಣಿ, 100 ಮೀಟರ್ ದೂರದವರೆಗೆ ಪ್ರಖರ ಬೆಳಕು ನೀಡುವ ಲೈಟ್‍ಗಳು, ಮರ ಕತ್ತರಿಸುವ ಗರಗಸ, ಜೀವರಕ್ಷಕ ಸಾಮಗ್ರಿಗಳನ್ನು…

ಕೊಡಗಿನಲ್ಲಿ ಮತ್ತೆ ಜಲ ಪ್ರಳಯ
ಮೈಸೂರು

ಕೊಡಗಿನಲ್ಲಿ ಮತ್ತೆ ಜಲ ಪ್ರಳಯ

August 9, 2019

ಮಡಿಕೇರಿ,ಆ.8-ಕೊಡಗಿನಲ್ಲಿ ರಣ ಭೀಕರ ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ರೌದ್ರ ರೂಪ ತಾಳಿವೆ. ಜಿಲ್ಲೆಯ ಹತ್ತು ಹಲವು ಗ್ರಾಮಗಳು ಜಲ ಪ್ರಳಯಕ್ಕೆ ತುತ್ತಾ ಗಿವೆ. ನೂರಾರು ಮಂದಿ ಇಂದಿಗೂ ನದಿ ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಕ್ಕಾಗಿ ಭಾರತೀಯ ಸೈನ್ಯದ ಯೋಧರ ಒಂದು ತಂಡ ಜಿಲ್ಲೆಗೆ ಆಗ ಮಿಸಿದ್ದು, ವಿವಿಧೆಡೆ ಸಿಲುಕಿರುವ ನಾಗರಿ ಕರ ಜೀವ ರಕ್ಷಣೆಯಲ್ಲಿ ತೊಡಗಿವೆ. ಜಿಲ್ಲೆಯಾದ್ಯಂತ ಆ.9ರ ಮಧ್ಯರಾತ್ರಿಯವ ರೆಗೂ “ರೆಡ್ ಅಲರ್ಟ್” ಘೋಷಿಸಲಾ ಗಿದ್ದು, ಕೊಡಗು ಮತ್ತೊಮ್ಮೆ…

ಕೊಡಗು, ಹಾಸನದಲ್ಲಿ ಮಳೆ ಆರ್ಭಟ
ಮೈಸೂರು

ಕೊಡಗು, ಹಾಸನದಲ್ಲಿ ಮಳೆ ಆರ್ಭಟ

August 8, 2019

ಮಡಿಕೇರಿ/ಹಾಸನ: ಕೊಡಗು ಹಾಗೂ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ರಣಭೀಕರ ಮಳೆ ಮುಂದುವರಿದ್ದು, ಕೊಡಗಿನಲ್ಲಿ ಒಂದೇ ದಿನದಲ್ಲಿ 200 ಮಿ.ಮೀ. ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಕೂಡ ಈ ಪ್ರಮಾಣದ ಮಳೆ ಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ಉಭಯ ಜಿಲ್ಲೆಯಾದ್ಯಂತ ಆ.9ರ ಮಧ್ಯ ರಾತ್ರಿಯವರೆಗೂ “ರೆಡ್ ಅಲರ್ಟ್” ಘೋಷಿಸಲಾಗಿದೆ. ಹಾಸನದ ಸಕಲೇಶ ಪುರ, ಅರಕಲಗೂಡು, ಆಲೂರು ಹಾಗೂ ಬೇಲೂರು ತಾಲೂಕಿನ ಕೆಲವೆಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಭಾರೀ ಗಾಳಿ ಮಳೆಗೆ ಮಡಿಕೇರಿ ಭಾಗ ಮಂಡಲದ…

ಕೊಡಗಲ್ಲಿ ‘ಮಳೆರಾಯ’ನ ಅಬ್ಬರ
ಮೈಸೂರು

ಕೊಡಗಲ್ಲಿ ‘ಮಳೆರಾಯ’ನ ಅಬ್ಬರ

August 7, 2019

ಮಡಿಕೇರಿ, ಆ.6- ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಭಾರೀ ಗಾಳಿ, ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾದ್ಯಂತ ಆ.7ರವರೆಗೆ ‘ಆರೆಂಜ್ ಅಲರ್ಟ್’ ಹಾಗೂ ಬುಧವಾರದಿಂದ ಆ.9ರವರೆಗೆ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ 204.4ಮಿ.ಮೀ.ಗೂ ಅಧಿಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಶ್ಲೇಷ ಮಳೆಯ ಆರ್ಭಟ ನೋಡಿದರೆ ಮತ್ತೆ ಪ್ರಾಕೃತಿಕ ವಿಕೋಪಗಳು ಘಟಿ ಸಲಿದೆಯೇ ಎಂಬ ಆತಂಕ ಕಾವೇರಿ ತವರಿನ ಜನರನ್ನು ಕಾಡುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ…

ಕೊಡಗಿನ ಸಂಸ್ಕೃತಿ ಅನಾವರಣಗೊಳಿಸಿದ ಸಂಸದ ಪ್ರತಾಪ್‍ಸಿಂಹ
ಮೈಸೂರು

ಕೊಡಗಿನ ಸಂಸ್ಕೃತಿ ಅನಾವರಣಗೊಳಿಸಿದ ಸಂಸದ ಪ್ರತಾಪ್‍ಸಿಂಹ

June 18, 2019

ನವದೆಹಲಿ: ನಾನು ಮೈಸೂರು-ಕೊಡಗು ಸಂಸದನಾಗಿದ್ದು, ವಿಶಿಷ್ಟ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಗಳನ್ನು ಹೊಂದಿರುವ ಕೊಡಗು ಸಂಸ್ಕೃತಿಯನ್ನು ಸಂಸತ್‍ನಲ್ಲಿ ಪ್ರಚುರಪಡಿಸಬೇಕಾಗಿರುವುದು ನನ್ನ ಕರ್ತವ್ಯವೆಂದು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಬಂದಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಾನು ಈ ಉಡುಗೆ ತೊಟ್ಟು ಬರಲು ನನ್ನ ಪತ್ನಿ ಅರ್ಪಿತಾ ಕಾರಣ ಎಂದು ಹೇಳಿದ ಅವರು, ಈ ಬಾರಿ ಸಂಸತ್ ಪ್ರವೇಶಿಸುವಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಉಡುಗೆ ತೊಡಬೇಕು. ಅದರಲ್ಲೂ ಕೊಡವರ ಉಡುಗೆ ತೊಡಬೇಕು ಎಂದು ಪತ್ನಿ ಅರ್ಪಿತ ಹೇಳಿದ್ದರೆಂದು ಪ್ರತಾಪ್…

1 2 3 76