ಕೊಡಗಿನಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್
ಕೊಡಗು

ಕೊಡಗಿನಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್

April 1, 2020

ಮಡಿಕೇರಿ, ಮಾ.31- ಮಡಿಕೇರಿಯಲ್ಲಿ ಮಂಗಳವಾರವೂ ಲಾಕ್‍ಡೌನ್ ಆದೇಶ ಕಟ್ಟು ನಿಟ್ಟಾಗಿ ಪಾಲನೆಯಾಗಿದೆ. ದಿನ ದಿಂದ ದಿನಕ್ಕೆ ಜಿಲ್ಲೆಯ ಜನರೂ ಕೂಡ ಕೊರೊನಾ ಮಹಾಮಾರಿಯ ಬಗ್ಗೆ ಜಾಗೃತಿಗೊಂಡಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸುತ್ತಿದ್ದಾರೆ. ಕೊರೊನಾ ಸೋಂಕು ತಗುಲಿರುವ ಒಂದು ಪ್ರಕರಣ ಕೊಡಗು ಜಿಲ್ಲೆಯಲ್ಲಿ ದೃಢಪಟ್ಟ ಬಳಿಕ ಕೊಡಗು ಜಿಲ್ಲಾಡಳಿತ ಸೋಂಕು ವ್ಯಾಪಿಸದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಕೂಡ ಕೈಜೋಡಿಸಿದ್ದಾರೆ.

ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯ ವರೆಗೆ ಹಾಲು ಮತ್ತು ದಿನ ಪತ್ರಿಕೆಗಳನ್ನು ಕೊಳ್ಳಲು ಮನೆಯಿಂದ ಹೊರ ಬರುವ ಮಂದಿ ನಿಗಧಿತ ಸಮಯಕ್ಕೆ ಸರಿಯಾಗಿ ಮನೆ ಸೇರಿಕೊಳ್ಳುತ್ತಿದ್ದಾರೆ. ಪೊಲೀಸರು ಕೂಡ ಗುಂಪು ಸೇರದಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಧ್ವನಿ ವರ್ಧಕದ ಮೂಲಕ ಘೋಷಣೆ ಮಾಡುತ್ತಿದ್ದು, ಅಂಗಡಿ ಮುಂಗಟ್ಟುಗಳ ಮುಂದೆ ವರ್ತಕರೇ ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಗೆರೆಗಳನ್ನು ಹಾಕಿದ್ದಾರೆ.

ಔಷಧಿ ಮಳಿಗೆಗಳು ಲಾಕ್‍ಡೌನ್ ನಿಂದ ಸಂಪೂರ್ಣ ವಿನಾಯಿತಿ ಪಡೆದಿ ದ್ದರೂ ಕೂಡ ಜನರಿಲ್ಲದೇ, ನಗರದ ಬಹುತೇಕ ಔಷಧಿ ಮಳಿಗೆಗಳು ಕೂಡ ಬಂದ್ ಆಗಿವೆ. ಸರಕಾರಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದರೂ ಕೂಡ ದೂರದ ಊರುಗಳಿಂದ ಬಸ್‍ಗಳನ್ನೇರಿ ಬರುವ ಸಿಬ್ಬಂದಿಗಳು ಕಚೇರಿಗೆ ಬಾರದೇ ದೂರವೇ ಉಳಿದು ಕೊಂಡಿದ್ದಾರೆ. ಆದರೆ ಈ ಸಿಬ್ಬಂದಿ ಗಳಿಗೆ ತಮ್ಮ ಸ್ಥಾನಗಳನ್ನು ಬಿಡದಂತೆ, ಯಾವ ಸಂದರ್ಭದಲ್ಲಾದರೂ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಸ್ಪಷ್ಟ ಸಂದೇಶ ಜಿಲ್ಲಾಡಳಿತ ನೀಡಿದೆ.

ಇನ್ನು ನಗರದಲ್ಲಿ ಜನ ಸಂಚಾರ ಸಂಪೂರ್ಣ ಸ್ಥಬ್ದವಾಗಿದ್ದು, ನಗರದ ರಸ್ತೆಗಳಲ್ಲಿ ನೀರವ ಮೌನ ಆವರಿಸಿದೆ. ಆಟೋ, ಟ್ಯಾಕ್ಸಿ, ಜೀಪು, ಲಾರಿ, ಬಾಡಿಗೆ ದ್ವಿಚಕ್ರ ವಾಹನಗಳು ನಿಂತಲ್ಲೇ ನಿಂತು ಕೊಂಡಿದ್ದು, ಇದನ್ನೇ ನಂಬಿ ದುಡಿಯು ವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕ ರಿಗೆ ಕುಳಿತು ಕೊಂಡು ಆಹಾರ ಸೇವಿಸಲು ನಿರ್ಬಂಧ ವಿದ್ದು, ಕೇವಲ ಪಾರ್ಸಲ್ ಗಳನ್ನು ಮಾತ್ರವೇ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಆದರೆ ಈ ವ್ಯವಸ್ಥೆಯಿಂದಾಗಿ ಹೋಟೆಲ್‍ಗಳ ಕಡೆ ಮುಖ ಮಾಡದ ಹಿನ್ನೆಲೆಯಲ್ಲಿ ಹೋಟೆಲ್ ಗಳು ಕೂಡ ಬಾಗಿಲು ಹಾಕಿಕೊಂಡಿವೆ.

Translate »