ಕೆ.ಆರ್.ಪೇಟೆ: ವಾರದಲ್ಲಿ 4 ದಿನ ಮಾತ್ರ ದಿನಸಿ, ತರಕಾರಿ ಮಾರಾಟ ತಹಶೀಲ್ದಾರ್ ಎಂ. ಶಿವಮೂರ್ತಿ
ಮಂಡ್ಯ

ಕೆ.ಆರ್.ಪೇಟೆ: ವಾರದಲ್ಲಿ 4 ದಿನ ಮಾತ್ರ ದಿನಸಿ, ತರಕಾರಿ ಮಾರಾಟ ತಹಶೀಲ್ದಾರ್ ಎಂ. ಶಿವಮೂರ್ತಿ

April 1, 2020

ಕೆ.ಆರ್.ಪೇಟೆ, ಮಾ.31- ಕೊರೊನಾ ಸೋಂಕು ತಡೆಗೆ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿ ವಾರ್ಯವಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಕೆ.ಆರ್.ಪೇಟೆ ಪಟ್ಟಣ ದಲ್ಲಿ ವಾರಕ್ಕೆ ನಾಲ್ಕು ದಿನ ಅಂದರೆ ಮಂಗಳ ವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಮಾತ್ರ ದಿನಸಿ ಅಂಗಡಿ ಹಾಗೂ ತರಕಾರಿ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿ ಇದೆ. ಉಳಿದ ದಿನ ಗಳಂದು ಕಡ್ಡಾಯವಾಗಿ ಬಂದ್ ಮಾಡುವ ಮೂಲಕ ಸಹಕಾರ ನೀಡಬೇಕು. ಸಾರ್ವ ಜನಿಕರು ತಡೆಗೆ ಏ.14ರವರೆಗೆ ಈ ನಿಯಮವನ್ನು ಪಾಲಿಸುವ ಮೂಲಕ ಕೊರೊನಾ ಸೋಂಕು ಬಾರದಂತೆ ತಡೆ ಯಲು ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಎಂ. ಶಿವಮೂರ್ತಿ ಅವರು ಮನವಿ ಮಾಡಿದರು.

ಪಟ್ಟಣದ ಮಿನಿವಿಧಾನ ಸೌಧದ ಕಂದಾಯ ನ್ಯಾಯಾಲಯದ ಸಭಾಂಗಣ ದಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಕೊರೊನಾ ನಾಲ್ಕನೇ ವಾರದಲ್ಲಿರುವ ನಾವು ಈಗ ಕಠಿಣ ವ್ರತದ ಮಾದರಿಯಲ್ಲಿ ಲಾಕ್‍ಡೌನ್ ಯಶಸ್ಸಿಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಮಾತ್ರ ದಿನಸಿ ಅಂಗಡಿ ಹಾಗೂ ತರಕಾರಿ ಮಾರಾಟದ ಅಂಗಡಿಗಳನ್ನು ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಬಾಗಿಲು ತೆರೆದು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಬೇಕು. ಸಾಮಾಜಿಕ ಅಂತರ ಕಾಯ್ದು ಕೊಳ್ಳದ ಅಂಗಡಿಗಳನ್ನು ಮುಲಾಜಿಲ್ಲದೆ ಏ.14ವರೆಗೆ ಬಂದ್ ಮಾಡಿ ಸೀಲ್ ಮಾಡ ಲಾಗುವುದು. ಪೆಟ್ರೋಲ್‍ಬಂಕ್‍ಗಳು ಹಾಗೂ ಮೆಡಿಕಲ್ ಸ್ಟೋರ್‍ಗಳು ವಾರದ ಎಲ್ಲಾ ದಿನಗಳು ಕಾರ್ಯನಿರ್ವಹಿಸಲಿವೆ. ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಅಗತ್ಯ ತುರ್ತು ಕೆಲಸಗಳಿಗೆ ಹೊರತುಪಡಿಸಿ ದರೆ ಸರ್ಕಾರವು ವಿತರಿಸುವ ಅಧಿಕೃತ ಪಾಸ್ ಇಲ್ಲದೇ ಪೆಟ್ರೋಲ್, ಡೀಸೆಲ್ ಹಾಕುವುದಿಲ್ಲ. ಅನಗತ್ಯವಾಗಿ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಮನೆಯಲ್ಲಿ ರದೇ ಹೊರಗಡೆ ಸುತ್ತಾಡುವ ಜನರ ವಾಹನ ಗಳನ್ನು ಸೀಜ್ ಮಾಡಿ ಏಪ್ರಿಲ್ 14ರ ನಂತರ ವಾಹನವನ್ನು ಬಿಡುಗಡೆ ಮಾಡಿ ಕೊಡಲಾಗುವುದು. ಕೊರೊನಾ ತಡೆಗೆ ತಮ್ಮ ಜೀವನದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಪೊಲೀಸರು, ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ಆರೋಗ್ಯ ಇಲಾಖೆಯ ನೌಕರರು, ಆಶಾ ಕಾರ್ಯಕರ್ತೆಯರು, ಪತ್ರಕರ್ತರಿಗೆ ಮಾತ್ರ ಪೆಟ್ರೋಲ್-ಡೀಸೆಲ್ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದ ಯಾರಿಗೂ ಪೆಟ್ರೋಲ್-ಡೀಸೆಲ್ ಸಿಗುವುದಿಲ್ಲ. ರೈತ ಬಾಂದವರು ಪಟ್ಟಣ ಎಪಿಎಂಸಿ ಮಾರುಕಟ್ಟೆಯಲ್ಲಿ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ತಂದು ಸ್ಥಳೀಯ ವರ್ತಕರಿಗೆ ಮಾರಾಟ ಮಾಡಬಹು ದಾಗಿದೆ. ಆದರೆ ಹೊರಗಡೆ ಮಾರು ವಂತಿಲ್ಲ ಎಂದು ತಹಶೀಲ್ದಾರ್ ಶಿವಮೂರ್ತಿ ಸ್ಪಷ್ಠಪಡಿಸಿದರು. ವಿದೇಶ, ಮುಂಬೈ-ಬೆಂಗಳೂರಿನಿಂದ ಬಂದಿರುವವರು ಕಡ್ಡಾಯ ವಾಗಿ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು. ಉಳಿದವರು ಸುಖಾ ಸುಮ್ಮನೆ ಮನೆ ಯಿಂದ ಹೊರಗೆ ಬಂದರೆ ಪಟ್ಟಣದ ಹಾಸ್ಟೆಲ್‍ಗಳಲ್ಲಿ ವಿವಿಧ ವಸತಿ ಶಾಲೆಗಳಲ್ಲಿ ಖೈದಿಗಳಂತೆ ಕೂಡಿ ಹಾಕಲಾಗುತ್ತದೆ. ಮನೆಯಲ್ಲಿ ಕುಟುಂಬದವರೊಂದಿಗೆ ಸೇರಿ ಊಟೋಪಚಾರ ಮಾಡಿಕೊಂಡು ಸಂತೋಷದಿಂದ ಇರಬೇಕೋ. ಇಲ್ಲ ಖೈದಿಗಳಂತೆ ಹಾಸ್ಟೆಲ್‍ಗಳಲ್ಲಿ ಬಂದಿ ಯಾಗಿ ಇರಬೇಕೋ ನೀವೇ ತೀರ್ಮಾನಿಸಿ ಎಂದು ತಹಸೀಲ್ದಾರ್ ಶಿವಮೂರ್ತಿ ಅವರು ಯುವಕರಿಗೆ ಕಿವಿ ಮಾರು ಹೇಳಿದರು.

ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಪುರಸಭೆಯ ಅನುಮತಿಯ ಮೇರೆಗೆ ಹಾಗೂ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿಯವರ ಅನುಮತಿಯ ಮೇರೆಗೆ ಭಾನುವಾರ ಮಾತ್ರ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮಾಂಸ ಮಾರಾಟಗಾರರು ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಂಡು ರೋಗ ರುಜಿನಗಳು ಹರಡದಂತೆ ಎಚ್ಚರಿಕೆಯಿಂದ ಮಾಂಸ ಮಾರಾಟ ಮಾಡಬೇಕು ಎಂದು ತಹಶೀ ಲ್ದಾರ್ ಶಿವಮೂರ್ತಿ ಮನವಿ ಮಾಡಿದರು.

ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾ ಕರ್ ಅವರು ಮಾತನಾಡಿ, ಪಟ್ಟಣಕ್ಕೆ ನಿರ್ಧಿಷ್ಠ ಕಾರಣವಿಲ್ಲದೆ ಬರುವ ಬೈಕ್ ಮತ್ತು ಕಾರುಗಳನ್ನು, ಆಟೋಗಳನ್ನು ಸೀಜ್ ಮಾಡಲಾಗುವುದು. ನಾಲ್ಕೂ ದಿಕ್ಕಿನಲ್ಲಿ ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದೆ. ತುರ್ತು ಸಮಸ್ಯೆಗಳಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಅನುಮತಿ ತಂದರೆ ಮಾತ್ರ ಪಟ್ಟಣದ ಒಳಗಡೆ ಬಿಡಲಾಗು ವುದು ಉಳಿದ ಯಾರಿಗೂ ಅವಕಾಶವಿಲ್ಲ. ಈಗಾಗಲೇ ಸುಮ್ಮನೆ ಪಟ್ಟಣದಲ್ಲಿ ಸುತ್ತುತ್ತಿದ್ದ ಹಲವು ಬೈಕುಗಳನ್ನು ಸೀಜ್ ಮಾಡಲಾಗಿದೆ. ಹಾಗಾಗಿ ಯಾರೂ ಸಹ ಸುಮ್ಮನೆ ಸುತ್ತಾಡಲು ಪಟ್ಟಣಕ್ಕೆ ಬರಬೇಡಿ ಗ್ರಾಮಗಳಲ್ಲಿ ವಿನಾಕಾರಣ ಸುತ್ತಾಡಬೇಡಿ. ಇದನ್ನು ಮೀರಿದರೆ ಅಂತಹ ಬೈಕುಗಳನ್ನು ಜಪ್ತಿ ಮಾಡಲಾಗುವುದು ಅಲ್ಲದೆ ಬೈಕ್ ಸವಾರರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗುವುದು ಎಂದು ಸುಧಾಕರ್ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎನ್.ಸುಧಾಕರ್ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಬಿಸಿಎಂ ಅಧಿಕಾರಿ ಎಂ.ಎನ್.ವೆಂಕ ಟೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ಮನುಕುಮಾರ್ ಉಪಸ್ಥಿತರಿದ್ದರು.

Translate »