ಕೆ.ಆರ್.ಪೇಟೆ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ನಮನ
ಮಂಡ್ಯ

ಕೆ.ಆರ್.ಪೇಟೆ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ನಮನ

January 23, 2019

ಕೆ.ಆರ್.ಪೇಟೆ: ಪಟ್ಟಣ ಸೇರಿ ದಂತೆ ತಾಲೂಕಿನ ವಿವಿಧೆಡೆ ವಿವಿಧ ಸಂಘ ಟನೆಗಳ ಪದಾಧಿಕಾರಿಗಳು ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಶ್ರೀಶಿವಕುಮಾರಶ್ರೀ ಗಳಿಗೆ ಗೌರವ ನಮನ ಸಲ್ಲಿಸಿದವು.

ತಾಲೂಕು ವೀರಶೈವ, ಲಿಂಗಾಯಿತ ಮಹಾ ಸಭಾ: ಸಿದ್ಧಗಂಗಾ ಶ್ರೀಮಠದ ಪೀಠಾಧ್ಯಕ್ಷ ಡಾ.ಶಿವಕುಮಾರಶ್ರೀಗಳಿಗೆ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಶಿವೈಕ್ಯರಾದ ಶ್ರೀಗಳಿಗೆ ಕಂಬನಿ ಮಿಡಿದು ಗೌರವ ಸಲ್ಲ್ಲಿಸಿದರು.
ಈ ವೇಳೆ ತಾಲೂಕು ದಲಿತ ಸಂಘ ಟನೆಗಳ ಅಧ್ಯಕ್ಷ ಡಾ.ಬಸ್ತಿರಂಗಪ್ಪ, ತಾಲೂಕು ವೀರಶೈವ ಯುವ ವೇದಿಕೆ ಅಧ್ಯಕ್ಷ ಡಾ.ಕೆ. ಎಸ್.ರಾಜೇಶ್, ರೈತ ಸಂಘದ ನಾಗಣ್ಣ ಗೌಡ, ಹಸಿರು ಸೇನೆ ಎ.ಸಿ.ವೆಂಕಟೇಶ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯ ದರ್ಶಿ ಎಸ್.ಆರ್.ದಿನೇಶ್, ವೀರಶೈವ ಮಹಾಸಭಾ ತೋಟಪ್ಪಶೆಟ್ಟಿ, ಮಾದೇಶ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಪ್ರೊ.ಎಂ.ಕೆ.ರಮೇಶ್, ಕನ್ನಡಪರ ಹೋರಾಟಗಾರ ಎ.ಸಿ.ಕಾಂತ ರಾಜು, ಮುಸ್ಲಿಂ ಯುವ ಜಾಗೃತಿ ವೇದಿಕೆ ಸಂಚಾಲಕ ಸಮೀರ್ ಅಹಮದ್, ತಾಪಂ ಸದಸ್ಯ ಮಾಧವಪ್ರಸಾದ್ ಸೇರಿ ದಂತೆ ಮತ್ತಿತರಿದ್ದರು.

ಸಂತೇಬಾಚಹಳ್ಳಿ ಕ್ರಾಸ್: ತಾಲೂಕಿನ ಸಂತೇಬಾಚಹಳ್ಳಿ ಕ್ರಾಸ್‍ನ ಬಿಜಿಎಸ್ ವೃತ್ತ ದಲ್ಲಿ ಸಿದ್ಧಗಂಗಾಶ್ರೀ, ಚುಂಚಶ್ರೀಗಳ ಅಭಿಮಾನಿ ಗಳು ಲಿಂಗೈಕ್ಯ ಸಿದ್ಧಗಂಗಾಶ್ರೀಗಳ ಭಾವಚಿತ್ರ ವನ್ನಿಟ್ಟು ಪುಷ್ಪ ನಮನ, ಮೌನಾಚರಣೆ ಮೂಲಕ ಅಗಲಿದ ಚೇತನಕ್ಕೆ ಗೌರವ ಸಲ್ಲಿಸಿದರು. ಮುಖಂಡರಾದ ಶಿವಣ್ಣ, ಎಲ್‍ಐಸಿ ಜಗದೀಶ್, ಮನ್‍ಮುಲ್ ಮಾಜಿ ನಿರ್ದೇ ಶಕ ನಂಜುಂಡೇಗೌಡ, ಪರಮೇಶ್, ರುದ್ರೇಶ್, ಶ್ರೀನಿವಾಸ್, ಲಕ್ಷ್ಮಣ್, ಹರೀಶ್, ಸುರೇಶ್, ನಾಗೇಶ್, ಗಣೇಶ್ ಮತ್ತಿತರರು ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಗಳ ತ್ರಿವಿಧ ದಾಸೋಹದ ಸಾಧನೆ ಸ್ಮರಿಸಿದರು.

ಟಿಎಪಿಸಿಎಂಎಸ್: ಪಟ್ಟಣದ ಟಿಎಪಿಸಿ ಎಂಎಸ್ ಲಿಂಗೈಕ್ಯರಾದ ಸಿದ್ಧಗಂಗಾಶ್ರೀಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು. ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್ ಸಿದ್ಧಗಂಗಾ ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಸುಮಾರು 111ವರ್ಷಗಳ ಸಾರ್ಥಕ ಬದುಕು ನಡೆಸುವ ಮೂಲಕ ದೈವ ಸ್ವರೂಪಿಯಾಗಿ ಅಕ್ಷರ, ಅನ್ನ, ಆರೋಗ್ಯ ದಾಸೋಹಿಯಾಗಿ ಸರ್ವಶ್ರೇಷ್ಠ ಸೇವೆ ಸಲ್ಲಿಸುವ ಮೂಲಕ ಕೋಟ್ಯಾಂತರ ಜನರ ಮನಸ್ಸನ್ನು ಗೆದ್ದಿರುವ ಸಿದ್ದಗಂಗಾಶ್ರೀಗಳು ಶಿವೈಕ್ಯರಾಗಿದ್ದು ತುಂಬಲಾಗದ ನಷ್ಟ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಸಂಸ್ಥೆ ಉಪಾಧ್ಯಕ್ಷ ಬಿ.ಎ. ಸುರೇಶ್, ನಿರ್ದೇಶಕರಾದ ಜಯರಾಮೇ ಗೌಡ, ವಿ.ಡಿ.ಹರೀಶ್, ಡಾ.ಜೆ.ಪ್ರೇಮಕುಮಾರಿ, ಕೆ.ಟಿ.ತಿಮ್ಮೇಗೌಡ, ಹೆಚ್.ಟಿ.ಲೋಕೇಶ್, ನಾಗರಾಜು, ಕೆ.ಪುರುಷೋತ್ತಮ್, ಕಾರ್ಯ ದರ್ಶಿ ಎಸ್.ಬೋರೇಗೌಡ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದ ಹಾಜರಿದ್ದರು.

Translate »