ಶ್ರೀರಂಗಪಟ್ಟಣ, ಮಾ.31(ವಿನಯ್ ಕಾರೇಕುರ)- ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಜನರಿಗೆ ಮಾಸ್ಕ್, ಅಕ್ಕಿ ಮತ್ತು ತರಕಾರಿ ವಿತರಿಸಿ ಅವರು ಮಾತನಾಡಿದರು.
ಲಾಕ್‍ಡೌನ್ ವ್ಯವಸ್ಥೆ ಜಾರಿಯಾಗಿ ಇಂದಿಗೆ 9 ದಿನಗಳು ಕಳೆದಿದೆ, ರಾಜ್ಯದಾದ್ಯಂತ ಜನರು ಭಯಬೀತರಾಗಿದ್ದಾರೆ. ಸರ್ಕಾರ ಈವರೆವಿಗೂ ತಾಲೂಕು ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ಗೌನ್, ಸ್ಯಾನಿಟರಿ ವಸ್ತುಗಳು, ಮಾಸ್ಕ್ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳನ್ನು ನೀಡದಿರುವುದು ಆಶ್ಚರ್ಯ ಜೊತೆಗೆ ನೋವುಂಟಾ ಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕಿನಾ ದ್ಯಂತ ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕ ವಾಗಿ ದುಡಿಯುತ್ತಿರುವ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಮಾಧ್ಯಮ ಇತರ ಸ್ವಯಂ ಸೇವಕರ ಆರೋಗ್ಯದ ದೃಷ್ಠಿಯಿಂದ ಸ್ವತಃ 3.5 ಲಕ್ಷ ರೂ. ವೆಚ್ಚದ ಮೆಡಿಕಲ್ ಕಿಟ್, ಮಾಸ್ಕ್ ಇತರ ಸ್ಯಾನಿಟರಿ ವಸ್ತುಗಳ ಜೊತೆಗೆ ಕ್ಷೇತ್ರದ 50 ಸಾವಿರ ಸಾರ್ವಜನಿಕರಿಗೆ ಮಾಸ್ಕ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು. ಸರ್ಕಾರ ಯೋಜನೆ ರೂಪಿಸಿ ಜಾರಿಗೊಳಿಸುವುದು ತುಂಬಾ ವಿಳಂಭವಾಗಲಿದೆ ಹಾಗಾಗಿ ಜನಪ್ರತಿನಿಧಿಗಳು ಹಾಗೂ ಹಣವುಳ್ಳ ಶ್ರೀಮಂತರು ಸರ್ಕಾರಕ್ಕೆ ನೀಡು ವಂತಹ ದೇಣಿಗೆಯನ್ನು ನೇರವಾಗಿ ಸಾರ್ವಜನಿಕ ರಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಪಟ್ಟಣದ ಗಾಂಧಿನಗರ, ಬೂದಿ ಗುಂಡಿ, ರಂಗನಾಥನಗರ ಇತರ ಕಡೆ ತೆರಳಿ ಬಡ ಜನರಿಗೆ ಅಗತ್ಯ ವಸ್ತುಗಳನ್ನು ನೀಡಿದರು. ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಹಾಗೂ ತರಕಾರಿ ಹಂಚಿದರು. ಪ್ರತಿ ಮನೆಗೆ ಎರಡು ಮಾಸ್ಕ್ ನೀಡಲಾಯಿತು.
ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬೀನ್ಸ್, ಎಲೆ ಕೋಸು, ಹೂ ಕೋಸು, ಬದನೆ, ಟೊಮೆಟೊ, ಕುಂಬಳಕಾಯಿ ಇತರ ತರಕಾರಿ ವಿತರಣೆ ನಡೆಯಿತು. ಪಟ್ಟಣದ ಹೆಚ್ಚು ಜನದಟ್ಟಣೆಯ ಸ್ಥಳಗಳಲ್ಲಿ ಔಷಧ ಸಿಂಪಡಣೆ ಮಾಡಲಾಯಿತು. ಕೊರೊನಾ ವೈರಸ್ ಬಗ್ಗೆ ಜನರು ಭಯಪಡಬಾರದು. ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಜನರು ತಮ್ಮ ತಮ್ಮ ಗ್ರಾಮಗಳಿಗೆ ನಿಷೇಧ ವಿಧಿಸಬಾರದು ಎಂದು ಹೇಳಿದರು.
ಇದಕ್ಕೂ ಮುನ್ನ ಪಟ್ಟಣದ ಪುರಸಭೆ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕೊರೊನಾ ವೈರಸ್ ತಡೆಗಟ್ಟುವ ಸಂಬಂಧ ಮಾಹಿತಿ ಪಡೆದು ತಮ್ಮ ಸಲಹೆ ನೀಡಿದರು. ತಾಲೂಕಿನಾದ್ಯಂತ ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆಗೂಡಿ ಕೊರೊನಾ ವೈರಸ್ ವಿರುದ್ಧ ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿ ಕಾಣುತ್ತಿದೆ. ಪೊಲೀಸ್ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಈ ನೆಪದಲ್ಲಿ ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಬಾರದು. ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ದ್ವಿಚಕ್ರ ವಾಹನಗಳ ಚಕ್ರದ ಗಾಳಿ ಬಿಡುವ ಮೂಲಕ ತಿಳಿ ಹೇಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.