ಗೊಂದಿಹಳ್ಳಿ ಗ್ರಾಮಸ್ಥರಿಂದ ರಸ್ತೆ ಬಂದ್
ಕೊಡಗು

ಗೊಂದಿಹಳ್ಳಿ ಗ್ರಾಮಸ್ಥರಿಂದ ರಸ್ತೆ ಬಂದ್

April 1, 2020

ಕಿಕ್ಕೇರಿ, ಮಾ.31- ಕೊರೊನಾ ಭಯದಿಂದ ವೈರಾಣು ಗ್ರಾಮಕ್ಕೆ ನುಸುಳದಂತೆ ಹೋಬಳಿಯ ಗಡಿಭಾಗವಾದ ಗೊಂದಿಹಳ್ಳಿ ಗ್ರಾಮಕ್ಕೆ ಹೊರಗಿನಿಂದ ವ್ಯಕ್ತಿಗಳು ಬಾರದಂತೆ ಗ್ರಾಮಸ್ಥರು ರಸ್ತೆಗೆ ಕಲ್ಲುಮಣ್ಣು ಸುರಿದು ಬಂದ್ ಮಾಡಿದರು.

ಹೇಮಾವತಿ ನದಿಯ ಸೇತುವೆ ಮೇಲಿರುವ ಈ ರಸ್ತೆ ಸಂಪರ್ಕ ಕಡಿತದಿಂದ ಸಿಂಗಾಪುರ, ಹೊಳೆನರಸೀಪುರ, ಮಾದಾಪುರ, ಮತ್ತಿತರ ಗ್ರಾಮಗಳಿಗೆ ತೆರಳಲು ಕೊಂಡಿಯಾಗಿದ್ದ ರಸ್ತೆ ಸಂಪರ್ಕ ಕಡಿತವಾಯಿತು. ಅಗತ್ಯ ಸೇವೆ ವಾಹನಗಳು ಈ ಮಾರ್ಗವಾಗಿ ನಿತ್ಯವು ಚಲಿಸಬೇಕಿದ್ದು ಆಹಾರ, ಮೂಲಭೂತ ಸೌಲಭ್ಯ ಕಲ್ಪಿಸಲು ವಾಹನ ಓಡಾಡದಂತೆ ರಸ್ತೆ ಬಂದ್ ಆಗಿದ್ದ ಕಾರಣ ಚಡಪಡಿಸುವಂತಾಯಿತು.

Translate »